ಹುಬ್ಬಳ್ಳಿ : ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಶೂ ಎಸೆಯಲು ಯತ್ನಿಸಿ ಅಮಾನತುಗೊಂಡಿರುವ ವಕೀಲ ರಾಕೇಶ್ ಕಿಶೋರ್ ವಿರುದ್ಧ ಹುಬ್ಬಳ್ಳಿಯಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಿತು.
ಹುಬ್ಬಳ್ಳಿಯ ಅಂಬೇಡ್ಕರ್ ವೃತ್ತದದಲ್ಲಿ ದಲಿತಪರ ಸಂಘಟನೆಗಳ ಜೊತೆ ವಿವಿಧ ಪ್ರಗತಿಪರ ಸಂಘಟನೆಗಳು ಸಹ ಭಾಗಿಯಾಗಿ ಘನ ಸರ್ವೊಚ್ಛ ನ್ಯಾಯಾಲಯದ ಕಲಾಪ ನಡೆಯುವ ಸಂಧರ್ಭದಲ್ಲಿಯೇ ಸನಾತನ ಧರ್ಮದ ಹೆಸರಲ್ಲಿ ಕಿಶೋರ ರಾಕೇಶ ಎಂಬ ಮನುವಾದಿ ನಡೆಸಿದ ಅಪಮಾನಕರ ಕ್ರತ್ಯದ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಯಲ್ಲಿ ಮಾತನಾಡಿದ ಹೋರಾಟಗಾರರು ಸ್ವಾತಂತ್ರ‍್ಯ ಪೂರ್ವದ ಸಂವಿಧಾನ ಜಾರಿಯ ಪೂರ್ವದ ಭಾರತದ ಮನುವಾದಿಗಳ ಮನುಸ್ಥಿತಿ ಇಂದೂ ಸಹ ಬದಲಾಗಿಲ್ಲ ಎಂಬುದು ಈ ಹೀನ ದುಷ್ಕ್ರತ್ಯದಿಂದ ಬಯಲಾಗಿದ್ದು ಇಂತಹ ಸಂವಿಧಾನದ ಮೇಲಿನ ಅಕ್ರಮ ಆಕ್ರಮಣವನ್ನ ನಾವು ಪ್ರಬಲವಾಗಿ ವಿರೋಧಿಸುತ್ತೇವೆ ಎಂದರು.
ದೇಶದಲ್ಲಿ ಆಢಳಿತಾರೂಢ ಸಮ್ಮಿಶ್ರ ಸರ್ಕಾರದ ಬಹುದೊಡ್ಡ ಪಕ್ಷ ಭಾಜಪ ವಾಗಿದ್ದು ಮನುವಾದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷ ಕುಮ್ಮಕ್ಕೂ ಕೇಂದ್ರ ಸರ್ಕಾರದ್ದಿದೆ ಎಂಬುದಕ್ಕೂ ಸಹ ಈ ಪ್ರಕರಣ ಸಾಕ್ಷಿಯಾಗಿದ್ದು
ಈ ಪ್ರಕರಣದ ಆರೋಪಿ ಕಿಶೋರ ರಾಕೇಶ ಹೇಳೋ ಹಾಗೆ ಸನಾತನ ಧರ್ಮಕ್ಕೆ ಮಾಡುವ ಅಪಮಾನ ಸಹಿಸಲ್ಲ ಅನ್ನೋ ಮಾತು ಕೇಳಿದರೆ ಈ ದೇಶದಲ್ಲಿ ಇಂತಹ ಗೋಡ್ಸೆ ಮನುಸ್ಥಿತಿಯು ಕಳೆದ ಹತ್ತು ವರ್ಷಗಳಿಂದ ತಾಂಡವವಾಡುತ್ತಿದ್ದು ಇದೇ ಸನಾತನ ಹಿಂದೂ ಧರ್ಮದ ಅನೇಕ ದುಷ್ಟರು ನಡೆಸಿದ ಅಪರಾಧಗಳು ಈ ದುಷ್ಟ ಸನಾತನಿ ಕಿಶೋರನಿಗೆ ಅಪರಾಧ ಮತ್ತು ಅಪಮಾನ ವೆನಿಸಲಿಲ್ಲವೇ ? ಎಂಬುದನ್ನ ಇಲ್ಲಿ ಪ್ರಶ್ನಿಸಬೇಕಾಗುತ್ತದೆ ಎಂದರು.
ಗುರುನಾಥ ಉಳ್ಳಿಕಾಶಿ( ದಲಿತ ಸಂಘಟನೆ ಮುಖಂಡ)
ಇದು ನ್ಯಾಯಮೂರ್ತಿ ಗಳ ಮೇಲೆ ಮಾಡಿದ ದಾಳಿಯಲ್ಲ ,ಭಾರತದ 140 ಕೋಟಿ ಜನರ ಮೇಲಿನ ದಾಳಿಯಾಗಿದೆ. ಈ ಹಿಂದೆ ನಮ್ಮ ಪೂರ್ವಿಜರನ್ನ ನಡೆಸಿಕೊಂಡ ರೀತಿಯನ್ನ ನಾವು ಮರೆಯಬಾರದು ,ಮೊನ್ನೆ ನೂರು ವರ್ಷದ ಸಂಭ್ರಮ ಆಚರಣೆ ಮಾಡಿದ ಆರ್ ಎಸ್ ಎಸ್ ಸಂಘಟನೆ ಇಂದು ದೇಶದಲ್ಲಿ ಮನುಸ್ರ್ಮುತಿಯನ್ನ ಮತ್ತೆ ತರಲು ಹುನ್ನಾರು ನಡೆಸುತ್ತಿದೆ ಇದಕ್ಕೆ ಭಿಮ ಆರ್ಮಿ( ವಂಶಸ್ಥರು) ಅವಕಾಶ ಕೊಡುವದಿಲ್ಲ,
ಇನ್ನು ಬಿಜೆಪಿಯ ಭಾಸ್ಕರ್ ರಾವ್ ಅಂಬೇಡ್ಕರ್ ಬರೆದ ಸಂವಿಧಾನದ ಅಡಿಯಲ್ಲಿ ಸರ್ಕಾರಿ ಕೆಲಸ ಪಡೆದು ನಿವೃತ್ತಿ ನಂತರ ಇಂತಹ ನೀಚ ಹೇಳಿಕೆ ನೀಡಿರುವದು ಇವರ ಕೋಳಕು ಮನಸ್ಥಿತಿ ತೋರಿಸುತ್ತದೆ.ಭಾಸ್ಕರ ರಾವ್ ಹುಬ್ಬಳ್ಳಿಗೆ ಬಂದರೆ ನಾವು ಚಪ್ಪಲಿ ಸೇವೆ ಮಾಡಿ ಸ್ವಾಗತ ಮಾಡಿಕೊಳ್ಳುವದರ ಮುಖಾಂತರ ತಕ್ಕ ಉತ್ತರ ಕೋಡುತ್ತೆವೆ ಎಂದರು..
ಇನ್ನು ಈ ಪ್ರತಿಭಟನೆಯಲ್ಲಿ ಪ್ರೇಮನಾಥ್ ಚಿಕ್ಕತುಂಬಳ,ರೇವಣಸಿದ್ದಪ್ಪ,ಹಾಗು ರಾಜಶೇಖರ ಮೆಣಸಿನಕಾಯಿ,ಆರೀಫ್ ಭದ್ರಾಪೂರ ಹಾಗು ವಿವಿಧ ಸಂಘಟನೆ ಕಾರ್ಯಕರ್ತರು ಭಾಗಿಯಾಗಿದ್ದರು.




