ಬೆಳಗಾವಿ : ಪ್ರಸ್ತುತ ಸರ್ಕಾರಕ್ಕೆ ಯಾವ ಭಾಷೆಯಲ್ಲಿ ಹೇಳಬೇಕೋ ಅಂತ ಗೊತ್ತಾಗಲ್ಲ, ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಹೇಳಿದ್ರೆ ಅರ್ಥವಾಗಲ್ಲ, ಹಾಗಾಗಿ ಅವರದ್ದೇ ಆದ ಭಾಷೆಯಲ್ಲಿ ರಮೇಶ್ ಕುಮಾರ್ ಹೇಳಿದ್ದಾರೆ ಎಂದು ಶಾಸಕ ಸಿಎಂ ಇಬ್ರಾಹಿಂ ಅವರನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದವರು ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದರೂ, ಶಿಸ್ತಿನ ಕೇಸರಿ ನಾಯಕರು ಯಾಕೆ ಸುಮ್ಮಿನಿದ್ದಾರೆ ಎಂದು ಪ್ರಶ್ನಿಸಿದ ಅವರು, 12 ಪತಿವ್ರತ ಮಹಾರಾಜರು ಎಂದು ವ್ಯಂಗ್ಯವಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡರದ್ದು ವಿಡಿಯೋ ಇದೆ, ಸದಾನಂದಗೌಡು ಸದಾ ನಗ್ತಾ ಇರ್ತಾರೆ, ಯಾಕೆ ಕೋರ್ಟ್ ಹೋಗಿ ತಡೆಯಾಜ್ಞೆ ತಂದಿದ್ದರು, ಆದ್ರೂ ಕೂಡ ಬಿಜೆಪಿ ಮತ್ತು ಕೇಶವ ಕೃಪದವರು ಸುಮ್ಮನೆ ಇದ್ದಾರೆ ಎಂದು ಆರೋಪಿಸಿದರು. ರಮೇಶ್ ಕುಮಾರ್ ಬ್ರಾಹ್ಮಣರಾಗಿದ್ದರೂ ಕೂಡ ಅವರು, ಕೇಶವ ಕೃಪ ಮತ್ತು ಬಸವಾದಿ ಶರಣರ ನಡುವೆ ಇದ್ದಾರೆ ಎಂದು ಹೇಳಿದರು.
ರಮೇಶ್ ಕುಮಾರ್ ಹೇಳಿಕೆ ಸರಿಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೂ ಎಂಟು ಜನ ಹೆಣ್ಣು ಮಕ್ಕಳಿದ್ದಾರೆ, ರಮೇಶ್ ಕುಮಾರ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಅಂತ ಗೊತ್ತಿಲ್ಲ, ಸ್ಪೀಕರ್ ಅವರು ಆ ಸ್ಥಾನದಲ್ಲಿ ಕುಳಿತಾಗ ಅದನ್ನ ತೆಗೆದು ಹಾಕಬೇಕಿತ್ತು ಎಂದು ತಿಳಿಸಿದರು.




