ಸ್ಯಾಂಡಲ್‌ವುಡ್‌ಗೆ ಹೊಸ ‘ಆರಡಿ ಲಾಂಗ್’ ಶರತ್‌ ಎಂಟ್ರಿ! ಫೆ.13ಕ್ಕೆ ಬರ್ತಿದೆ ‘ಸ್ಟಾರ್’; ಮುಖ್ಯ ಪಾತ್ರವೊಂದರಲ್ಲಿ ಪತ್ರಕರ್ತ ವಾಸುದೇವ್!

ಗಾಂಧಿನಗರದಲ್ಲಿ ಈಗ ಹೊಸಬರ ಹವಾ ಜೋರಾಗಿದೆ. ಇದೇ ಫೆಬ್ರವರಿ 13ಕ್ಕೆ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸಂಪೂರ್ಣ ಹೊಸಬರೇ ಸೇರಿಕೊಂಡು ಕಟ್ಟಿರೋ ಸ್ಟಾರ್ ಸಿಂಬಲ್‌ ಇರೋ ಸಿನಿಮಾ ಅಬ್ಬರಿಸಲು ಬರ್ತಿದೆ. ಟೈಟಲ್‌ನಲ್ಲೇ ಸ್ಟಾರ್ ಸಿಂಬಲ್ ಇರೋ ಈ ಚಿತ್ರದ ಟ್ರೈಲರ್ ಈಗಾಗಲೇ ಎಲ್ಲಾ ಕಡೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಪಕ್ಕಾ ಬೆಂಗಳೂರು ರೌಡಿಸಂ ಸ್ಟೈಲ್‌ನಲ್ಲಿ ಮೂಡಿಬಂದಿರೋ ಈ ಚಿತ್ರ ಮಾಸ್ ಆಡಿಯನ್ಸ್‌ಗೆ ಕಿಕ್ ಕೊಡೋದು ಗ್ಯಾರಂಟಿ. ಜೊತೆಗೆ ಕ್ಲಾಸ್ ಆಡಿಯನ್ಸ್‌ಗೂ ಮನರಂಜನೆ ಕೊಡೋದ್ರಲ್ಲಿ ಡೌಟೇ ಬೇಡ.
ರಿಯಾಲಿಟಿ ಸ್ಟಾರ್ ಮತ್ತು ಪತ್ರಕರ್ತನ ಜುಗಲ್ ಬಂದಿ!
ಚಿತ್ರದ ನಾಯಕನಾಗಿ ‘ಪ್ಯಾಟೆ ಮಂದಿ ಕಾಡಿಗೆ ಬಂದ್ರು’ ರಿಯಾಲಿಟಿ ಶೋ ವಿನ್ನರ್ ಶರತ್ ಪ್ರಕಾಶ್ ಅಖಾಡಕ್ಕಿಳಿದಿದ್ದಾರೆ. ಜೊತೆಗೆ ಬಂಡವಾಳ ಕೂಡ ಶರತ್‌ ಪ್ರಕಾಶ್‌ ಹೂಡಿದ್ದಾರೆ. ನವ ಪ್ರತಿಭೆ ರಜತ ರಕ್ಷಾ ನಾಯಕಿಯಾಗಿ ಸಾಥ್ ನೀಡಿದ್ದಾರೆ. ವಿಶೇಷ ಅಂದ್ರೆ, ನ್ಯೂಸ್ 18 ಕನ್ನಡ ಡಿಜಿಟಲ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿರೋ ವಾಸುದೇವ್ ಅವರು ‘ಧ್ರುವ’ ಅನ್ನೋ ಪ್ರಮುಖ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ 9 ವರ್ಷಗಳಿಂದ ಪತ್ರಕರ್ತರಾಗಿರೋ ಇವರು ಈಗ ಬಣ್ಣ ಹಚ್ಚಿರೋದು ಕುತೂಹಲ ಮೂಡಿಸಿದೆ. ಪ್ರದೀಪ್ ಪರಾಕ್ರಮ ಮತ್ತು ಬಲರಾಮ್ ಸೇರಿ ಹಲವು ಹೊಸಬರೇ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಸ್ಮಶಾನ ಟು ರೌಡಿಸಂ ಕಥೆ!
ಸಾಮಾನ್ಯವಾಗಿ ರೌಡಿಸಂ ಮಾಡಿದವರು ಕೊನೆಗೆ ಸ್ಮಶಾನ ಸೇರ್ತಾರೆ. ಆದ್ರೆ ಇಲ್ಲಿ ಸ್ಮಶಾನದಿಂದಲೇ ರೌಡಿಸಂಗೆ ಬಂದವರ ಕಥೆಯನ್ನ ನಿರ್ದೇಶಕ ವಿಜಯಸೂರ್ಯ ಹೇಳಹೊರಟಿದ್ದಾರೆ. ವಿಕಾಸ್ ವಸಿಷ್ಠ ಅವರ ಮ್ಯೂಸಿಕ್ ಮತ್ತು ವಿನು ಮನಸ್ಸು ಅವರ ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್. ಶಶಿಧರ್ ಪುಟ್ಟೇಗೌಡ ಅವರ ಎಡಿಟಿಂಗ್ ಕೆಲಸ ಕೂಡ ಟ್ರೈಲರ್‌ನಲ್ಲಿ ಎದ್ದು ಕಾಣ್ತಿದೆ. ಒಟ್ಟಿನಲ್ಲಿ ಈ ‘ಸ್ಟಾರ್’ ಟೀಮ್ ಫೆಬ್ರವರಿ 13ಕ್ಕೆ ಥಿಯೇಟರ್‌ನಲ್ಲಿ ಧೂಳೆಬ್ಬಿಸೋ ಲಕ್ಷಣ ಕಾಣ್ತಿದೆ.

More News