ಸ್ಥಾನಮಾನ ಶಾಶ್ವತವಲ್ಲ ಭಾವುಕರಾದ ಸಿಎಂ, ಸಿಎಂಗೆ ಕೇಂದ್ರ ಸಚಿವರಾಗುವ ಯೋಗವಿದೆ ಸಚಿವ ನಿರಾಣಿ ಸ್ಪೋಟಕ ಹೇಳಿಕೆ

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸ್ವಕ್ಷೇತ್ರದಲ್ಲಿ ತುಂಬಾ ಭಾವುಕರಾಗಿದ್ದರು, ಗದ್ಗರಿತರಾಗಿದ್ದರು. ಯಾವುದೇ ಅಧಿಕಾರ, ಸ್ಥಾನಮಾನ ಶಾಶ್ವತವಲ್ಲ ಎಂಬ ಒಗಟು ರೀತಿಯಲ್ಲಿ ತಮ್ಮ ಮನಸ್ಸನಲ್ಲಿರುವುದನ್ನು ಹೇಳಿದ್ದಾರೆ. ಅಧಿಕಾರ ಶಾಶ್ವತವಲ್ಲ ಎಂಬ ಹೇಳಿಕೆ ಎಲ್ಲೂ ಅವರು ಸಿಎಂ ಸ್ಥಾನ ತ್ಯೆಜಿಸಲಿದ್ದಾರೆ ಎಂಬ ಅನುಮಾನ ಕ್ಷೇತ್ರದ ಜನರನ್ನು ಕಾಡಲು ಆರಂಭಿಸಿದೆ.
ಇದರ ಮಧ್ಯೆ ಸಚಿವ ಮುರುಗೇಶ್ ನಿರಾಣಿ ಹೇಳಿರುವ ಹೇಳಿಕೆ ಅನುಮಾನಗಳಿಗೆ ಇನ್ನಷ್ಟು ಪುಷ್ಠಿ ನೀಡಿವೆ. ಅದೇ ಸಮಾರಂಭದಲ್ಲೇ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸಚಿವರಾಗಲಿದ್ದಾರೆ ಎಂಬ ಹೇಳಿಕೆ ಅನೇಕರ ಹುಬ್ಬೇರುವಂತೆ ಮಾಡಿದೆ. ವಿಧಾನಸಭೆ ಅಧಿವೇಶನ ಮುಗಿದ ಬಳಿಕ ಎಲ್ಲಾ ನಾಟಕಗಳಿಗೆ ತೆರೆಬೀಳಲಿವೆ ಎಂದು ಈ ಹಿಂದೆ ಬಿಜೆಪಿಯ ಅನೇಕ ಸಚಿವರು ಶಾಸಕರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು
ಮುಖ್ಯಮಂತ್ರಿ ಏನು ಹೇಳಿದ್ದಾರೆ
ಯಾವುದೂ ಶಾಶ್ವತ ಅಲ್ಲ. ಎಷ್ಟು ದಿನ ನಾವು ಬದುಕಿರುತ್ತೇವೋ ಗೊತ್ತಿಲ್ಲ, ಅದರಂತೆಯೇ ಈ ಸ್ಥಾನಮಾನಗಳೂ ಶಾಶ್ವತ ಅಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗದ್ಗರಿತರಾಗಿ ನುಡಿದರು. ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಬಾವೋದ್ವೇಕರಾಗಿ ಹೇಳಿಕೆ ನೀಡಿದ್ದಾರೆ.


ಶಿಗ್ಗಾವಿ ಪಟ್ಟಣದಲ್ಲಿ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಕಂಚಿನ ಪುತ್ಥಳಿ ಅನಾವರಣ ಮತ್ತು ಪಂಮಸಾಲಿ ಸಮುದಾಯ ಭವನದ ಕಾಮಗಾರಿಗೆ ಅಡಿಗಲ್ಲು ಹಾಕುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ, ಈ ಅರಿವು ನನ್ನಲ್ಲಿ ಪ್ರತಿಕ್ಷಣವೂ ಇರುತ್ತದೆ ಎಂದರು.
ಕೆಲವು ಊರುಗಳಿಗೆ ತನ್ನದೇ ಆದ ಐತಿಹಾಸಿಕ ಕುರುಹುಗಳಿವೆ, ಇದು ಸಂತರ ನಾಡು, ವೈಚಾರಿಕತೆ, ವಿಭಿನ್ನ ಚಿಂತನೆ ಮಾಡಿದ ಕನಕದಾಸರು, ಶಿಶುನಾಳ ಷರೀಫರು ಮುಂತಾದವರು ಇದ್ದಂತಹ ನಾಡು, ಅದಕ್ಕೆ ಶಿಗ್ಗಾವಿ ಅಪರೂಪದ ಮಣ್ಣಿನ ಗುಣ‌ ಹೊಂದಿರುವ ಕ್ಷೇತ್ರವಾಗಿದೆ, ಈ ವೈಚಾರಿಕತೆ ಹಿಡಿದುಕೊಂಡು ಎಲ್ಲರೂ ಒಂದುಗೂಡಿ‌ ಕೆಲಸ ಮಾಡಿದರೆ ಗೆಲುವು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನಿಮ್ಮೆಲ್ಲರ ಆಶೀರ್ವಾದದಿಂದ ಸಿಎಂ ಆಗಿದ್ದೇನೆ, ಈ ಕ್ಷೇತ್ರದ ಹೊರಗೆ ನಾನು ಗೃಹ ಮಂತ್ರಿ, ನೀರಾವರಿ ಸಚಿವ, ಸಿಎಂ. ಆದರೆ, ಶಿಗ್ಗಾವಿಗೆ ಬಂದಾಗ ಬರೀ ಬಸವರಾಜ ಬೊಮ್ಮಾಯಿ ಅಷ್ಟೆ ಎಂದು ತಮ್ಮ ಸ್ವಕ್ಷೇತ್ವದ ಮತದಾರರಿಗೆ ಮನವರಿಕೆ ಮಾಡಿದರು. ಇನ್ನು ಮುಂದುವರೆದು ಮಾತನಾಡಿದ ಅವರು ಇಲ್ಲಿ ಬಸವರಾಜ ಬೊಮ್ಮಾಯಿ ಅನ್ನೋದಷ್ಟೆ ಶಾಶ್ವತ, ಉಳಿದೆಲ್ಲಾ ಅಧಿಕಾರ ಪದವಿ ಶಾಶ್ವತ ಅಲ್ಲ, ನಿಮಿತ್ತ ಮಾತ್ರ ಎಂದು ಗದ್ಗರಿತರಾಗಿ ಹೇಳಿದರು.
ನಾನು ನಿಮ್ಮೂರಿಗೆ ಬಂದಾಗ ರೊಟ್ಟಿ ತಿನ್ನಿಸಿದ್ದೀರಿ, ನವಣಕ್ಕಿ ಅನ್ನ ಮಾಡಿ ತಿನಿಸಿದಿರಿ, ನಾನು ಅದನ್ನ ಮರೆಯೋಕೆ ಸಾಧ್ಯವಿಲ್ಲ ಎಂದು ಮತ್ತೊಮ್ಮೆ ಗದ್ಗದಿತರಾದರು. ನಾನು ಭಾವನಾತ್ಮಕವಾಗಿ ಮಾತಾಡಬಾರದು ಅಂತ ಬಹಳ ಪ್ರಯತ್ನ ಮಾಡ್ತಿದ್ದೆ, ಆದರೆ ನಿಮ್ಮನ್ನು ನೋಡಿದಾಗ ಆ ಭಾವನೆ ಬರ್ತಾವೆ ಎಂದರು.


ಇದೇ ಸಂದರ್ಭದಲ್ಲಿ ಸಚಿವ ಮುರುಗೇಶ್ ನಿರಾಣಿ ಅವರು ಬಸವರಾಜ ಬೊಮ್ಮಾಯಿ ಅವರನ್ನು ಪೂರ್ಣಾವಧಿ ಸಿಎಂ ಆಗಿ ಮುಂದುವರೆಯುತ್ತಾರೆ, ಆದರೆ, ಅವರ ತಂದೆ ಎಸ್ ಆರ್ ಬೊಮ್ಮಾಯಿ ಕೇಂದ್ರ ಮಂತ್ರಿಯಾದ ರೀತಿ ಪುತ್ರ ಬೊಮ್ಮಾಯಿ ಅವರ್ನುಕೂಡ ಕೇಂದ್ರ ಮಂತ್ರಿಯಾಗಲಿದ್ದಾರೆ ಎಂದರು.
ಇದಕ್ಕೆ ಕಾರ್ಯಕ್ರಮದಲ್ಲಿದ್ದ ಕೂಡಲ ಸಂಗಮ ಬಸವರಾಜ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಬೊಮ್ಮಾಯಿ ಅವರು ಕೇಂದ್ರ ಮಂತ್ರಿಯಾಗುವ ಅಗಶ್ಯಕತೆಯಿಲ್ಲ, ಅವರು 2023ರ ನಂತರವೂ ಮುಖ್ಯಮಂತ್ರಿಯಾಗಿಯೇ ಮುಂದುವರೆಯಲಿ ಎಂದರು. ಒಟ್ಟಾರೆಯಾಗಿ ತೆರೆಮರೆಯಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಬಸಲಾವಣೆಯ ಕಸರತ್ತಿಗೆ ಸಿಎಂ ಬಸವರಾಜಬೊಮ್ಮಾಯಿ ಅವರ ಈ ಹೇಳಿಕೆ ಹೆಚ್ಚುಪುಷ್ಠಿ ನೀಡಿದಂತಾಗಿದೆ.

More News