ಆರೋಗ್ಯ ಸೌಲಭ್ಯ ವಿಸ್ತರಣೆಗೆ ಬೆಂಗಳೂರಿನಲ್ಲಿ ಜಾಗದ ಕೊರತೆ ಇದೆ : ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೆಂಗಳೂರು : ನಗರದಲ್ಲಿ ಜನಸಂಖ್ಯೆಗೆ ತಕ್ಕಂತೆ ಆರೋಗ್ಯ ಸೌಲಭ್ಯ ಗಳನ್ನು ಒದಗಿಸಲು ಜಾಗದ ಕೊರತೆ ಇದ್ದು,ಒಂದು ವೇಳೆ ಸ್ಥಳಾವಕಾಶ ಸಿಕ್ಕರೆ ಎಷ್ಟು ಆಸ್ಪತ್ರೆಗಳನ್ನಾದರೂ ಕಟ್ಟಲು ಸರಕಾರ ತಯಾರಿದೆ ಎಂದು ಐಟಿ-ಬಿಟಿ,ವಿಜ್ಞಾನ-ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ನಗರದಲ್ಲಿಂದು ಬೆಂಗಳೂರು ಉತ್ತರ ಜಿಲ್ಲೆಯ ಬಿಜೆಪಿ ಮಂಡಲ ವಿಭಾಗ ವು ಹಮ್ಮಿಕೊಂಡಿದ್ದ ಆರೋಗ್ಯ ಸ್ವಯಂ ಸೇವಕರ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು,ನಗರಕ್ಕೆ ಇನ್ನಷ್ಟು ಆರೋಗ್ಯ ಸೌಕರ್ಯಗಳು ಅಗತ್ಯ ಇವೆ.ಇರುವ ಜಾಗದಲ್ಲಿಯೇ ಅಭಿವೃದ್ಧಿ ಮಾಡುವ ಕೆಲಸವೂ ಆಗುತ್ತಿದೆ ಎಂದರು.

ಕೋವಿಡ್ ಸಂಕಷ್ಟ ಕಾಲದಲ್ಲಿ ಪಕ್ಷದ ಕಾರ್ಯಕರ್ತರು ಅತ್ಯುತ್ತಮ ವಾಗಿ ಕೆಲಸ ಮಾಡಿದ್ದಾರೆ.ಈಗಲೂ ಮಾಡುತ್ತಿದ್ದಾರೆ.ನಮ್ಮ ಸೇವಾ ಹೀ ಸಂಘಟನೆ ಮೂಲಕ ಆಗುತ್ತಿರುವ ಸೇವಾ ಕಾರ್ಯಗಳು ಶ್ಲಾಘನೀಯ. ಇದರಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ಅವರು ಮನವಿ ಮಾಡಿದರು.

ಪಕ್ಷದ ವರಿಷ್ಠರು ನಮ್ಮ ದೇಶದ ಎಲ್ಲ ಮಂಡಲ,ಬೂತ್ಗಳಲ್ಲಿ ಸೇವೆ ಮಾಡುವ ಸಂಕಲ್ಪದೊಂದಿಗೆ ನಮಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೊಣ ಎಂದು ಸಚಿವರು ಕರೆ ನೀಡಿದರು.

More News

You cannot copy content of this page