ಬೆಳಗಾವಿ : ಮುಖ್ಯಮಂತ್ರಿ ಪದವಿ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಶಾಸಕರು ಈಗಾಗಲೇ ತಮ್ಮ ರಹಸ್ಯ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಕಳೆದ ರಾತ್ರಿ ಸಚಿವ ಕೆ ಎಸ್ ಈಶ್ವರಪ್ಪ, ಬಸವರಾಜ ಪಾಟೀಲ್ ಯತ್ನಾಳ್, ಹಾಗೂ ಸಚಿವ ಮುರುಗೇಶ್ ನಿರಾಣಿ ನಡುವೆ ರಹಸ್ಯ ಮಾತುಕತೆ ನಡೆದಿದೆ.
ಆದರೆ, ಇದೊಂದು ಸಂಧಾನ ಸಭೆ ಎಂದು ಬಣ್ಣಿಸಲಾಗಿದೆ, ಮುಖ್ಯಮಂತ್ರಿ ಪದವಿಯನ್ನು ಧಕ್ಕಿಸಿಕೊಳ್ಳಲೇಬೇಕೆಂಬ ಉದ್ದೇಶದಿಂದ ಮುನ್ನುಗ್ಗುತ್ತಿರುವ ಸಚಿವ ಮುರುಗೇಶ್ ನಿರಾಣಿ, ಇದುವರೆಗೂ ತಮ್ಮ ವೈರಿ ಎಂದೇ ಬಿಂಬಿಸಲಾಗಿದ್ದ ಯತ್ನಾಳ್ ಅವರೊಂದಿಗೆ ಸಚಿವ ಈಶ್ವರಪ್ಪ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿದೆ ಎಂದ ತಿಳಿದುಬಂದಿದೆ.
ಈ ಕುರಿತು ಬಿಜೆಪಿ ಹಿರಿಯ ಶಾಸಕ ಬಸನಗೌಡ ಯತ್ನಾಳ್ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ್ದು, ಸಿಎಂ ಆಗುತ್ತೇನೆ ಎಂದು ಅನೇಕರು ಹಗಲು ಗನಸು ಕಾಣುತ್ತಿದ್ದಾರೆ, ಸೂಟು ಬೂಟು ಹೊಲಿಸಿಕೊಂಡು ಇದ್ದಾರೆ ಎಂದು ಸಿಎಂ ಪದವಿ ಪೈಪೋಟಿ ಪಕ್ಷದಲ್ಲಿ ಜೋರಾಗಿಯೇ ನಡೆಯುತ್ತಿದೆ ಎಂದು ಸೂಚ್ಯವಾಗಿ ತಿಳಿಸಿದರು.
ದೊಡ್ಡವರಿಗೆ ಹಣ ಕೊಟ್ಟಿದ್ದೇನೆ, ಪದವಿಗಾಗಿ ಹಣವನ್ನು ರಿಸರ್ವ್ ಇಟ್ಟಿದ್ದೇನೆ ಅಂತಿದ್ದಾರೆ, ಆದರೆ ಅವರ ಆಸೆಗಳು ಈಡೇರುವುದಿಲ್ಲ ಎಂದು ಹೇಳಿದ ಯತ್ನಾಳ್, ಅಲ್ಲಿ ಇರೋದು ನರೇಂದ್ರ ಮೋದಿಯವರು ಆದ್ದರಿಂದ ಇವರ ಯಾವ ಆಟಗಳು ನಡೆಯಲ್ಲ ಎಂದು ಯತ್ನಾಳ್ ಸಿಎಂ ಆಕಾಂಕ್ಷಿಗಳಿಗೆ ತಿರುಗೇಟು ನೀಡಿದ್ದಾರೆ.
ಇಂತ ಆಯೋಗ್ಯರನ್ನ ವರಿಷ್ಠರು ಸಿಎಂ ಮಾಡಲ್ಲ
ಹಣ ತೋರಿಸಿ ಸಿಎಂ ಆಗಲು ಹೊರಟ ಅಯೋಗ್ಯರನ್ನು ವರಿಷ್ಠರು ಮುಖ್ಯಮಂತ್ರಿ ಸ್ಥಾನ ನೀಡೋದಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ್, ಸಿಎಂಪದವಿ ಅನ್ನೋದನ್ನ ಬೋಗದ ವಸ್ತುಗಳನ್ನ ಮಾಡಿಕೊಂಡಿದ್ದಾರೆ, ಇವರು ದೊಡ್ಡ ದೊಡ್ಡ ಸಂಧಾನ ಮಾಡ್ತಿದ್ದಾರೆ, ಇಂತವರನ್ನ ಒಪ್ಪುವ ಕೀಳುಮಟ್ಟದ ರಾಜಕಾರಣಿ ನಾನಲ್ಲ ಎಂದು ಸ್ಪಷ್ಟಪಡಿಸಿದರು.
ಜನವರಿ ಎರಡನೇ ವಾರ ಸಿಎಂ ಬದಲಾವಣೆ
ಇಂತಹ ಆಯೋಗ್ಯರ ಜೊತೆ ನಾನು ಸೇರೋದಿಲ್ಲ ಎಂದು ತಿಳಿಸಿದ ಅವರು, ಮಂತ್ರಿ ಮಾಡುತ್ತೇನೆ, ಡಿಸಿಎಂ ಮಾಡುತ್ತೇನೆ ಎಂಬ ಆಮಿಷ ಒಡ್ಡುತ್ತಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ. ಎಲ್ಲರೂ ಜನವರಿ ೨ನೇ ವಾರದಲ್ಲಿ ಸಿಎಂ ಆಗ್ತೀನೆಂಬ ಕನಸು ಕಾಣುತ್ತಿದ್ದಾರೆ, ಅದು ಎಂದಿಗೂ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಗೆ ಯತ್ನಾಳ್ ತಿರುಗೇಟು ನೀಡಿದ್ದಾರೆ.




