ರಾಜಕೀಯ ಹಾಗೂ ಚಿತ್ರರಂಗ ಎರಡರಲ್ಲೂ ಬಹಳ ಬ್ಯುಸಿಯಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ನಿಟಿಸಿರುವ ರೈಡರ್ ಸಿನೆಮಾ ನಾಳೆ ಬಿಡುಗಡೆಯಾಗಲಿದೆ.
ಭರ್ಜರಿ ಈ ಚಿತ್ರವನ್ನು ವಿಜಯ್ ಕುಮಾರ್ ಕೊಂಡ ಅವರು ನಿರ್ದೇಶಿಸಿದ್ದು, ಅರ್ಜುನ್ ಜನ್ಯ ಅವರ ಸುಮಧುರ ಸಂಗೀತ ನೀಡಿದ್ದಾರೆ. ಚಂದ್ರು ಹಾಗೂ ಸುನೀಲ್ ಗೌಡ ನಿರ್ಮಾಣ ಮಾಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರಿಗೆ ನಾಯಕಿಯಾಗಿ ಕಾಶ್ಮೀರಾ ಪರ್ದೇಶಿ ನಟಿಸಿದ್ದು, ಈಗಾಗಲೇ ಟಿತ್ರದ ಟೀಸರ್ ಮತ್ತು ಹಾಡುಗಳು ಧೊಳೆಬ್ಬಿಸಿವೆ. ಭರ್ಜರಿಯಾಗಿ ಮೂಡಿಬಂದಿರುವ ಈ ಚಿತ್ರವನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ರೈಡರ್ ಚಿತ್ರ ನನಗೆ ಬಹಳ ಖುಷಿ ನೀಡಿದ್ದು, ಇದು ನನ್ನ ಜೀವನಕ್ಕೆತುಂಬಾ ಹತ್ತಿರವಾಗಿರುವ ಚಿತ್ರವಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ನಿನ್ನೆ ಮಂಡ್ಯದಲ್ಲಿ ಪ್ರಿರಿಲೀಸ್ ಈವೆಂಟ್ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿ ರಚಿತಾ ರಾಮ್, ಸೀತಾರಾಮ ಕಲ್ಯಾಣಚಿತ್ರದಲ್ಲಿ ನಿಖಿಲ್ ಜತೆ ನಟಿಸಿದ್ದೆ, ಅಂದಿನ ದಿನಗಳು ತುಂಬಾ ಚೆನ್ನಾಗಿದ್ದವು. ನಿಖಿಲ್ ಒಬ್ಬ ಜಂಟಲ್ ಮ್ಯಾನ್ ಎಂದು ಅವರು ಹೇಳಿದರು.

ಈ ಚಿತ್ರದ ಮೊದಲ ವಿಮರ್ಶಕಿ ನನ್ನ ಪತ್ನಿ ರೇವತಿ ಎಂದು ಹೇಳಿದ ನಿಖಿಲ್ ಅವರಿಗೆ ಅನ್ ಎಡಿಟೆಡ್ ನಾಲ್ಕು ಗಂಟೆಗಳ ಸಿನೆಮಾ ತೋರಿಸಿದ್ದೆ, ಅದನ್ನು ಅವರು ಮೆಚ್ಚಿದ್ದರು ಎಂದು ನಿಖಿಲ್ ತಿಳಿಸಿದ್ದಾರೆ.




