ಡಿ.28 ರಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ, ಪಬ್,ಬಾರ್ ಹೋಟೆಲ್ ಗಳಿಗೆ 50% ಮಿತಿ ಜಾರಿ : ಮದುವೆ ಸೇರಿದಂತೆ ಕಾರ್ಯಕ್ರಮಗಳಿಗೆ 300 ಜನರಿಗೆ ಸೀಮಿತ

ಬೆಂಗಳೂರು : ಕೊರೋನಾ ರೂಪಾಂತರಿ ಒಮಿಕ್ರಾನ್ ಸೋಂಕು ತಡೆಯಲು ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೆ ಸರ್ಕಾರ ತೀರ್ಮಾನಿಸಿದೆ.ಡಿಸೆಂಬರ್ 28 ರಿಂದ ಜನವರಿ 7ರವರೆಗೆ ಅಂದರೆ 10 ದಿನಗಳ ಕಾಲ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೂ ರಾತ್ರಿ ನಿರ್ಬಂಧವನ್ನು(ನೈಟ್ ಕರ್ಫ್ಯೂ) ಹೇರಿವುದಾಗಿ ಸಚಿವ ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ತಜ್ಞರ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಒಮಿಕ್ರಾನ್ ಸೋಂಕಿನ ಪ್ರಸರಣ ಹೇಗೆಲ್ಲಾ ಹರಡಿದೆ ಎಂದು ಬೇರೆ ದೇಶ ಮತ್ತು ರಾಜ್ಯಗಳ ಸ್ಥಿತಿಗತಿಯನ್ನು ತಜ್ಞರು ಅಧ್ಯಯನ ಮಾಡಿದ್ದಾರೆ. ಅಂತೆಯೇ ನಮ್ಮ ರಾಜ್ಯ ದಲ್ಲಿ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗಿದೆ.ಅದರಂತೆ  ರಾಜ್ಯಾದ್ಯಂತ ಡಿಸೆಂಬರ್ 28 ರಿಂದ 10 ದಿನಗಳ ನೈಟ್ ಕರ್ಫ್ಯೂ ಜಾರಿಗೊಳಿಸುತ್ತಿ ದ್ದು,ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಹೊಸ ವರ್ಷಾಚರಣೆ ನಿಷೇಧವಿರಲಿದೆ ಎಂದು ಅವರು ಹೇಳಿದರು.

ಪಬ್-ಬಾರ್ ಗೆ ನಿರ್ಬಂಧ – ಸಿನಿಮಾ ಥಿಯೇಟರ್,ಮಾಲ್ ಗಳಿಗೆ ಅನ್ವಯಿಸಲ್ಲ : ಮೊದಲಿಗೆ ಪಬ್ ಬಾರ್,ಹೋಟೆಲ್ ಗೆ ‌ಮಾತ್ರ ಆಸನ ಸಾಮರ್ಥ್ಯದ ಶೇ.50 ಕ್ಕೆ ಮಾತ್ರ ಅವಕಾಶ ನೀಡಲಾ ಗುತ್ತದೆ.ಆದರೆ ಸಿನಿಮಾಗೆ ಶೇ.50 ಆಸನ ನಿಯಮ ಅನ್ವಯ ಆಗಲ್ಲ, ಆದರೆ ನೈಟ್ ಕರ್ಪ್ಯೂ ವೇಳೆ ಸಿನಿಮಾ ಬಂದ್ ಇರಲಿದೆ.ಮುಂದಿನ 10 ದಿನ  ಪರಿಸ್ಥಿತಿ ‌ನೋಡಿಕೊಂಡು ಸೂಕ್ತ ತೀರ್ಮಾನ ಕೈಗೊಳ್ಳ ಲಾಗುವುದು ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಈಗಾಗಲೇ ಲಸಿಕಾ ನೀಡುವಲ್ಲಿ ಶೇ 97ರಷ್ಟು ಪ್ರಗತಿ ಸಾಧಿಸಿದ್ದೇವೆ.ಮೊದಲ ಡೋಸ್ ಶೇ.97ರಷ್ಟು ಪೂರ್ಣಗೊಂಡಿದೆ. ಉಳಿದ ಶೇ.3ರಷ್ಟು ಮೊದಲ ಡೋಸ್ ಶೀಘ್ರವೇ ಹಾಕಲಾಗುವು ದು.ರಾಜ್ಯದಲ್ಲಿ ಲಸಿಕೆ ವಿತರಣೆಗೆ ಸಮರೋಪಾದಿಯಲ್ಲಿ ಸಾಗಿದ್ದು ಶೀಘ್ರದಲ್ಲಿಯೇ ಶೇ 100% ಲಸಿಕೆ ನೀಡಿದ ರಾಜ್ಯಗಳ ಪಟ್ಟಿಗೆ ಕರ್ನಾಟಕ ಸೇರಲಿದೆ ಎಂದು ತಿಳಿಸಿದರು.

ಎರಡೂ ಡೋಸ್ ಲಸಿಕೆ ಪಡೆಯಿರಿ-ಸುರಕ್ಷಿತವಾಗಿರಿ : ದೇಶದಲ್ಲಿ ಒಮಿಕ್ರಾನ್ 400ರ ಗಡಿ ದಾಟಿ ದೆ,ಒಮಿಕ್ರಾನ್ ಪ್ರಮಾಣ ಹೆಚ್ಚಳ ವಾಗೋ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದ್ದು ಹೀಗಾಗಿ ಮುಂಜಾಗ್ರತಾ ಮತ್ತು ಕಠಿಣ ಕ್ರಮ ಕೈಗೊಳ್ಳುವುದು  ಅನಿವಾರ್ಯ ವಾಗಿದೆ.ಸೋಂಕು ಹೆಚ್ಚಾಗುವ ಮುನ್ನವೇ ಜನರು 2 ಡೋಸ್ ಲಸಿಕೆ ಪಡೆದುಕೊಳ್ಳಿ, ಇದರಿಂದಾಗಿ ಸಾವು ನೋವಿನ ಸಂಖ್ಯೆ ಕಡಿಮೆ ಆಗಲಿದೆ ಎಂದು ಅವರು ಮನವಿ ಮಾಡಿದರು.

ಒಮಿಕ್ರಾನ್ ಸೋಂಕು ಪ್ರಸರಣ ತಡೆಯಲು ಮತ್ತು ಚಿಕಿತ್ಸೆ ನೀಡಲು ಸರ್ಕಾರ ಈಗಾಗಲೇ ಸಿದ್ದತೆ ಮಾಡಿಕೊಂಡಿದೆ.4000 ಐಸಿಯು ಬೆಡ್ ,ಹೆಚ್ಚುವರಿಯಾಗಿ 3191 ಐಸಿಯು ಬೆಡ್‌ಗಳನ್ನು ಸೇರಿ 7051 ಬೆಡ್ ಗಳ ರೂಪಿಸಲಾಗಿದೆ.ಒಮಿಕ್ರಾನ್ ಎದುರಿಸಲು ಅಗತ್ಯ ಉಪಕರಣಗಳ ಖರೀದಿಗೆ   ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ.ಅದರಂತೆ ಒಮಿಕ್ರಾನ್ ಶೀಘ್ರ ಪತ್ತೆಗೆ ಥರ್ಮೋಫಿಶೆರ್ ಯಂತ್ರೋ ಪಕರಣ  ಖರೀದಿಸಲು ನಿರ್ಧರಿಸಲಾಗಿದೆ ಎಂದು ಅವರು ಪ್ರಕಟಿಸಿದರು.

ಮೊದಲನೇ ಹಂತದಲ್ಲಿ 15 -18 ವರ್ಷದ ಮಕ್ಕಳಿಗೆ ಲಸಿಕೆ ನೀಡಿಕೆ ಆರಂಭಿಸಲಿದ್ದು,ಜನವರಿ 3ರಿಂದ ಮೊದಲ ಹಂತದಲ್ಲಿ ಮಕ್ಕ ಳಿಗೆ ಲಸಿಕೆ ನೀಡಲು ಚಾಲನೆ ನೀಡಲಾಗುತ್ತದೆ.15-18 ವರ್ಷದ 43 ಲಕ್ಷ ಜನ ಮಕ್ಕಳು ರಾಜ್ಯದಲ್ಲಿದ್ದು ಅವರಿಗೆ ಲಸಿಕೆಗೆ ತಯಾರಿ ನಡೆಸಲಾಗಿದೆ.ಲಸಿಕೆ ನೀಡುವ ಮಾರ್ಗಸೂಚಿ ಕೇಂದ್ರದಿಂದ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಾಗುವುದು.3ನೇ ಡೋಸ್ ಜನವರಿ 10 ರಿಂದ 60 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿವಿಧ ರೋಗಗಳಿಂದ ಬಳಲುತ್ತಿರುವವರಿಗೆ ನೀಡ ಲಾಗುತ್ತದೆ.ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ 3ನೇ ಡೋಸ್ (ಹೆಚ್ಚುವರಿ) ಲಸಿಕೆ ನೀಡಲಾಗುತ್ತದೆ.

More News