ಮದ್ದೂರು : ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು ಎಂದು ನಾನೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಪ್ರಶ್ನೆ ಮಾಡುತ್ತಿದ್ದೇನೆ.ನನ್ನ ಪ್ರಶ್ನೆಗೆ ಅವರು ಸ್ಪಷ್ಟ ಮತ್ತು ಸಮರ್ಥ ಉತ್ತರ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.
ಮಂಡ್ಯ ಜಿಲ್ಲೆಯ ಮದ್ದೂರಿನ ಶಿವಪುರದಲ್ಲಿ ಕೆಪಿಸಿಸಿ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸವೂ ಆಗಿದೆ.ದೇಶದ ಸ್ವಾತಂತ್ರ್ಯ ಹೋರಾಟ ಕ್ಕೆ ಬಿಜೆಪಿಯವರ ಕೊಡುಗೆ ಶೂನ್ಯ.ನರೇಂದ್ರ ಮೋದಿ ಅವರು ಅರವತ್ತು ವರ್ಷ ದೇಶವನ್ನಾಳಿದ ಕಾಂಗ್ರೆಸ್ ನ ಕೊಡುಗೆ ಏನು ಎಂ ದು ನಮ್ಮನ್ನೇ ಪ್ರಶ್ನೆ ಮಾಡುತ್ತಾರೆ.ಬಹುಶಃ ಅವರಿಗೆ ದೇಶದ ಇತಿಹಾಸ ಜ್ಞಾನದ ಕೊರತೆಯಿರಬಹುದು ಎಂದು ಲೇವಡಿ ಮಾಡಿದರು.

ದೇಶದ ಜನರಿಗೆ ಆರ್ಥಿಕ,ಶೈಕ್ಷಣಿಕ,ರಾಜಕೀಯ ಹಾಗೂ ಸಾಮಾಜಿಕ ಸ್ವಾತಂತ್ರ್ಯ ನೀಡಿರುವುದು ಕಾಂಗ್ರೆಸ್ ಪಕ್ಷ. ಹೀಗಾಗಿ ಕಾಂಗ್ರೆಸ್ ಪಕ್ಷದ ಸದಸ್ಯನಾಗಿರುವುದೇ ಒಂದು ಹೆಮ್ಮೆಯ ವಿಷಯ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಮಾಹಿತಿ ಹಕ್ಕು, ಉದ್ಯೋಗ ಖಾತ್ರಿ,ಶಿಕ್ಷಣದ ಹಕ್ಕು,ಆಹಾರ ಭದ್ರತೆ ಕಾನೂನುಗಳನ್ನು ಜಾರಿಗೊಳಿಸಿ,ದೇಶದ ಆರ್ಥಿಕತೆಯನ್ನು ಸದೃಢ ಗೊಳಿಸಿ ದ್ದರು.ನರೇಂದ್ರ ಮೋದಿ ಅವರು ದೇಶದ ಬೆನ್ನೆಲುಬಾದ ಕೃಷಿಯನ್ನೇ ನಾಶ ಮಾಡಲು ಮೂರು ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ,ಕೆಲವು ದಿನಗಳ ಹಿಂದೆ ರೈತರ ಹೋರಾಟಕ್ಕೆ ಹೆದರಿ ಮತ್ತು ಚುನಾವಣೆಯಲ್ಲಿ ಸೋತ ಕಾರಣಕ್ಕೆ ವಾಪಾಸು ಪಡೆದಿ ದ್ದಾರೆ ಎಂದು ಕಟುಕಿದರು.
ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತೀಯರು ರಾಷ್ಟ್ರ ಧ್ವಜವನ್ನು ಹಾರಿಸಬಾರದು ಎಂದು ಕಾನೂನು ತಂದರು, ಇದರ ವಿರುದ್ಧ ಮಂಡ್ಯ ಜಿಲ್ಲೆಯ ಮದ್ದೂರಿನ ಶಿವಪುರದಲ್ಲಿ ಧ್ವಜಾರೋಹಣ ಮಾಡುವ ಮೂಲಕ ದೊಡ್ಡ ಚಳವಳಿಯನ್ನೇ ಆರಂಭಿಸಲಾಯಿತು.ಲಕ್ಷಾಂ ತರ ಜನ ಬ್ರಿಟಿಷರ ಗುಂಡಿಗೆ,ಲಾಠಿ ಏಟಿಗೆ ಎದೆ ಕೊಟ್ಟು ನಿಂತು ತ್ಯಾಗ ಬಲಿದಾನಗೈದಿದ್ದರಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ ಎಂದು ಇತಿಹಾಸವನ್ನು ಮೆಲಕು ಹಾಕಿದರು.

ಇವತ್ತು ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದರೆ ಅದಕ್ಕೆ ಸಂವಿಧಾನ ಮತ್ತು ನಮ್ಮ ನಾಯಕರು ನಡೆಸಿದ ಸ್ವಾತಂತ್ರ್ಯ ಹೋರಾಟ ಕಾರಣ.1925 ರಲ್ಲೇ ಆರಎಸ್ಎಸ್ ಸ್ಥಾಪನೆಯಾದರೂ ಅವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿ ಸಿಲ್ಲ.ಯಾವೊಬ್ಬ ಆರ್.ಎಸ್.ಎಸ್ ನಾಯಕ ಸ್ವಾತಂತ್ರ್ಯಕ್ಕಾಗಿ ಹುತಾತ್ಮನಾಗಿಲ್ಲ.ಇಂಥವರು ನಮಗೆ ಸ್ವಾತಂತ್ರ್ಯ ಹೋರಾಟ, ದೇಶಪ್ರೇಮದ ಪಾಠ ಮಾಡಲು ಬರುತ್ತಾರೆ ಎಂದು ವ್ಯಂಗ್ಯವಾಡಿದರು.
ನಾವೀಗ ಎಂದಿಗಿಂತ ಹೆಚ್ಚು ಹುರುಪಿನೊಂದಿಗೆ ಜನರ ಬಳಿ ಹೋಗಿ ಕಾಂಗ್ರೆಸ್ ಅನ್ನು ಬೆಂಬಲಿಸುವಂತೆ ಕೇಳಬೇಕು.ಹಿಂದಿನ ನಮ್ಮ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಅಭಿವೃದ್ಧಿಗೆ ಎಸ್.ಸಿ.ಪಿ/ಟಿ.ಎಸ್.ಪಿ ಕಾನೂನು ಜಾರಿಗೆ ತಂದು ,ಅವರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆಯಾಗುವಂತೆ ಮಾಡಿದೆವು,ಸರ್ಕಾರಿ ಟೆಂಡರ್ ಗಳಲ್ಲಿ ಈ ಸಮುದಾಯ ಗಳಿಗೆ ಮೀಸಲಾತಿ ನೀಡಿ ಅವರ ಆರ್ಥಿಕ ಏಳಿಗೆಗೆ ಸಹಕಾರಿಯಾಗಿದ್ದೆವು.ಈಗಿನ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನು, ಮತಾಂತರ ನಿಷೇಧ ಕಾಯ್ದೆ ಮುಂತಾದ ಭಾವನಾತ್ಮಕ ವಿಷಯಗಳ ಬಗ್ಗೆ ಮಾತ್ರ ಕಾನೂನು ರೂಪಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ದೇವರಾಜ ಅರಸು ಅವರು ಉಳುವವನೆ ಭೂಮಿಯ ಒಡೆಯ ಎಂಬ ಕಾನೂ ನು ತಂದಿದ್ದರೆ, ಬಿಜೆಪಿ ಸರ್ಕಾರ ಬಂದು ಉಳ್ಳವರನ್ನೇ ಭೂಮಿಯೊಡೆಯ ಮಾಡಿದೆ.ನಾವು ಕರ್ನಾಟಕ ಭೂ ಸುಧಾರಣಾ ಕಾಯಿದೆ ಗೆ ತಿದ್ದುಪಡಿ ತಂದು ಹಟ್ಟಿಗಳು,ತಾಂಡಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿದೆವು.ಈ ಬಿಜೆಪಿ ಸರ್ಕಾರ ಆರ್.ಎಸ್.ಎಸ್ ಹಾಕುವ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಸಂವಿಧಾನ ವಿರೋಧಿ ಕಾನೂನುಗಳನ್ನು ಜಾರಿ ಮಾಡುತ್ತಿದೆ ಎಂದು ಸರ್ಕಾರದ ನೀತಿ ವಿರುದ್ಧ ಕಿಡಿಕಾರಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ 2013 ರವರೆಗೆ ದೇಶದ ಒಟ್ಟು ಸಾಲ 53 ಲಕ್ಷ ಕೋಟಿ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಏಳು ವರ್ಷಗಳಲ್ಲೇ ಈ ಸಾಲ 135 ಲಕ್ಷ ಕೋಟಿಗೆ ಏರಿದೆ.ಇದೇನಾ ಅಚ್ಚೇ ದಿನ್? ಸ್ವಾತಂತ್ರ್ಯ ಬಂದಾಗಿನಿಂದ ನಾವು ಅಧಿಕಾರದ ಲ್ಲಿದ್ದ ಕೊನೇ ವರ್ಷದ ವರೆಗೆ ಇದ್ದ ರಾಜ್ಯದ ಒಟ್ಟು ಸಾಲ 2 ಲಕ್ಷದ 45 ಸಾವಿರ ಕೋಟಿ ರೂಪಾಯಿ.ಈಗಿನ ಬಿಜೆಪಿ ಸರ್ಕಾರದ ಎರಡು ವರ್ಷದ ದುರಾಡಳಿತದಿಂದ ಈ ಸಾಲ 4 ಲಕ್ಷದ 57 ಸಾವಿರ ಕೋಟಿಗೆ ಏರಿಕೆಯಾಗಿದೆ.ಅಭಿವೃದ್ಧಿ ಮೇಲೆ ಮತ ಕೇಳುತ್ತೇವೆ ಎನ್ನುವ ಬೊಮ್ಮಾಯಿ ಅವರ ಆಡಳಿತದಲ್ಲಿ ಸಾಲದ ಪ್ರಮಾಣ ಮಾತ್ರ ಬೆಳವಣಿಗೆ ಆಗುತ್ತಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ದೇಶವನ್ನು ಉಳಿಸುವುದಕ್ಕಾಗಿ ನಾವೆಲ್ಲಾ ಕಾಂಗ್ರೆಸ್ ಪಕ್ಷವನ್ನು ಉಳಿಸಬೇಕಿದೆ,ಬೆಳೆಸಬೇಕಿದೆ.ಕಾಂಗ್ರೆಸ್ ನಮ್ಮ ನಿಮ್ಮೆಲ್ಲರ,ಜನ ಸಾಮಾನ್ಯರ ಪಕ್ಷ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು,ಪಕ್ಷವನ್ನು ಬಲಪಡಿಸಲು ಒಂದಾಗಿ ದುಡಿಯೋಣ ಎಂದು ಕರೆ ನೀಡುತ್ತೇನೆ.




