WALK FOR WATER : ನೀರಿಗಾಗಿ ನಡಿಗೆ ನಡೆಸುತ್ತಿದ್ದೇವೆ, ಪಾದಯಾತ್ರೆ ಅಲ್ಲ: ಡಿ ಕೆ ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು : ನಾವು ಪಾದಯಾತ್ರೆ ಮಾಡುತ್ತಿಲ್ಲ, ರ್ಯಾಲಿ ನಡೆಸುತ್ತಿಲ್ಲ, ಧರಣಿ ನಡೆಸುತ್ತಿಲ್ಲ ನೀರಿಗಾಗಿ ನಡಿಗೆ, ವಾಕ್ ಫಾರ್ ವಾಟರ್ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ನಡಿಗೆ ಮಾಡುತ್ತಿರುವುದು ಕುಡಿಯುವ ನೀರಿಗಾಗಿ, ಬೆಂಗಳೂರಿನ ಜನರಿಗಾಗಿ ಎಂದು ಹೇಳಿದರು,
ರಾತ್ರಿ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಸುದೀರ್ಘ ಸಭೆ ನಡೆಸಿದ ಬಳಿಕ ನೈಟ್ ಕರ್ಫ್ಯೂ, ವಿಕೆಂಡ್ ಲಾಕ್ ಡೌನ್ ಮಾಡಲಾಗುವುದು ಎಂದು ತಿಳಿಸಿದೆ. ಇದು ಕೋವಿಡ್ ಲಾಕ್ ಡೌನ್ ಅಲ್ಲ ಇದು ಬಿಜೆಪಿ ಲಾಕ್ ಡೌನ್ ಎಂದು ವ್ಯಂಗ್ಯವಾಡಿದ ಅವರು, ಯಾವ ಕರ್ಫ್ಯೂ ಇಲ್ಲ, ರಾಜಕೀಯ ಟಫ್ ರೂಲ್ಸ್ ತರ್ತಿದ್ದಾರೆ ಎನ್ನುವುದು ತಿಳಿದಿದೆ ಎಂದು ಟೀಕಿಸಿದರು.

9ರಂದು ಪಾದಯಾತ್ರೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಡೀ ರಾಜ್ಯದಲ್ಲಿ ಯಾರು ಓಡಾಡಲ್ವಾ ? ಇವರು ಯಾರು ಓಡಾಡಲ್ವಾ, ಇವರ ಕಡೆಯವರು ಓಡಾಡಲ್ವಾ ? ಎಂದು ಪ್ರಶ್ನಿಸಿದರಲ್ಲದೆ, ನಾವು ನಡೆಯುತ್ತೇವೆ, ಪಾದಯಾತ್ರೆ ಅಂತ ಯಾಕೆ ಎನ್ನುತ್ತೀರಾ ನೀರಿಗಾಗಿ ನಡಿಗೆ ಮಾಡುತ್ತೇವೆ ಎಂದು ಹೇಳಿದರು.
ನಮಗೊಂದು ರೂಲ್ಸ್ ಅವರಿಗೊಂದು ರೂಲ್ಸ್ ?
ನಮ್ಮ ಮೇಲೆ ಕೇಸ್ ಹಾಕಿದ್ದಾರೆ, ಕೋರ್ಟ್ ನಿಂದ ನೋಟಿಸ್ ಕೊಟ್ಟಿದ್ದಾರೆ, ಮೊದಲು ನನ್ನ ಬ್ರದರ್ ಸುಧಾಕರ್ ಸ್ವಿಮಿಂಗ್ ಪೂಲ್ ನಲ್ಲಿ ಸ್ವಿಮ್ ಮಾಡಿದ್ರಲ್ಲ ಅವರ ಮೇಲೆ ಕೇಸ್ ಹಾಕಿ, ಪಾಪ ಮಕ್ಕಳ ಮೇಲೆ ಬೇಡ, ಬೊಮ್ಮಾಯಿ ಅವರು ಕಾರ್ಯಕ್ರಮ ಮಾಡಿದ್ದಾರಲ್ಲ ಅವರ ಮೇಲೆ ಕೇಸ್ ಹಾಕಿ, ಯಡಿಯೂರಪ್ಪ ಅಷ್ಟೊಂದು ಮದುವೆ ಅಟೆಂಡ್ ಮಾಡಿದ್ರಲ್ಲ ಅವರ ಮೇಲೆ ಕೇಸ್ ಹಾಕಿ.

ಶ್ರೀರಾಮುಲು ಮೇಲೆ ಹಾಕಿ, ಕೇಂದ್ರ ಸಚಿವರೆಲ್ಲ ಜನಾಶೀರ್ವಾದ ಯಾತ್ರೆ ಮಾಡಿದರಲ್ಲ ಅವಾಗ ಇರಲಿಲ್ಲವಾ ಕರೋನ ಎಂದು ವ್ಯಂಗ್ಯವಾಡಿದರು.
ನಮ್ಮ ಮೇಲಿನ ಸಿಟ್ಟಿನಿಂದ ಜನರನ್ನು ಕೊಲೆ ಮಾಡುತ್ತಿದೆ ಸರ್ಕಾರ
ನಮ್ಮ ಮೇಲಿನ ಸಿಟ್ಟಿಗೆ ಜನರನ್ನು ಕೊಲೆ ಮಾಡುತ್ತಿದ್ದಾರೆ, ವರ್ತಕರು, ಡ್ರೈವರ್, ಬೀದಿ ಬದಿ ವ್ಯಾಪಾರ ಮಾಡುವವರ ಕೊಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ನನ್ನ ಮೇಲೆ, ಸಿಎಲ್ ಪಿ ನಾಯಕರ ಮೇಲೆ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಎಂದು ಕೇಸ್ ಹಾಕಿದ್ದಾರೆ, ಇವರಿಗೆ ಬೇರೆ ರೂಲ್ಸ್, ನಮಗೆ ಬೇರೆ ರೂಲ್ಸ್, ಮೋದಿ ಅವರು ರ್ಯಾಲಿ ಮಾಡಿದ್ರು ಅದಕ್ಕೇನು ಮಾಡಿದ್ರು ಎಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

More News