ವಿಧಾನಸೌಧದಲ್ಲಿ ಇಂದು ಜನವೋ ಜನ: ಕೋವಿಡ್ ರೂಲ್ಸ್ ಗೆ ಕ್ಯಾರೆ ಅಂದಿಲ್ಲ ರಾಜಕಾರಣಿಗಳು, ಬೆಂಬಲಿಗರು

ಬೆಂಗಳೂರು : ಕಾನೂನು ಮಾಡುವವರೇ ಕಾನೂನು ಮುರಿದ್ರೆ ಹೇಗಿರುತ್ತೆ. ಅಂತಹದ್ದೇ ಒಂದು ಘಟನೆ ಇಂದು ನಡೆದಿದೆ. ರಾಜ್ಯ ಸರ್ಕಾರ ನಿನ್ನೆಯಷ್ಟೇ ಕೋವಿಡ್ ಕಾನೂನು ಜಾರಿ ಮಾಡಿತ್ತು. ಇಂದು ಎಲ್ಲರೂ ಸೇರಿ ಅದನ್ನು ಮುರಿದಿದ್ದಾರೆ. ಇಲ್ಲಿ ಅನೇಕರಲ್ಲಿ ಮಾಸ್ಕ್ ಇರಲಿಲ್ಲ, ಸಾಮಾಜಿಕ ಅಂತರದ ಮಾತು ಕೇಳುವ ಹಾಗೆ ಇರಲಿಲ್ಲ, ಏಕೆಂದರೆ ವಿಧಾನಸೌಧದ ಸುತ್ತಮುತ್ತ ಇಂದು ನೂತನ ಶಾಸಕರ ಬೆಂಬಲಿಗರೇ ತುಂಬಿ ತುಳುಕಿದ್ದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ನೂತನ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕೊರೋನಾ ರೂಲ್ಸ್ ಸಂಪೂರ್ಣವಾಗಿ ಗಾಳಿಗೆ ತೂರಲಾಗಿತ್ತು. ನೂತನ ಸದಸ್ಯರಿಗೆ ಶುಭಕೋರಲು ನೂಕುನುಗ್ಗಲು ಉಂಟಾಗಿತ್ತು. ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅನೇಕರು ಹಸಸಾಹಸ ಪಟ್ಟರು.
ಸಮಾರಂಭಕ್ಕೆ ಬಂದಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಮಾಸ್ಕ್ ಹಾಕಿರಲಿಲ್ಲ, ಒಂದು ರೀತಿಯಲ್ಲಿ ಜನಜಾತ್ರೆಯೇ ಸೇರಿತ್ತು. ಕೋವಿಡ್ ನ ಯಾವ ರೂಲ್ಸ್ ಪಾಲನೆ ಅಲ್ಲಿ ಕಾಣಲಿಲ್ಲ, ಇನ್ನೊಂದೆಡೆ ಕ್ಯಾಬಿನೆಟ್ ಸಭೆ ನಡೆಯುವ ಸ್ಥಳದಲ್ಲೂ ಜನಜಾತ್ರೆ ಸೇರಿತ್ತು, ಅಲ್ಲಿಯೂ ಕೂಡ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು.


ವಿಧಾನಸೌಧ ಪ್ರವೇಶಿಸುವವರು ಪಾಸು ಪಡೆಯಬೇಕು ಹಾಗೆಯೇ ಎರಡು ಡೋಸ್ ಪಡೆದವರಿಗೆ ಮಾತ್ರ ಅವಕಾಶ ಎಂದು ಕಾನೂನು ಮಾಡಲಾಗಿತ್ತು. ಆದರೆ, ಇಂದು ಈ ಎಲ್ಲಾ ನಿಮಯಗಳು ಕಾಣೆಯಾಗಿದ್ದವು. ರಾಜ್ಯದ ಜನ ಸಾಮಾನ್ಯರಿಗೆ ಮಾತ್ರ ಟಫ್ ರೂಲ್ಸ್ ಜಾರಿ ಮಾಡಲಾಗಿದೆ, ಒಂದು ವೇಳೆ ಕಾನೂನು ಉಲ್ಲಂಘಿಸಿದರೆ ಅವರಿಗೆ ದಂಡ ಬೀಳುತ್ತೆ, ಆದರೆ, ಇಂದು ವಿಧಾನ ಸೌಧದಲ್ಲಿ ಮಾತ್ರ ಈ ಎಲ್ಲಾ ಕಾನೂನನ್ನು ಗಾಳಿಗೆ ತೂರಲಾಗಿತ್ತು.
ಕಾನೂನು ಮಾಡೋರಿಗೆ ಅದೇ ಕಾನೂನು ಅನ್ವಯವಾಗೋದಿಲ್ವಾ ಎಂಬ ಸಂಶಯ ಎಲ್ಲರಲ್ಲೂ ಮೂಡಿತ್ತು. ಸಿಎಂ ಬೊಮ್ಮಾಯಿ ಅವರು ಇದ್ದ ಕಾರ್ಯಕ್ರಮದಲ್ಲೇ ಯಾವುದೇ ಕಾನೂನು ಫಾಲೋ ಆಗುತ್ತಿರಲಿಲ್ಲ, ಸಾಮಾಜಿಕ ಅಂತರ ಇಲ್ಲ, ಸರಿಯಾಗಿ ಮಾಸ್ಕ್ ಧರಿಸಿರಲಿಲ್ಲ,


ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದಿದ್ದ ಎಂಎಲ್ ಸಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಎಲ್ಲವನ್ನು ಮರೆಯಲಾಗಿತ್ತು. ಸಭೆ, ಸಮಾರಂಭಗಳಿಗೆ, ಮದುವೆಗಳಿಗೆ ನೂರು, ಇನ್ನೂರು ಜನರಿಗೆ ನಿರ್ಬಂಧ ಹೇರಲಾಗಿತ್ತು. ಸರ್ಕಾರದ ಈ ಕಾರ್ಯಕ್ರಮದಲ್ಲಿ ಮಾತ್ರ ಸಾವಿರಾರು ಜನರು ಸೇರಿದ್ದರು. ಸರ್ಕಾರಿ ಕಾರ್ಯಕ್ರಮದಲ್ಲೇ ಕೋವಿಡ್ ನಿಯಮಗಳು ಉಲ್ಲಂಘನೆಯಾಗಿತ್ತು.

More News