ಕೊರೊನಾ ನಿಯಮ ಪಾಲಿಸಿ ಮೇಕೆದಾಟು ನಡಿಗೆ ನಾಳೆಯಿಂದ ಆರಂಭ : ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದಲ್ಲಿರುವ ಎಲ್ಲಾ ಕೊರೋನಾ ನಿಯಮ ಪಾಲಿಸಿಯೇ ಮೇಕೆದಾಟು ನಡೆಗೆ ಮಾಡುತ್ತೇವೆ, ಮಾಸ್ಕ್, ಗ್ಲೌಸ್, ಸಾಮಾಜಿಕ ಅಂತರ ಕಾಪಾಡಿಕೊಂಡು ನಡಿಗೆ ನಡೆಸಲಿದ್ದೇವೆ ಎಂದುವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನಮ್ಮ ವಿರುದ್ಧ ಏನು ಕ್ರಮ ತೆಗೆದುಕೊಳ್ತಾರೋ ಅದನ್ನು ಅವರು ತೆಗೆದುಕೊಳ್ಳಲಿ, ಅದನ್ನು ನಾವು ಎದುರಿಸಲಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ನಮ್ಮನ್ನೆಲ್ಲಾ ಅರೆಸ್ಟ್ ಮಾಡ್ತುತ್ತಾರಾ ಮಾಡಲಿ, ಮೇಕೆದಾಟುವಿನಲ್ಲಿ ೧೪೪ ಸೆಕ್ಷನ್ ಹಾಕಿದ್ದಾರೆ, ಐದಾರು ಜನ ಹೋಗುತ್ತೇವೆ, ನಾವು ಪಾದಯಾತ್ರೆ ಅನೌನ್ಸ್ ಮಾಡಿದ ಮೇಲೆ ಇವರು ರೂಲ್ಸ್ ಮಾಡಿದ್ದು, ಬಿಜೆಪಿಯವರು ಬೇಕಂಥಲೇ ರಾಮನಗರಕ್ಕೆ ಮಾತ್ರ ೧೪೪ ಹಾಕಿದ್ದಾರೆ, ರಾಮನಗರದಲ್ಲಿ ಎಲ್ಲಾ ಬಂದ್ ಯಾಕೆ ಮಾಡಿಸಿದ್ದೀರಾ ಎಂದು ಅವರು ಪ್ರಶ್ನಿಸಿದ್ದಾರೆ.
ಸಚಿವ ಗೋವಿಂದ ಕಾರಜೋಳ ಬರೀ ಸುಳ್ಳು ಹೇಳುತ್ತಿದ್ದಾರೆ, ೨೦೧೮ ರಲ್ಲಿ ಕೋರ್ಟ್ ನಲ್ಲಿ ಇತ್ಯರ್ಥ ಆಗಿದೆ, ತಮಿಳುನಾಡಿಗೆ ನೀರು ಕೊಡಬೇಕೆಂದು ಕೋರ್ಟ್ ಹೇಳಿತ್ತು. ಮಳೆ ಬಾರದೆ ಇದ್ದಾಗ ಕೊಡಬೇಕು ಅಂತ ಹೇಳಿದೆ, ಈಗ ಹೆಚ್ಚು ನೀರು ಸಮುದ್ರಕ್ಕೆ ಹೋಗುತ್ತಿದೆ, ಆ ನೀರನ್ನ ಏನ್ ಮಾಡಬೇಕು, ಜಲಾಶಯ ನಿರ್ಮಾಣ ಮಾಡಿ ಕುಡಿಯೋದಕ್ಕೆ ಕೊಡಬೇಕು ಎಂದು ಆಗ್ರಹಿಸಿದರು.

ಯಡಿಯೂರಪ್ಪ ಸಿಎಂ ಆಗಿದ್ದಾಗ ಯಾಕೆ ಮಾಡಲಿಲ್ಲ, ಬೊಮ್ಮಾಯಿ ಅಂದು ಜಲಸಂಪನ್ಮೂಲ ಸಚಿವರಾಗಿದ್ದರು, ಯಾಕೆ ಡಿಪಿಆರ್ ಮಾಡಿಸಿಲ್ಲ, ವಿಳಂಬದಿಂದ ದ್ರೋಹ ಆಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

More News