ಬೆಂಗಳೂರು : ರಾಜ್ಯ ಸರ್ಕಾರ ಹೊರಿಡಿಸಿರುವ ವಾರಾಂತ್ಯ ಕರ್ಪ್ಯೂ ಮತ್ತು ಕೊರೋನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮೇಕದಾಟು ಪಾದಯಾತ್ರೆ ಮತ್ತು ಕಾರ್ಯಕ್ರಮ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು30 ಹಿರಿಯ ನಾಯಕರ ವಿರುದ್ಧ ಸಾತನೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.

ದೂರಿನ ಪ್ರತಿ ‘ ದಿನ್ಯೂಸ್ ಪೆಗ್ ’ ಗೆ ಲಭ್ಯವಾಗಿದ್ದು,ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವ ಕುಮಾರ್ ಮೊದಲ ಆರೋಪಿಯಾಗಿದ್ದು,ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಎರಡನೆ ಆರೋಪಿ,ಡಿ.ಕೆ.ಸುರೇಶ್ ಮೂರನೇ,ವೀರಪ್ಪ ಮೊಯ್ಲಿ ನಾಲ್ಕನೇ,ಐದನೇ ಆರೋಪಿಯಾಗಿ ರಾಜ್ಯ ಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ.
ಅಂತೆಯೇ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ,ರಾಮಲಿಂಗಾ ರೆಡ್ಡಿ, ಧ್ರುವನಾರಾಯಣ್, ಸಲೀಂ ಅಹಮದ್,ಚಿತ್ರ ನಟ ದುನಿಯಾ ವಿಜಿ,ಸಾಧು ಕೋಕಿಲ,ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ,ರಾಜ್ ಕುಮಾರ್ ಅಭಿಮಾನಿ ಬಳಕ ಮತ್ತು ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಸಾ.ರಾ.ಗೋ ವಿಂದು ಸೇರಿದಂತೆ ಅನೇಕ ಪ್ರಮುಖರ ವಿರುದ್ಧ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಾರ್ಯಕ್ರಮದಲ್ಲಿ ಮನರಂಜನೆ ನೀಡಲು ಬಂದಿದ್ದ ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ವಿರುದ್ಧವೂ ದೂರು ದಾಖ ಲಾಗಿದ್ದು,ಸಾತನೂರು ಪೊಲೀಸರು ಸಲ್ಲಿಸಿರುವ ಎಫ್ ಐ ಆರ್ ನಲ್ಲಿ ಅವರ ಹೆಸರು ಸೇರಿಸಲಾಗಿದೆ.
ಕನಕಪುರ ತಹಶೀಲ್ದಾರ್ ವಿಶ್ವನಾಥ್ ನೀಡಿರುವ ದೂರಿನ ಹಿನ್ನಲೆಯಲ್ಲಿ ಸಾತನೂರು ಪೊಲೀಸರು ಕಾರ್ಯಕ್ರಮ ಆಯೋಜಿಸಿದ ವರ ವಿರುದ್ಧ ದೂರು ದಾಖಲಿಸಿದ್ದಾರೆ.ಭಾರತ ದಂಡ ಸಂಹಿತೆ ಕಲಂ 141,143,290,336, ಸಹಕಲಂ 149 ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರ ಕಲಂ 5(3)ಅಡಿ ದೂರು ದಾಖಲಿಸಿದ್ದಾರೆ.

ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಕರ್ಪ್ಯೂ ಉಲ್ಲಂಘನೆ,ಕೊರೊನಾ ನಿಯಮವನ್ನು ಪಾಲಿಸುವುದು, ಪಾದಯಾತ್ರೆ ಯನ್ನು ಮುಂದೂಡುವಂತೆ ಕಾರ್ಯಕ್ರಮ ಆಯೋಜಕರಿಗೆ ತಿಳಿಸಿರುತ್ತಾರೆ. ಇದೆಲ್ಲವನ್ನು ಲೆಕ್ಕಿಸ ದೇ,ಮಾಸ್ಕ್ ಧರಿಸದೆ,ಸ್ಯಾನಿಟೈಸ್ ಬಳಸದೆ,ಮಾರ್ಗಸೂಚಿ ಉಲ್ಲಂಘಿಸಿ ಕಾರ್ಯಕ್ರಮ ಆಯೋಜಿಸಿದ್ದಾರೆ.ಅಲ್ಲದೆ ಪಾದಯಾತ್ರೆಯ ನ್ನು ನಡೆಸಿದ್ದಾರೆ.

ಕೋವಿಡ್ ನಿಯಮಾವಳಿಗಳನ್ನು ಎಲ್ಲಾನಿಯಮಗಳನ್ನು ಗಾಳಿ ತೂರಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಹೀಗಾಗಿ ಇವರು ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.ತಹಶೀಲ್ದಾರ್ ದೂರಿನನ್ವಯ ಪೊಲೀಸ್ ಇಲಾಖೆ ಕಾನೂನು ಕ್ರಮಕ್ಕೆ ಮುಂದಾಗಿದೆ.




