ಕೊರೋನಾ ಮಾರ್ಗಸೂಚಿ ಉಲ್ಲಂಘನೆ ಡಿ.ಕೆ ಶಿವಕುಮಾರ್ ವಿರುದ್ಧ ಎರಡನೇ ಎಫ್ ಐಆರ್ ದಾಖಲು : ವಿಚಾರಣೆ,ತನಿಖೆಗೆ ನಿರ್ಲಕ್ಷ್ಯವಹಿಸಿದ ಪೊಲೀಸರು

ಬೆಂಗಳೂರು :ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿ ಪಾದಯಾತ್ರೆ ನಡೆಸುತ್ತಿರುವ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರ ಮೇಲೆ ಎರಡನೆ ಎಫ್ಐಆರ್ ದಾಖಲಾಗಿದೆ.ಕನಕಪುರ ತಹಶೀಲ್ದಾರ್ ವಿಶ್ವನಾಥ್ ನೀಡಿರುವ ದೂರಿನ ಮೇರೆಗೆ ಸಾತನೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಡಿ.ಕೆ.ಶಿವಕುಮಾರ್,ಡಿಕೆ.ಸುರೇಶ್,ಕೃಷ್ಣ ಬೈರೇಗೌಡ,ಎಚ್.ಆಂಜನೇಯ,ನಾರಾಯಣಸ್ವಾಮಿ,ಮೋಟಮ್ಮ,ಪಿ.ಟಿ.ಪರಮೇಶ್ವರ್ ನಾಯಕ್,ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್,ಆರ್.ನರೇಂದ್ರ,ಪುಟ್ಟರಂಗಶೆಟ್ಟಿ,ವೀಣಾ ಅಚ್ಚಯ್,ಅಂಜಲಿ ನಿಂಬಾಳ್ಕರ್ ಸೇರಿದಂತೆ 41 ಜನರ ವಿರುದ್ಧ ಕೋರೋನಾ ಮಾರ್ಗಸೂಚಿ ಉಲ್ಲಂಘನೆ,ಅಕ್ರಮ ಗುಂಪುಗೂಡುವುದು,ಐಪಿಸಿ ಸೆಕ್ಷನ್ 141,143, 290,336,149 ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಜನವರಿ 9ರಂದು ಮೊದಲನೆ ಎಫ್ ಐಆರ್ ದಾಖಲಿಸಲಾಗಿದ್ದು,ಎರಡನೆ ಎಫ್ಐಆರ್ 10 ರ ಸೋಮವಾರ ದಾಖಲಿಸಲಾಗಿದೆ. ವಿಪರ್ಯಾಸವೆಂದರೆ ಈ ಸಂಬಂಧ ಯಾವುದೇ ತನಿಖೆ,ವಿಚಾರಣೆಯನ್ನು ಮಾಡದೆ ಪೊಲೀಸರು ಕೇವಲ ಎಫ್ ಐಆರ್ ದಾಖಲಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ಕೊರೋನಾ ಮರ್ಗಸೂಚಿ ಸೇರಿದಂತೆ ಯಾವುದೇ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ. ಪಾದಯಾತ್ರೆ ಮುಂದುವರೆಸುವ ಮೂಲಕ ಕೊರೋನಾ ಪ್ರಸರಣಕ್ಕೆ ನಾಂದಿ ಹಾಡಿದೆ.ಪಾದಯಾತ್ರೆಗೆ ಚಾಮರಾಜನಗರದಿಂದ,ಬೀದರ್ ನಿಂದ,ಬಾಗಲಕೋಟೆ ಯಿಂದ,ಮೈಸೂರಿನಿಂದ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಾದಯಾತ್ರೆಗೆ ಆಗಮಿಸುವ ಮೂಲಕ ಕೊರೋನಾ ಹಾಟ್ ಸ್ಪಾಟ್ ಆಗಿ ಪಾದಯಾತ್ರೆ ಪರಿವರ್ತನೆ ಆಗುವ ಸಾಧ್ಯತೆ ಇದೆ.

ಪಾದಯಾತ್ರೆಯಲ್ಲಿ ಪಾಲ್ಗೊಂಡವರಲ್ಲಿ ಕೆಲವರು ಮಾತ್ರ ಕೊರೋನಾ ಪರೀಕ್ಷೆಗೆ ಒಳಗಾಗಿದ್ದಾರೆ. ಉಳಿದವರು ಪರೀಕ್ಷೆಗೆ ಒಳ ಗಾಗಿಲ್ಲ.ಜಿಲ್ಲಾಡಳಿತ ಪಾದಾಯತ್ರೆ ಸಾಗಿ ಬಂದ ಪ್ರದೇಶಗಳಲ್ಲಿ ವ್ಯಾಪಕ ಪರೀಕ್ಷೆ ನಡೆಸಿದರೆ ಕೊರೋನಾ ಸ್ಪೋಟದ ಸ್ಪಷ್ಟ ಚಿತ್ರಣ ಸಿಗಲಿದೆ.

More News