ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಒಟ್ಟು 64 ಜನರ ವಿರುದ್ಧ ಮೂರನೇ ಎಫ್ ಐ ಆರ್ ದಾಖಲು

ಬೆಂಗಳೂರು : ಮೂರನೇ ದಿನದ ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲು ಮಾಡಿರುವ ಪೊಲೀಸರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ 64 ಕೈ ನಾಯಕರ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದೆ. ಈವರೆಗೆ ಡಿಕೆ ಶಿವಕುಮಾರ್ ವಿರುದ್ಧ ಒಟ್ಟು ಮೂರು ಎಫ್ ಐ ಆರ್ ಗಳನ್ನ ಸರ್ಕಾರದ ಪರವಾಗಿ ತಹಸೀಲ್ದಾರ್ ವಿಶ್ವನಾಥ್ ದಾಖಲಿಸಿಕೊಂಡಿದ್ದಾರೆ.
ಮೊದಲ ದಿನದ ಕೋವಿಡ್ ನಿಯಮ ಉಲ್ಲಂಘನೆಗೆ 31 ಜನರ ಮೇಲೆ ಎಫ್ ಐಆರ್ ದಾಖಲಾಗಿತ್ತು, ಎರಡನೇ ದಿನದ ಮೇಕೆದಾಟು ಪಾದಯಾತ್ರೆಯಲ್ಲೂ ಕೋವಿಡ್ ನಿಯಮ ಉಲ್ಲಂಘನೆ ಆಗಿರುವ ಹಿನ್ನಲೆಯಲ್ಲಿ ಕೃಷ್ಣಬೈರೇಗೌಡ, ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಈಶ್ಚರ್ ಖಂಡ್ರೆ, ಟಿ ಬಿ ಜಯಚಂದ್ರ, ಉಮಾಶ್ರೀ, ರಿಜ್ವಾನ್ ಅರ್ಷದ್, ಮಹಮದ್ ನಳಪಾಡ್ ಸೇರಿ 41 ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಈಗ ಮೂರನೇ ದಿನದ ಎಫ್ ಐ ಆರ್ ನಲ್ಲಿ ಕೆಪಿಸಿಸಿ ಮುಖಂಡರ ಜತೆ ಕಾರ್ಯಕರ್ತನರನ್ನು ಸೇರಿಸಲಾಗಿದ್ದು , ದಿನಕ್ಕೊಂದು ಎಫ್ ಐ ಆರ್ ದಾಖಲು ಆಗುತ್ತಿದೆ.


ಈವರೆಗೆ ಒಟ್ಟು 138 ಜನರ ಮೇಲೆ ಎಫ್ಐಆರ್ ದಾಖಲಾಗಿದ್ದು, ಐಪಿಸಿ 141, 143,290,336 ಸಹ ಕಲಂ 149 ಹಾಕಿರುವ ಜತೆಗೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ (Karnataka Epidemics act) 2020 ಕಲಂ 5 (3a) ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಪರ ತಹಸೀಲ್ದಾರ್ ವಿಶ್ವನಾಥ್ ಮತ್ತೊಮ್ಮೆ ಹೊಸ ದೂರಿನಲ್ಲಿ ಕೋರಿದ್ದಾರೆ.

More News