ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಅವರ ಪ್ರೀತಿಯಲ್ಲಿ ಬ್ರೇಕಪ್ ಬಿದ್ದಿದ್ದೆ ಎಂಬ ದೊಡ್ಡ ಸುದ್ದಿ ಬಾಲಿವುಡ್ ನಿಂದ ಅಂಗಳದಲ್ಲಿ ಕೇಳಿಬಂದಿತ್ತು. ಆದರೆ, ಅದಕ್ಕೆ ಇಬ್ಬರೂ ಬ್ರೇಕಪ್ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
ಬ್ರೇಕಪ್ ಸುದ್ದಿಯೆಲ್ಲಾ ಸುಳ್ಳು, ನಾವೀಬ್ಬರೂ ಯಾಕೆ ಬ್ರೇಕಪ್ ಮಾಡಿಕೊಳ್ಳಬೇಕು, ನಮ್ಮದು ಯಾವತ್ತಿದ್ದರೂ ಸ್ವೀಟ್ ಕಪಲ್ ಎಂದು ಬಿಂಬಿಸುವ ಫೋಟೋವೊಂದನ್ನು ಅರ್ಜುನ್ ಕಪೂರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ಬ್ರೇಕಪ್ ಸುದ್ದಿಗೆ ದೊಡ್ಡ ಫುಲ್ ಸ್ಟಾಪ್ ಹಾಕಿದ್ದಾರೆ.

ಇಲ್ಲಿ ವದಂತಿಗಳಿಗೆ ಸ್ಥಾನವಿಲ್ಲ, ದೇವರ ಆಶೀರ್ವಾದದೊಂದಿಗೆ ಎಲ್ಲರೂ ಸುರಕ್ಷಿತವಾಗಿರಿ, ಎಲ್ಲರಿಗೂ ಶುಭ ಹಾರೈಸಿ ಪ್ರೀತಿಸುತ್ತೇನೆ ಎಂಬ ಶೀರ್ಷೀಕೆಯನ್ನು ಅರ್ಜುನ್ ನೀಡಿದ್ದಾರೆ.

ಇನ್ನು ಪೋಸ್ಟ್ ಗೆ ಮಲೈಕಾ ಹೃದಯದ ಎಮೋಜಿ ಹಾಕುವುದರ ಮೂಲಕ ಪ್ರತಿಕ್ರಿಯೆ ನೀಡಿ ಎಲ್ಲಾ ಸುದ್ದಿಗೂ ಗುಡೈ ಬೈ ಅಂದಿದ್ದಾರೆ. 36ರ ಹರೆಯದ ಅರ್ಜುನ್ ಕಪೂರ್ 48 ವಯಸ್ಸಿನ ಮಲೈಕಾ ಪ್ರೀತಿ ಇವತ್ತಿಗೂ ಚರ್ಚೆಯಲ್ಲಿದ್ದು, ಇಬ್ಬರ ಆತ್ಮೀಯತೆ, ಪ್ರೀತಿ ಹೊಂದಾಣಿಕೆ ಎಲ್ಲರಿಗೂ ಮಾರ್ಗದರ್ಶನ ಎಂಬ ಮಾತುಗಳು ಹಾಲಿವುಡ್ ನಲ್ಲಿ ಸದಾ ಕೇಳಿ ಬರುತ್ತಿತ್ತು.




