ಮೂಗುತಿ ಸುಂದರಿ, ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ತಮ್ಮ ಟೆನ್ನಿಸ್ ವೃತ್ತಿ ಜೀವನಕ್ಕೆ ಗುಡ್ ಬೈ ಘೋಷಿಸಿದ್ದಾರೆ. ಪ್ರಸ್ತುತ ಅವರು ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಪಂದ್ಯಾವಳಿಗಳನ್ನು ಆಡುತ್ತಿರುವ ಅವರು ಇದೇ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯಗಳಾಗಿವೆ ಎಂದು ಹೇಳಿಕೊಂಡಿದ್ದಾರೆ.
ಇದು ನನ್ನ ಕೊನೆಯ ಸೀಸನ್, ಇನ್ನುಂದೆ ಆಟವಾಡುವುದು ಅಷ್ಟು ಸರಳವಾದ ಮಾತಲ್ಲ, ಪಂದ್ಯದಿಂದ ಪಂದ್ಯಕ್ಕೆ ಚೇತರಿಸಿಕೊಳ್ಳಲು ಸಾಕಷ್ಟು ಸಮಯಬೇಕಾಗಿರುವುದರಿಂದ ಈ ನಿರ್ಧಾರಕ್ಕೆಬರಲಾಗಿದೆ ಎಂದು ಆಸ್ಟ್ರೇಲಿಯನ್ ಓಪನ್ ನಲ್ಲಿ ಮಹಿಳೆಯರ ಡಬಲ್ಸ್ ನಲ್ಲಿ ಮೊದಲ ಸುತ್ತಿನಲ್ಲೇ ಸೋಲು ಕಂಡ ಬಳಿಕ ಈ ಮಾತುಗಳನ್ನು ಅವರು ಆಡಿದ್ದಾರೆ, ಹಾಗೂ ತಮ್ಮನಿವೃತ್ತಿಯ ಬಗ್ಗೆ ತಿಳಿಸಿದ್ದಾರೆ.
ತಮ್ಮ ಮೂರು ವರ್ಷದ ಮಗನ ಜತೆ ಸಮಯವನ್ನು ಕಳೆಯಬೇಕಾಗಿದೆ, ನನ್ನ ಟೆನಿಸ್ ಪ್ರಯಾಣದಲ್ಲಿ ಆತನನ್ನು ಕರೆದುಕೊಂಡು ಹೋಗುತ್ತಿದ್ದೇನೆ, ಮಗನ ವಿಚಾರವನ್ನು ಕೂಡ ನಾನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ನನ್ನ ಮೊಣಕಾಲು ನೋಯುತ್ತಿವೆ, ಸೋತಿದ್ದಕ್ಕೆ ಈ ಮಾತನ್ನು ಹೇಳುತ್ತಿಲ್ಲ ಇವೆಲ್ಲ ಅಂಶಗಳು ನನ್ನನ್ನು ಟೆನಿಸ್ ಅಂಗಳದಿಂದ ದೂರ ಸರಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಭಾರತದ ಟೆನಿಸ್ ತಾರೆ ಸಾನಿಯಾ ಈಗಾಗಲೇ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಟೆನಿಸ್ ಲೋಕದ ಮೂಗುತಿ ಸುಂದರಿ ಅಂದು ಬಹಳ ಪ್ರಖ್ಯಾತಿಯನ್ನು ಗಳಿಸಿದ್ದರು. ಹೈದರಾಬಾದ್ ಮೂಲದ ಇವರು ಪಾಕಿಸ್ತಾನದ ಸೋಯಿಬ್ ಮಲ್ಲಿಕ್ ಅವರನ್ನು ಮದುವೆಯಾಗಿದ್ದರು.




