ಬೆಂಗಳೂರು: ನಕಲಿ ಫಲಾನುಭವಿಗಳ ಹೆಸರಿನಲ್ಲಿ ಶುದ್ಧಕ್ರಮ ಆಪ್ತರ ತಯಾರಿಸುತ್ತಿದ್ದ ಆರೋಪದ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಕರ್ಮಕಾಂಡ ಬಯಲಾಗಿದ್ದು, ಮೂರೇ ದಿನದಲ್ಲಿ 8 FIR ದಾಖಲಾಗಿದೆ. ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ FIR ದಾಖಲಾಗಿದ್ದು, ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.
ನಕಲಿ ಫಲಾನುಭವಿಗಳು, ಡೆಪ್ಯುಟಿ ಸೆಕ್ರೆಟರಿ, ಸೂಪರ್ ವೈಸರ್, ಕೇಸ್ ವರ್ಕರ್ ಮೇಲೆ FIR ದಾಖಲಾಗಿದೆ. DS-3 ಅನಿಲ್ ಕುಮಾರ್, DS-4 ಮಂಗಳ ಎಸ್.ಎಂ ಆರೋಪಿಗಳ ಹೆಸರಲ್ಲೇ FIR ಪ್ರಕರಣಗಳು ದಾಖಲಾಗಿವೆ. ನಕಲಿ ಫಲಾನುಭವಿಗಳಾದ ಅಪ್ಪಯ್ಯಣ್ಣ, ಶ್ರೀನಿವಾಸ ರೆಡ್ಡಿ, ಕಮರುನ್ನೀಸಾ, ರುಕ್ಮಿಣಿ, ರಾಜೇಂದ್ರ, ಗುಲಾಬ್ ಜಾನ್, ಶಶಿಕುಮಾರ್ ಆರೋಪಿಗಳಾಗಿದ್ದಾರೆ.

ಬಿಡಿಎ ಕೇಸ್ ವರ್ಕರ್ ವೆಂಕಟರಮಣಪ್ಪ, ಸಂಜಯ್ ಕುಮಾರ್, ಕಮಲಮ್ಮ, ಸೂಪರ್ ವೈಸರ್ ಕಮಲಮ್ಮ, ಮಹದೇವಮ್ಮ, ಮರಿಯಪ್ಪ ಆರೋಪಿಗಳಾಗಿದ್ದಾರೆ.

ಬಿಡಿಎ ವಿಜಿಲೆನ್ಸ್ ಅಧಿಕಾರಿಗಳಿಂದ FIR ದಾಖಲಾಗಿದ್ದು, ಎಚ್ ಬಿ ಆರ್ ಲೇಔಟ್, ಕೆಂಗೇರಿ ಸೇರಿದಂತೆ ನಾನಾ ಭಾಗದ ಬಿಡಿಎ ಜಾಗಕ್ಕೆ ಬೋಗಸ್ ದಾಖಲೆಗಳನ್ನು ಮಾಡಿ ಅವ್ಯವಹಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.


ಗುತ್ತಿಗೆ ಹಾಗೂ ಮಾರಾಟ ಒಪ್ಪಂದವನ್ನ ಆರೋಪಿಗಳು ನಕಲಿಯಾಗಿ ಆರೋಪಿಗಳು ಸೃಷ್ಟಿಸುತ್ತಿದ್ದು, ನಂತರ ಅದೇ ನಕಲಿ ದಾಖಲೆ ಇಟ್ಕೊಂಡು ಶುದ್ಧ ಕ್ರಯಪತ್ರವನ್ನು ಆರೋಪಿಗಳು ತಯಾರಿಸುತ್ತಿದ್ದರು. ಇದೀಗ ಪ್ರಕರಣ ದಾಖಲಿಸಿಕೊಂಡ ಶೇಷಾದ್ರಿಪುರಂ ಪೊಲೀಸರಿಂದ ಆರೋಪಿಗಳಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.




