ಬೆಂಗಳೂರು : ಕಾಂಗ್ರೆಸ್ ಪಕ್ಷ ತೊರೊಯುತ್ತಿರುವುದಾಗಿ ಹೇಳಿಕೆ ನೀಡಿರುವ ಸಿ ಎಂ ಇಬ್ರಾಹಿಂ ಕುರಿತು ಪ್ರತಿಕ್ರಿಯೆ ನೀಡಲು ಮುಂದಾದ ಮಾಧ್ಯಮಗಳ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಸುದ್ದಿ ಮಾಡೋಕೆ ಬರ್ತೀರೋ..? ಅಥವಾ ಕಾಂಟ್ರವರ್ಸಿ ಮಾಡೋಕೆ ಬರ್ತೀರೋ ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದರು. ನಾನು ಸಿ.ಎಂ ಇಬ್ರಾಹಿಂ ಜತೆ ಮಾತನಾಡುತ್ತೇನೆ ಎಂದು ಹೇಳಿದ ಸಿದ್ದರಾಮಯ್ಯ, ಇಬ್ರಾಹಿಂ ಮಾತ್ರ ನನ್ನ ಸ್ನೇಹಿತನಲ್ಲ, ನೀನೂ ನನ್ನ ಸ್ನೇಹಿತ, ಬೇರೆಯವರು ನನ್ನ ಸ್ನೇಹಿತರು ಎಂದು ಹೇಳಿದರು.
ಸಿ ಎಂ ಹಿರಿಯ ನಾಯಕರು, ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಮಂತ್ರಿ ಆಗಿದ್ದವರು, ಹಿಂದೆ ಸಿಟ್ಟಿಂಗ್ ಶಾಸಕರ ಟಿಕೆಟ್ ತಪ್ಪಿಸಿ ಅವರಿಗೆ ಸಿದ್ದರಾಮಯ್ಯನವರು ಟಿಕೇಟ್ ನೀಡಿದ್ದರು, ಸೋತ ಮೇಲೂ ಯೋಜನಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ,

ಅವರು ಪಕ್ಷಕ್ಕೆ ಕೆಲಸ ಮಾಡಿದ್ದಾರೆ, ಅವರು ನಮ್ಮ ಸ್ನೇಹಿತರು, ಖಂಡಿತ ಅವರ ಜತೆ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಅವರು ಕಾಂಗ್ರೆಸ್ ಪಕ್ಷದ ಮೆಂಬರ್, ಅವರನ್ನ ಕಾಂಗ್ರೆಸ್ ಎಂಎಲ್ ಸಿ ಮಾಡಿದೆ, ನಾನು ತಬ್ಬಲಿ ಅಲ್ಲ, ಇಬ್ರಾಹಿಂ ಕೂಡ ತಬ್ಬಲಿ ಅಲ್ಲ, ಇಬ್ರಾಹಿಂ ಜತೆ ಕುಳಿತು ಮಾತನಾಡುತ್ತೇನೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ನೇಮಕವಾಗಿರುವ ಪ್ರಕಾಶ್ ರಾಥೋಡ್ ಅವರನ್ನು ಸಿದ್ದರಾಮಯ್ಯ ಅವರು ಅಭಿನಂದಿಸಿದರು.

ಮಾಜಿ ಶಾಸಕರಾದ ಶ್ರೀನಿವಾಸ್, ಅಪ್ಪಾಜಿ ನಾಡಗೌಡ, ವಿಜಯಸಿಂಗ್ ಹಾಜರಿದ್ದರು.




