ಬೆಂಗಳೂರು : ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಬಿಎಸ್ ವೈ ಅವರ ನಿವಾಸಕ್ಕೆ ರಾಜ್ಯಪಾಲ ಥಾವರ್ ಚೆಂದ್ ಗೆಲ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭೇಟಿ ಮಾಡಿ ಸಾಂತ್ವಾನ ಹೇಳಿದರು.
ಮೊಮ್ಮಗಳ ನಿಧನದಿಂದ ದುಃಖದಲ್ಲಿರುವ ಬಿಎಸ್ ವೈ ಅವರ ಕಾವೇರಿ ನಿವಾಸಕ್ಕೆ ತೆರಳಿ ಸಾಂತ್ವಾನ ಹೇಳಿದರು. ಹಾಗೂ ಈ ಸಂದರ್ಭದಲ್ಲಿ ಸಚಿವ ಆನಂದ್ ಸಿಂಗ್ ಕೂಡ ಭೇಟಿ ನೀಡಿದರು.

ಸೌಂದರ್ಯ ಪತಿ ವಿಚಾರಣೆ
ವೈದ್ಯೆ ಸೌಂದರ್ಯ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಗ್ರೌಂಡ್ಸ್ ಪೊಲೀಸರು ಸೌಂದರ್ಯ ವಾಸವಿದ್ದ ಶ್ಯಾಂಗ್ರಿಲಾ ಹೋಟೆಲ್ ಪಕ್ಕದಲ್ಲಿರುವ ಅಪಾರ್ಟ್ ಮೆಂಟ್ ಗೆ ಭೇಟಿ ನೀಡಿದರು.

ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿರುವ ಕೊಠಡಿಯನ್ನು ಮಹಜರು ಮಾಡುವ ಉದ್ದೇಶದಿಂದ ಆಗಮಿಸಿದ ಪೊಲೀಸರು ಸೌಂದರ್ಯ ಪತಿಗಾಗಿ ಸುಮಾರು ಹೊತ್ತು ಕಾದರು.

ಸೌಂದರ್ಯ ಅವರ ಪತಿ ಡಾ. ನೀರಜ್ ಅವರು ಮನೆಯಲ್ಲಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಅವರಿಗಾಗಿ ಕಾದರು. ಸುಮಾರು ಒಂದು ಗಂಟೆಯ ನಂತರ ಅವರು ಬಂದ ನಂತರ ಮನೆಯ ಮಹಜರು ಮಾಡಿದರು.




