ಬೆಂಗಳೂರು : ಮೈಸೂರು ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ನಡೆಸಿ ಆರೋಪಿಗಳ ಹೆಡೆಮುಡಿ ಕಟ್ಟಿದ ಪೊಲೀಸರಿಗೆ ನಟ ಜಗ್ಗೇಶ್ ಅಭಿನಂದನೆ ಸಲ್ಲಿಸಿದ್ದಾರೆ.ಅಲ್ಲದೆ ತನಿಖಾ ತಂಡದ ಸಿಬ್ಬಂದಿಗಳಿಗೆ ಒಂದು ಲಕ್ಷರೂ ಬಹುಮಾನ್ ಘೋಷಿಸಿದರು.
ಕುಮಾರ ಕೃಪಾ ಅತಿಥಿ ಗೃಹದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ 1 ಲಕ್ಷರೂ ಬಹುಮಾನದ ಚೆಕ್ ನ್ನು ಸಚಿವರಿಗೆ ಹಸ್ತಾಂತರಿಸಿದರು.ಮೈಸೂರು ಪೊಲೀಸ್ ಕಮಿಷನರ್ ಹೆಸರಿನಲ್ಲಿ ಚೆಕ್ ಬರೆಯಲಾಗಿದ್ದುಈ ಚೆಕ್ಕಿನ ಜೊತೆಗೆ ಸರ್ಕಾರ ಘೋಷಿಸಿದ 5 ಲಕ್ಷರೂ ಬಹುಮಾನವನ್ನು ಕೆಲವೇ ದಿನಗಳಲ್ಲಿ ಗೃಹ ಸಚಿವರು ತನಿಖಾ ತಂಡದ ಸದಸ್ಯರಿಗೆ ನೀಡಿ ಅಭಿನಂದನೆ ಸಲ್ಲಿಸಲಿದ್ದಾರೆ.
ಮೂರು ತಂಡಗಳಲ್ಲಿ ಒಟ್ಟು 27 ಜನ ಪೊಲೀಸ್ ಸಿಬ್ಬಂದಿಗಳು ಪ್ರಕರಣದ ಜಾಡು ಹಿಡಿದು ಕೇರಳ, ತಮಿಳುನಾಡು ಸೇರಿದಂತೆ ಬೇರೆ ಬೇರೆ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ್ದರು.ದೇಶ,ರಾಜ್ಯದ ಗಮನ ಸೆಳೆದಿದ್ದ ಪ್ರಕರಣ ಭೇದಿಸಿದ ಪೊಲೀಸರಿಗೆ 5 ಲಕ್ಷ ಬಹುಮಾನ ಘೋಷಣೆ ಮಾಡಿರುವುದು ಸಮಜಂಸವಲ್ಲವೆಂಬ ಮಾತುಗಳು ಕೇಳಿ ಬರುತ್ತಿದೆ.