ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಏನೇ ಮಾಡಿದ್ರೂ ಸಿಕ್ಕಾಪಟ್ಟೆ ಸುದ್ದಿಯಾಗುತ್ತದೆ. ಕ್ರಿಕೆಟ್ ನಲ್ಲಿದ್ದರೂ ಸಹ ಮಾಹಿ ಸಿನಿಮಾ ಜಗತ್ತಿನ ಜೊತೆಗೂ ನಂಟು ಇಟ್ಟುಕೊಂಡಿದ್ದರು. ತಮ್ಮ ಜೀವನ ಚರಿತ್ರೆಯನ್ನು ಬಯೋಪಿಕ್ ಆಗಿ ನೋಡಿದ್ದ ಧೋನಿ, ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹೌದು… ಟೀಮ್ ಇಂಡಿಯಾದ ಕೂಲ್ ಕ್ಯಾಪ್ಟನ್ ಧೋನಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಮಾಸ್ ಅವತಾರದಲ್ಲಿ ಕಾಣಿಸಿಕೊಂಡ ಧೋನಿ
ಅಥರ್ವನ ಅವತಾರದಲ್ಲಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡಿದ್ದಾರೆ.. ಯಾವ ಸಿನಿಮಾ ಹೀರೋಗೂ ಕಡಿಮೆ ಇಲ್ಲದಂತೆ ಮಾಹಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ ಹೀಗೆ ಕಾಣಿಸಿಕೊಂಡಿರುವುದು ಸಿನಿಮಾಗಾಗಿ ಅಲ್ಲ..

ಒಂದು ಕಾದಂಬರಿಗಾಗಿ. ಟೀಸರ್ ಅನ್ನು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ಧೋನಿ ಹಂಚಿಕೊಂಡಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
‘ಅಥರ್ವ ದಿ ಒರಿಜಿನ್’ ಗ್ರಾಫಿಕ್ಸ್ ಕಾದಂಬರಿಯಲ್ಲಿ ಧೋನಿ ಶೈನ್
‘ಅಥರ್ವ ದಿ ಒರಿಜಿನ್’ ಎಂಬ ಗ್ರಾಫಿಕ್ಸ್ ಕಾದಂಬರಿಗಾಗಿ ಧೋನಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಆನಿಮೇಟೆಡ್ ಚಿತ್ರವಾಗಿದ್ದು, ಎಂ.ಎಸ್.ಧೋನಿ ಅಥರ್ವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಪಾತ್ರದ ಕುರಿತಾಗಿ ಟೀಸರ್ ನ್ನು ಧೋನಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಒಂದು ಕೈಯಲ್ಲಿ ಕತ್ತಿ ಹಿಡಿದಿರೋ ಮಾಹಿ ಕತ್ತಿನಲ್ಲಿ ವಿಭಿನ್ನ ಆಭರಣಗಳನ್ನ ಹಾಕಿಕೊಂಡು ವೈರಿಗಳ ರುಂಡವನ್ನು ಚಂಡಾಡುತ್ತಿರುವಂತೆ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾಹಿಯ ಈ ಹೊಸ ಲುಕ್ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದು, ಅಥರ್ವ ವೆಬ್ ಸಿರೀಸ್ ಗಾಗಿ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.