ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಜ್ಞಾ ಅಭಿಯಾನ : ಜಯ ಮೃತ್ಯುಂಜಯ ಶ್ರೀಗಳಿಂದ ನಾಳೆ ಚಾಲನೆ

ಬೆಂಗಳೂರು : ಲಿಂಗಾಯಿತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ 2ಎಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮಿ ಆಗಸ್ಟ್ 26ರಿಂದ ಅಕ್ಟೋಬರ್ 1ರವರೆಗೆ ರಾಜ್ಯಾದ್ಯಂತ “ಪ್ರತಿಜ್ಞಾ ಪಂಚಾಯತ್ ಬೃಹತ್  ರಾಜ್ಯ ಅಭಿಯಾನ ” ನಡೆಸಲಿದ್ದಾರೆ.

ಈ ಅಭಿಯಾನವನ್ನು ಇತಿಹಾಸ ಪ್ರಸಿದ್ಧ ಚಾಮರಾಜನಗರದ ಜಿಲ್ಲೆಯ ಮಲೆ ಮಹಾದೇಶ್ವರ ಬೆಟ್ಟದಿಂದ ಆರಂಭವಾಗಿ ಮೈಸೂರು,ಕಿತ್ತೂರು ಕರ್ನಾಟಕ,ಕಲ್ಯಾಣ ಕರ್ನಾಟಕ  ಮೂಲಕ ಬೆಂಗಳೂರಿನ ವಿಧಾನ ಸೌಧದವರೆಗೂ  ನಡೆಯಲಿದೆ.ಲಿಂಗಾಯತ ಪಂಚಮಸಾಲಿ,ಗೌಡ ಲಿಂಗಾಯತ,ಮಲೆಗೌಡ,ದೀಕ್ಷಾ ಲಿಂಗಾಯಿತರಿಗೆ ಹಿಂದುಳಿದ ವರ್ಗಗಳ 2ಎ ಮತ್ತು ಎಲ್ಲಾ ಸಮಾಜಗಳನ್ನು ಕೇಂದ್ರ ಸರ್ಕಾರದ  ಒಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಲು ಮತ್ತೊಮ್ಮೆ ಹೋರಾಟಕ್ಕೆ ಮುಂದಾಗಿದ್ದಾರೆ.

ಪ್ರತಿಜ್ಞಾ ಪಂಚಾಯತ್ ಬೃಹತ್  ರಾಜ್ಯ ಅಭಿಯಾನನಕ್ಕೂ ಮುನ್ನ ಜಯಮೃತ್ಯುಂಜಯ ಸ್ವಾಮೀಜಿ ನಾಳೆ ಬುಧವಾರ  ಬೆಳಗ್ಗೆ 12 ನಗರದ ಚಾಲುಕ್ಯವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಹೋರಾಟದ ಕಹಳೆ ಮೊಳಗಿಸಲಿದ್ದಾರೆ.ಆ ಮೂಲಕ ಮೀಸ ಲಾತಿ ಪಡೆಯಲುಜಲ ಜಾಗೃತಿ ಅನಿವಾರ್ಯವೆಂಬ ಸಂದೇಶ ಸಾರುವ ಪ್ರಯತ್ನಕ್ಕೆ ಅವರು ಮುಂದಾಗಿದ್ದಾರೆ.

More News