ಬೆಂಗಳೂರು : ವಿಜಯ ಭಾಸ್ಕರ್ ಅವರ ನೇತೃತ್ವದ ಆಡಳಿತ ಸುಧಾರಣಾ ಸಮಿತಿಯು ಆಡಳಿತ ವ್ಯವಸ್ಥೆಯಲ್ಲಿ ಕೆಲ ಸುಧಾರಣೆ ತರುವ ಶಿಫಾರಸು ಮಾಡಿದ್ದು,ನವೆಂಬರ್ 1 ರಿಂದ ಈ ಶಿಫಾರಸುಗಳನ್ನು ಜಾರಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವ ರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ವಿಕಾಸೌಧದಲ್ಲಿ ಮೊದಲ ಬಾರಿಗೆ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು,ಮಾಜಿ ಮುಖ್ಯ ಕಾರ್ಯದರ್ಶಿ ವಿಜಯಬಾಸ್ಕರ್ ಅವರ ಸಮಿತಿ ಕೊಟ್ಟಿರುವ ಶಿಫಾರಸುಗಳ ಜಾರಿಗೆ ಸಲಹಾ ಸಮಿತಿ ರಚಿಸ್ತೇವೆ.ಈ ಸಂಬಂ ಧ ಆಡಳಿತಾತ್ಮಕವಾಗಿ ಬಹುತೇಕ ನವೆಂಬರ್ 1ರಿಂದ ಶಿಫಾರಸುಗಳ ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದರು.
ಬಜೆಟ್ ನಲ್ಲಿ ಪ್ರಸ್ತಾಪಿಸಿರುವ ಹೊಸ ಕಾರ್ಯಕ್ರಮಗಳ ಜಾರಿಗೆ ಸೂಚಿಸಲಾಗಿದೆ.ಕೇಂದ್ರದ ಸಹಯೋಗದ ಯೋಜನೆಗಳಿಗೆ ಒತ್ತು ಕೊಡಬೇಕು.ಮುಂದಿನ ತ್ರೈಮಾಸಿಕ ಸಭೆಯಲ್ಲಿ ಈಗ ಕೊಟ್ಟಿರುವ ಯೋಜನೆಗಳನ್ನು ಗುರಿ ತಲುಪಬೇಕು.ಪ್ರಮುಖ ಅಭಿವೃದ್ಧಿ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡುವಂತೆ ಸೂಚನೆ ನೀಡಲಾ ಗಿದೆ.ಜಿಡ್ಡು ಹಿಡಿದ ವ್ಯವಸ್ಥೆಯನ್ನು ಸುಧಾರಿಸಲು ಸ್ವಲ್ಪ ಕಾಲಾ ವಕಾಶ ಬೇಕಿದೆ.ಇಲಾಖಾವಾರು ಹಣ ಬಿಡುಗಡೆ ಆಗಿರುವುದರಲ್ಲಿ ಯಾವುದಕ್ಕೆ ಎಷ್ಟು ಖರ್ಚಾಗ್ತಿದೆ ಎಂಬುದರ ಮಾಹಿತಿ ಯನ್ನು ಕೇಳಲಾಗಿದೆ ಎಂದು ತಿಳಿಸಿದರು.
ಮೂರು ಜಿಲ್ಲೆಗಳಲ್ಲಿ ಅಪೌಷ್ಠಿಕತೆ :ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉತ್ತರ ಕರ್ನಾಟಕದ ರಾಯಚೂರು,ಯಾದ ಗಿರಿ,ಗುಲ್ಬರ್ಗ ಜಿಲ್ಲೆಗಳಲ್ಲಿ ಮಕ್ಳಳಲ್ಲಿ ಅಪೌಷ್ಟಿಕತೆ ಹಾಗೂ ಶಿಕ್ಷಣದಲ್ಲಿ ಕಡಿಮೆ ಸಾಧನೆ ಮಾಡಿರುವುದು ಬೆಳಕಿದೆ ಬಂದಿದೆ.ಇದ ನ್ನು ಹೋಗಲಾಡಿಸಲು ವಿಶೇಷ ಪ್ಲಾನ್ ಮಾಡಲಾಗಿದೆ. ಮಕ್ಕಳ ಆರೋಗ್ಯ,ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲು ವಿಶೇಷ ಯೋಜನೆ ಜಾರಿಗೆ ತರಲಾಗು ವುದು.ಈ ಮೂರೂ ಜಿಲ್ಲೆಗಳಲ್ಲಿನ ಸಣ್ಣಮಕ್ಕಳು,ಹೆಣ್ಣುಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ರೂಪಿಸುವ ಮೂಲ ಕ ಇತರೆ ಜಿಲ್ಲೆಗಳ ಮಕ್ಕಳ ಪೌಷ್ಠಿಕತೆ ಹಾಗೂ ಹಣ್ಣು ಮಕ್ಕಳ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಡತ ವಿಲೇವಾರಿ ವೇಳೆ ಕಂದಾಯ,ನಗರಾಭಿವೃದ್ಧಿ,ಶಿಕ್ಷಣ ಇಲಾಖೆಯಲ್ಲಿ ಕಡತ ವಿಲೇವಾರಿ ಪ್ರಕರಣ ಕಡಿಮೆ ಇದೆ.ಹೆಚ್ಚಿನ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಇತ್ಯರ್ಥಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಪ್ರಕರಣಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕಾನೂನು ಮತ್ತು ಕಂದಾಯ ಇಲಾಖೆಗಳಿಗೆ ಸೂಚಿಸಲಾಗಿದೆ.
ಕಾರ್ಯದರ್ಶಿಗಳು ಅವರ ಇಲಾಖೆ ಯೋಜನೆಗಳು,ಕಾಮಗಾರಿಗಳಅನುಷ್ಠಾನಗೊಳಿಸುವುದು ಮುಖ್ಯ. ಅದಕ್ಕಾಗಿ ಕಾರ್ಯದರ್ಶಿ ಗಳು ಜಿಲ್ಲೆ,ತಾಲೂಕುಗಳಿಗೆ ಭೇಟಿ ನೀಡಿ ಯೋಜನೆ ಬಗ್ಗೆ ಪರಿಶೀಲನೆ ನಡೆಸಿದರೆ ಮಾತ್ರ ಸುಧಾರಣೆ ಸಾಧ್ಯವೆಂದಿದ್ದೇನೆ.ಬದಲಾವಣೆ ಅಷ್ಟು ಸುಲಭವಲ್ಲ.ಜಡತ್ವ ಇದೆ.ಇಲಾಖೆ ಕೆಲಸ ಕಾರ್ಯಗಳಿಗೆ ಚುರುಕು ಮುಟ್ಟಿಸಿದ್ದೇನೆ. ಇಲಾಖೆಯಲ್ಲಿ ಪಾರದರ್ಶಕತೆ ತರಬೇಕು ಎಂಬ ಸಂದೇಶ ನೀಡಿದ್ದೇವೆ.ಯೋಜನೆಗಳಿಂದ ಜನರಿಗೆ ಅನುಕೂಲವಾಗಲೇ ಬೇಕು ಹೊರತು.ನಿಮ್ಮ ಸುತ್ತ ಜನರು ಸುತ್ತಬಾರದು ಅದಕ್ಕಾಗಿ ಜನಪರ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ರಾಜ್ಯದ ಹಣಕಾಸು ಪರಿಸ್ಥಿತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,ಕೋವಿಡ್ 3ನೇ ಅಲೆ ಬರದಿದ್ದರೆ ಹಣಕಾಸು ಸುಧಾರಣೆಯಾ ಗಲಿದೆ.ಶೇ 5ರಷ್ಟು ಹಣ ಉಳಿತಾಯ ಮಾಡುವುದು ಅಧಿಕಾರಿಗಳಿಗೆ ತಿಳಿ ದಿದೆ.ಆಡಳಿತ,ಮೇಲ್ವಿಚಾರಣೆ ಖರ್ಚು ವೆಚ್ಚವನ್ನು ನಿಯಂ ತ್ರಿಸಿದರೆ ಸಾಕಷ್ಟು ಹಣ ಉಳಿತಾಯವಾಗಲಿದೆ. ಜಿಎಸ್ ಟಿ ಪರಿಹಾರ ಹಣ ಕೂಡ ನಮಗೆ ಸಿಗ್ತಿದೆ.ಹಣಕಾಸಿನ ಸಮಸ್ಯೆ ಸುಧಾರಿಸು ತ್ತಿದೆ.ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಎಂಎಲ್ ಸಿ ಎಚ್ ವಿಶ್ವನಾಥ್ ಅಳಿಯ ಎಚ್ ಸಿ ರಮೇಂದ್ರ ವರ್ಗಾವಣೆ ವಿಚಾರವಾಗಿ ವರ್ಗಾವಣೆ ಹಿಂದೆ ಪ್ರಭಾವಿ ನಾಯಕ ರೊಬ್ಬರ ಒತ್ತಡ ಇದೆ ಎಂಬ ಆರೋಪ ಬಗ್ಗೆ ಪ್ರತಿಕ್ರಿಯೆ ಕೊಡಲು ಸಿಎಂ ನಿರಾಕರಿಸಿದ ರು.ವೈಯಕ್ತಿಗತ ವಿಚಾರಗಳಿಗೆ ನಾನು ಮಾತಾಡಲ್ಲ ಎಂದು ತಿಳಿಸಿದರು.




