ಬೆಂಗಳೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಗೆ ದೂರು ಸಲ್ಲಿಸಿದ್ದಾರೆ.
ವಿಧಾನಸೌಧದಲ್ಲಿ ಸಿಎಸ್ ಗೆ ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಾ.ರಾ.ಮಹೇಶ್, ಬ್ಯಾಗ್ ಖರೀದಿಯಲ್ಲಿ ಭಾರೀ ಹಗರಣ ನಡೆದಿದೆ ಎಂದು ಆರೋಪಿಸಿದರು. ೧ ಕೋಟಿ ಮೌಲ್ಯದ ಬ್ಯಾಗ್ ಗಳಿಗೆ ೭ ಕೋಟಿ ಹಣ ನೀಡಿ ಖರೀದಿ ಮಾಡಲಾಗಿದೆ ಎಂದು ತಿಳಿಸಿದರಲ್ಲದೆ, ಖರೀದಿಸಿದ್ದ ಬ್ಯಾಗ್ ಅನ್ನು ಪ್ರದರ್ಶಿಸಿದರು.
ಬ್ಯಾಗ್ ಬೆಲೆ ೯ ರೂಪಾಯಿ ಜಿಎಸ್ ಟಿ ಸೇರಿ ೧೨ ರೂಪಾಯಿ ಆಗಲಿದೆ, ಅದಕ್ಕೆ ೫೨ ರೂಪಾಯಿ ಹಣ ಕೊಟ್ಟು ಖರೀದಿಸಲಾಗಿದೆ. ಒಟ್ಟು ಬ್ಯಾಗ್ ಖರೀದಿಗೆ ೬.೧೮ ಕೋಟಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.
SFC ಸ್ಟೇಟ್ ಫೈನಾನ್ಸ್ ಕಮಿಷನ್ ಮೂಲಕ ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ. ಗ್ರಾ.ಪಂ 2ಲಕ್ಷ, ನಗರ ಸಭೆಗೆ1.5 ಲಕ್ಷ, ಒಟ್ಟಾರೆ 14 ಲಕ್ಷ ಬ್ಯಾಗ್ ಖರೀದಿ ಮಾಡಲಾಗಿದೆ. ಇದು ಅಲ್ಲಲ್ಲಿಯ ಜನಪ್ರತಿನಿಧಿಗಳು ಸಭೆ ಕರೆದು ಕ್ರಿಯಾ ಯೋಜನೆ ಮಾಡಿ ಅಲ್ಲೇ ತೀರ್ಮಾನ ಮಾಡುವ ಯೋಜನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಗನ್ನ ಸಿಎಂಗೆ ತೋರಿಸಿದ್ದೇನೆ, 10 ಹಾಗೂ 5 ಕೆ.ಜಿ ಬ್ಯಾಗ್ ಎರಡಕ್ಕೂ 52ರೂಪಾಯಿ ನೀಡಿದ್ದಾರೆ, ಬಲ್ಕ್ ಆಗಿ ಖರೀದಿಸಿದ್ರೆ 8ರೂಗೆ ಸಿಗಲಿದೆ ಎಂದು ತಿಳಿಸಿದರು. ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಅಧಿಕಾರಿ ರೋಹಿಣಿ ಅವರನ್ನ ಅಮಾನತ್ತು ಮಾಡಬೇಕೆಂದು ಸಿಎಂಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.




