ಮುಂಬಯಿ : ತಮ್ಮ ಛಪಾಕ್ ಚಿತ್ರದಲ್ಲಿ ಜತೆಯಲ್ಲಿ ಕೆಲಸ ಮಾಡಿದ್ದ ಬಾಲಾ ಅವರಿಗೆ ಸಹಾಯ ಮಾಡಲು ನಟಿ ದೀಪಿಕಾ ಪಡುಕೋಣೆ ಮುಂದಾಗಿದ್ದಾರೆ.
ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಅವರು, ದೆಹಲಿಯ ಸಪ್ಜರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಜೀವನೋಪಾಯಕ್ಕೆ ಹಾಗೂ ಪ್ರತಿದಿನ ನಡೆಯುತ್ತಿರುವ ಡಯಾಲಿಸಿಸ್ ಗೆ ಕಷ್ಟಪಡುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ 15ಲಕ್ಷ ರೂಪಾಯಿ ದೇಣಿಗೆನೀಡಿದ್ದಾರೆ.
ದೀಪಿಕಾ ಪಡುಕೋಣೆಅವರ ಉದಾರ ಕಾರ್ಯಕ್ಕೆ ಛನ್ವ ಫೌಂಡೇಶನ್ ನ ನಿರ್ದೇಶಕ ಆಶಿಶ್ ಶುಕ್ಲಾ ಧನ್ಯವಾದ ಅರ್ಪಿಸಿದ್ದಾರೆ. “ಆಸಿಡ್ ದಾಳಿಯಿಂದ ಬದುಕುಳಿದ ಬಾಲಾ ಹೊಸ ಭರವಸೆಯನ್ನು ಕಂಡುಕೊಂಡಿದ್ದಾರೆ. ಏಕೆಂದರೆ ದೀಪಿಕಾ ಪಡುಕೋಣೆ ತನ್ನ ಜೀವವನ್ನು ಉಳಿಸಲು ಸಹಾಯ ಹಸ್ತ ಚಾಚಿದರು. ಮಾರಣಾಂತಿಕ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಬಾಲಾ ಬದುಕಲು ತುರ್ತಾಗಿ ಮೂತ್ರಪಿಂಡ ಕಸಿ ಮಾಡುವ ಅಗತ್ಯವಿದೆ. ಈ ಮಾತು ದೀಪಿಕಾರಿಗೆ ತಲುಪಿತು ಮತ್ತು ಅವರು ‘ಸೇವ್ ಬಾಲಾ’ ಅಭಿಯಾನಕ್ಕೆ 15ಲಕ್ಷ ದಷ್ಟು ಉದಾರ ಹಣವನ್ನು ದಾನ ನೀಡಿದ್ದಾರೆ”ಎಂದು ಶುಕ್ಲಾ ಹೇಳಿದ್ದಾರೆ.