ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿ,ಪ್ರವಾಹ ಪರಿಸ್ಥಿತಿ ಹಿನ್ನೆಲೆ ರಾಜ್ಯಕ್ಕೆ ಕೇಂದ್ರದ ನೆರೆಹಾನಿ ಅಧ್ಯಯನ ತಂಡ ಭೇಟಿ ನೀಡಲಿದೆ. ಸೆ.4 ರಿಂದ ಸೆ.7ರ ವರೆಗೆ ನಾಲ್ಕು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು,ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ ಅಧ್ಯಯನ ನಡೆಸಲಿದೆ.
ಸೆ.4ಕ್ಕೆ ನೆರೆ ಅಧ್ಯಯನಕ್ಕೆ ರಾಜ್ಯಕ್ಕೆ ಆಗಮಿಸಲಿರುವ ಏಳು ಸದಸ್ಯರ ಕೇಂದ್ರದ ಅಧಿಕಾರಿಗಳ ನಿಯೋಗ ಮೂರು ಪ್ರತ್ಯೇಕ ತಂಡ ಗಳಾಗಿ ನೆರೆ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲಿದೆ.ಸೆ.4ಕ್ಕೆ ಸಂಜೆ ನಾಲ್ಕು ಗಂಟೆಗೆ ಮುಖ್ಯಮಂತ್ರಿ ಜೊತೆ ಕೇಂದ್ರ ಅಧ್ಯಯನ ತಂಡ ಚೆರ್ಚೆ ನಡೆಸಲಿದೆ.ಸೆಪ್ಟೆಂಬರ್ 5 ಮತ್ತು 6 ರಂದು ಎರಡು ದಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ.ಧಾರವಾಡ,ಬೆಳ ಗಾವಿ,ಬಾಗಲಕೋಟೆ,ಉತ್ತರ ಕನ್ನಡ, ಹಾವೇರಿ ಜಿಲ್ಲೆಗಳಲ್ಲಿ ಮಳೆ ಹಾನಿ ಬಗ್ಗೆ ಅಧ್ಯಯನ ನಡೆಸಲಿದೆ.

ಸಾಂದರ್ಭಿಕ ಚಿತ್ರಸಾಂದರ್ಬಿಕ ಚಿತ್ರ : ಪ್ರವಾಹ ಮತ್ತು ಅತಿವೃಷ್ಠಿಯಿಂದ ಸಂಕಷ್ಟಕ್ಕೆ ಒಳಗಾದ ಗ್ರಾಮಗಳ
ಬೆಳಗಾವಿ ಜಿಲ್ಲೆಗೆ ಮೂರು ಸದಸ್ಯರ ತಂಡ ಎರಡು ದಿನಗಳ ಕಾಲ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ.ಹಾವೇರಿ,ಉತ್ತರ ಕನ್ನಡ ಜಿಲ್ಲೆಗಳಿಗೆ ಎರಡು ಸದ್ಯರ ತಂಡ ಹಾಗೂ ಧಾರವಾಡ ಮತ್ತು ಬಾಗಲಕೋಟೆ ಗೆ ಎರಡು ಸದಸ್ಯರ ಪ್ರತ್ಯೇಕ ತಂಡ ಬೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಹಾನಿಯ ಅಧ್ಯಯನ ನಡೆಸಲಿದೆ.ಸೆ.7ಕ್ಕೆ ಅಧ್ಯಯನ ತಂಡ ವಾಪಸ್ಸಾಗಲಿದೆ.
ನೆರೆ ಹಾನಿಯ ಅಂದಾಜು ಎಷ್ಟು? : ಜುಲೈನಲ್ಲಿ ರಾಜ್ಯದಲ್ಲಿ ಸುರಿದ ಭಾರೀ ಮಳೆಗೆ ಬೆಳಗಾವಿ,ಹಾವೇರಿ,ಉತ್ತರ ಕನ್ನಡ,ಧಾರವಾ ಡ,ಬಾಗಲಕೋಟೆ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದು ಭಾರೀ ಬೆಳೆ,ಆಸ್ತಿ ಹಾನಿಗೀ ಡಾಗಿದೆ.5,690.52 ಕೋಟಿ ರೂ.ಒಟ್ಟು ನೆರೆ ಹಾನಿ ಸಂಭವಿಸಿರುವ ಬಗ್ಗೆ ಅಂದಾಜಿಸಿದೆ.ಎಸ್ ಡಿಆರ್ ಎಫ್ ಮಾರ್ಗಸೂಚಿ ಅನ್ವಯ 765.84 ಕೋಟಿ ರೂ.ನೆರೆ ನಷ್ಟ ಅಂದಾಜು ಮಾಡಿದೆ.ರಾಜ್ಯ ಸರ್ಕಾರ ನೆರೆ ಹಾನಿ ವರದಿಯನ್ನು ಕೇಂದ್ರಕ್ಕೆ ನೀಡಿದೆ.
ಮಳೆ ಹಾನಿಗೆ 1,94,656 ಹೆಕ್ಟೇರ್ ಪ್ರದೇಶಗಳಲ್ಲಿ ಕೃಷಿ ಬೆಳೆ ಹಾನಿ ಸಂಭವಿಸಿದೆ.10076 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ.358 ಪ್ರಾಣಿಗಳು ಅಸುನೀಗಿದೆ.18719 ಮನೆಗಳು ಹಾನಿಯಾಗಿವೆ.22,725 ಕಿ.ಮೀ. ರಸ್ತೆಗಳು ನೆರೆ ಹಾನಿ ಸಂಭವಿಸಿದೆ.