ಬೆಂಗಳೂರು :ಮೋಟಾರು ಬೈಕು,ಟಿವಿ,ಫ್ರಿಡ್ಜ್ ಹೊಂದಿರುವ ಕುಟುಂಬಗಳ ಅಂತ್ಯೋದಯ ಅನ್ನ ಮತ್ತು ಆದ್ಯತಾ(ಬಿಪಿಎಲ್) ಪಡಿ ತರ ಚೀಟಿಗಳನ್ನು ಇಲಾಖೆ ರದ್ದುಪಡಿಸಿರುವುದಿಲ್ಲ ಅಥವಾ ರದ್ದುಪಡಿಸುವುದಿಲ್ಲ.ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಆಹಾರ ಹಾಗೂ ನಾಗರೀಕ ಪೂರೈಕೆ ಇಲಾಖೆ ಸ್ಪಷ್ಟನೆ ನೀಡಿದೆ.
ಮೋಟಾರು ಬೈಕು,ಟಿವಿ,ಫ್ರಿಡ್ಜ್ ಹೊಂದಿರುವ ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳನ್ನು ಸರ್ಕಾರವ ರದ್ದುಪಡಿಸಿದೆ ಎಂಬ ಆತಂ ಕ ಕಂಡು ಬಂದಿರುವ ಹಿನ್ನಲೆಯಲ್ಲಿ,ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಇಲಾಖೆ ಸ್ಪಷ್ಟೀಕರಣ ನೀಡಿದೆ. ಬೈಕು,ಟಿವಿ,ಫ್ರಿಡ್ಜ್ ಹೊಂದಿರುವ ಕುಟುಂಬಗಳು ಆದ್ಯತಾ ಪಡಿತರ ಚೀಟಿಗಳನ್ನು ಹೊಂದಲು ಸರ್ಕಾರ ನಿಗದಿಪಡಿಸಿರುವ ಮಾನದಂಡಗಳಲ್ಲಿ ಅವಕಾಶವಿದೆ.ಬೈಕು,ಟಿವಿ,ಫ್ರಿಡ್ಜ್ ಹೊಂದಿರುವ ಕುಟುಂಬಗಳ ಹೊಂದಿರುವ ಅಂತ್ಯೋದಯ,ಅನ್ನ ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂಬ ಸುದ್ದಿ ಆಧಾರರಹಿತವಾಗಿದೆ.ಇಂಥ ಯಾವುದೇ ನಿರ್ದೇ ಶನ ಅಥವಾ ಆದೇಶವನ್ನು ರಾಜ್ಯ ಸರ್ಕಾರ ಯಾವುದೇ ಜಿಲ್ಲೆಗಳಿಗೆ ನೀಡಿರುವುದಿಲ್ಲ ಎಂದು ಇಲಾಖೆ ಪ್ರಕಟಣೆ ನೀಡಿದೆ.
ರಾಜ್ಯದಲ್ಲಿ ಸರ್ಕಾರ ನಿಗಧಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ ಅನರ್ಹ ಅಂತ್ಯೋದಯ ಅನ್ನ ಮತ್ತು ಆದ್ಯತಾ(ಬಿಪಿಎ ಲ್) ಪಡಿತರ ಚೀಟಿ ಹೊಂದಿದ್ದಾರೆ ಎಂಬ ದೂರುಗಳ ಸಾರ್ವಜನಿಕರಿಂದ ಬಂದಿರುವ ಹಿನ್ನೆಲೆಯಲ್ಲಿ ಅಂತಹ ಅನರ್ಹ ಕುಟುಂ ಬಗಳು ಇಲಾಖೆಯಿಂದ ಪಡೆದಿರುವ ಪಡಿತರ ಚೀಟಿಗಳನ್ನು ಹಿಂತಿರಿಗಿಸಲು ಸೂಚಿಸಲಾಗಿದೆ.ಜೊತೆಗೆ ವಿವಿಧ ರೀತಿಯ ಪರಿಶೀಲನೆ ಗಳಿಂದ ಅನರ್ಹರನ್ನು ಪತ್ತೆ ಮಾಡಿ ಆದ್ಯತೇತರ ಕುಟುಂಬಗಳಿಗೆ (ಎಪಿಎಲ್) ವರ್ಗಾಯಿಸಲಾಗುತ್ತಿದೆ ಎಂದು ಇಲಾಖೆ ಸ್ಪಷ್ಟಪಡಿ ಸಿದೆ.

ಸಾಂದರ್ಭಿಕ ಚಿತ್ರ : ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ
ಮೂರು ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿರುವ ಮತ್ತು ವಾರ್ಷಿಕ ಆದಾಯ ರೂ.1.20 ಲಕ್ಷಕ್ಕಿಂತ ಹೆಚ್ಚು ಇರುವ ಕುಟುಂಬ ಗಳ ಪ್ರಸ್ತುತ ಸ್ಥಿತಿಗತಿಗಳನ್ನು ಪರಿಶೀಲಿಸಿ ಕುಟುಂಬಗಳ ಅನರ್ಹತೆಯನ್ನು ನಿರ್ಧರಿಸಿ,ಆದ್ಯತೇತರ ವರ್ಗಕ್ಕೆ (ಎಪಿಎಲ್) ಪರಿವರ್ತಿ ಸುವ ಬಗ್ಗೆ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಈ ಪರಿಶೀಲನೆ ಇನ್ನೂ ಪ್ರಗತಿಯಲ್ಲಿದೆ ಎಂದು ಪ್ರಕಟಣೆ ಯಲ್ಲಿ ವಿವರಿಸಿದೆ.
ಜೊತೆಗೆ ಆದಾಯ ತೆರಿಗೆ ಇಲಾಖೆ ಮತ್ತು ವಾರ್ಷಿಕ ವರಮಾನ ಹಾಗೂ ಇತರೆ ಕಾರಣಗಳಿಗಾಗಿ ಆದ್ಯತೇರ ಕುಟುಂಬಕ್ಕೆ ವರ್ಗಾಯಿಸಲ್ಪಟ್ಟ ಕೆಲವು ಕುಟುಂಬಗಳು ಈ ವಿಷಯವಾಗಿ ಸಲ್ಲಿಸುವ ಮನವಿಗಳನ್ನು ಸಹ ಮರುಪರಿಶೀಲಿಸಿ,ಅರ್ಹ ಕುಟುಂಬಗಳನ್ನು ಆದ್ಯತಾ ಕುಟುಂಬಗಳಾಗಿ ಮುಂದುವರೆಸಲು ಜಿಲ್ಲಾಧಿಕಾರಿ ಗಳಿಗೆ ಕಾಲಕಾಲಕ್ಕೆ ಸೂಚನೆ ನೀಡಲಾಗುತ್ತಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಯಾವುದೇ ಅರ್ಹ ಕುಟುಂಬಗಳ ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿಗಳನ್ನು ಯಾವುದೇ ಅಧಿಕಾರಿ ಆಧಾರ ರಹಿತವಾಗಿ ರದ್ದುಪಡಿಸಿದರೆ ಅಥವಾ ಅದ್ಯೇತರಕ್ಕೆ ಪರಿವರ್ತಿಸಿದರೆ, ಅಂತಹ ಕುಟುಂಬಗಳು ತಾಲೂಕಿನ ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳು ಅಥವಾ ಆಹಾರ ಇಲಾಖೆ ಜಂಟಿ /ಉಪ ನಿರ್ದೇಶಕರನ್ನು ಸಂಪರ್ಕಿಸಲು ತಿಳಿಸಲಾಗಿದೆ.ಅಂತಹ ಕುಟುಂಬಗಳಿಗೆ ಯಾವುದೇ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇಲಾಖೆ ಪತ್ತೆ ಮಾಡಿರುವ ಪ್ರಕರಣಗಳೆಷ್ಟು? :
ವರದಿಯಾದ ಒಟ್ಟು ಅನರ್ಹ ಕುಟುಂಬ- 3,55,516
ಸರ್ಕಾರಿ ನೌಕರರು- 2127
ವರದಿಯಾದ ಅಂತ್ಯೋದಯ ಕಾರ್ಡ್- 27,527
ಆದ್ಯೇತತರಕ್ಕೆ ಪರಿವರ್ತಿಸಿದ ಅಂತ್ಯೋದಯ ಕಾರ್ಡ್- 7413
ವರದಿಯಾದ ಆದ್ಯತಾ ಕಾರ್ಡ್- 3,28,178
ಆದ್ಯೇತರಕ್ಕೆ ಪರಿವರ್ತಿಸಿದ ಆದ್ಯತಾ ಕಾರ್ಡ್- 1,09,790
ಈವರೆಗೆ ಪರಿವರ್ತಿಸಿದ ಒಟ್ಟು ಕುಟುಂಬ- 1,17,203