ಅಭಿಮಾನಿಯ ಮಗುವಿನೊಂದಿಗೆ ಕಾಲ ಕಳೆದ ದೊಡ್ಮನೆ ಹುಡುಗ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಲ್ಲರೊಂದಾಗಿ ಬೆರೆಯುವ ಸಿಂಪಲ್ ದೊಡ್ಮನೆ ಹುಡುಗ. ಕಳೆದ ಎರಡು ದಿನಗಳ ಹಿಂದೆ ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಕುರಿಗಾಹಿಗಳ ಜೊತೆ ಕಾಲ ಕಳೆದು ಅವರೊಂದಿಗೆ ಊಟ ಮಾಡಿ ಸರಳತೆ ಮೆರೆದಿದ್ದರು.

ಅದರಂತೆಯೇ ಇಂದೂ ಕೂಡ ಅವರು ತಮ್ಮ ಅಭಿಮಾನಿಯೊಬ್ಬರ ಮಗುವನ್ನು ಎತ್ತಿಕೊಂಡರು. ಹಾಗೆಯೇ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಪೋಷಕರು ಫೋಟೋ ತೆಗೆಸಿಕೊಂಡರು.

ಎರಡು ದಿನಗಳ ಹಿಂದೆ ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲು ತೆರಳಿದ್ದರು. ಆದರೆ, ಪವರ್ ಸ್ಟಾರ್ ಅವರಿಗೆ ಕೊರೊನಾ ಹಿನ್ನೆಲೆಯಲ್ಲಿ  ದೇವರ ದರ್ಶನಕ್ಕೆ ಅವಕಾಶ ಸಿಗಲಿಲ್ಲ. ಹಾಗಾಗಿ ಅಭಿಮಾನಿ ದೇವರುಗಳ ದರ್ಶನವನ್ನು ಅಪ್ಪು ಪಡೆದರು.

ಇದರಿಂದ ಬೇಸರಗೊಳ್ಳದೇ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಟ ನಡೆಸಿದ ಪುನೀತ್ ರಾಜಕುಮಾರ್, ಗಂಗಾವತಿ ಸಮೀಪದ ಹಳ್ಳಿಗಳಿಗೆ ತೆರಳಿದರು. ಬಳಿಕ ಕುರಿಗಾಹಿಗಳ ಬಳಿ ತೆರಳಿದ ಪುನೀತ್ ಅವರ ಮಕ್ಕಳನ್ನು ಎತ್ತಿಮುದ್ದಾಡಿ ಅವರೊಂದಿಗೆ ಕಾಲ ಕಳೆದರು. ಮಾತ್ರವಲ್ಲ ಅವರೊಂದಿಗೆ ನೆಲದ ಮೇಲೆ ಕುಳಿತು ಊಟ ಸವಿದರು.

ಅಪ್ಪು ಫ್ಯಾನ್ಸ್ ತಮ್ಮ ಸ್ಟಾರ್ ನಟನ  ಸರಳತೆ ನೋಡಿ ಖುಷಿಪಟ್ಟಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸಕ್ರೆಬೈಲ್ ಆನೆ ಶಿಬಿರಕ್ಕೆ ತೆರಳಿದ್ದ ಪುನೀತ್ ರಾಜಕುಮಾರ್ ಮಾವುತರು ಹಾಗೂ ಅವರ ಕುಟುಂಬದೊಂದಿಗೆ ಕಾಲ ಕಳೆದಿದ್ದರು.

ಸದ್ಯ ಜೆಮ್ಸ್ ಚಿತ್ರೀಕರಣ ಮುಗಿಸಿರುವ ಪುನೀತ್ ರಾಜಕುಮಾರ್ ಹೊಂಬಾಳೆ ಫಿಲ್ಸ್ಮಂ ಜೊತೆ ದ್ವಿತ್ವ ಸಿನಿಮಾಕ್ಕೆ ಸಜ್ಜಾಗುತ್ತಿದ್ದಾರೆ. ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಈ ಸಿನಿಮಾಗೆ ಆಕ್ಷ್ಯನ್ ಕಟ್ ಹೇಳಲಿದ್ದಾರೆ.

More News

You cannot copy content of this page