ಬೆಂಗಳೂರು : ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್ ಪಕ್ಷದಿಂದ ದೂರವಾಗಿದ್ದಾರೆ.ಆದರೆ ಪಕ್ಷಕ್ಕೆ ಹಾನಿಯುಂಟು ಮಾಡುವ ಹೇಳಿಕೆ ನೀಡಿಲ್ಲ.ಆದರೆ ಕೋಲಾರ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್ ಜೊತೆ ಸೇರಿ ಪಕ್ಷಕ್ಕೆ ಹಾನಿಯಾಗುವಂತೆ ಮಾತನಾಡಿದ್ದಾರೆ.ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಂದು ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜಿ.ಡಿ.ದೇವೇಗೌಡ ಹಾಗೂ ಹರೀಶ್ ಗೌಡನಿಗೆ ಟಿಕೆಟ್
ನೀಡುವ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಚೆರ್ಚಿಸಿರುವುದಾಗಿ ಹೇಳಿಕೊಂಡಿದ್ದಾರೆ.ಆದರೆ ಜೆಡಿಎಸ್ ಪಕ್ಷಕ್ಕೆ
ಹಾನಿಯುಂಟಾಗುವ ಯಾವ ಹೇಳಿಕೆಯನ್ನು ಅವರು ನೀಡಿಲ್ಲ.ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಅಗತ್ಯತೆ ಇಲ್ಲವೆಂದು
ಹೇಳುವ ಮೂಲಕ ಜಿಟಿಡಿ ಬಗ್ಗೆ ಸಾಫ್ಟ್ ಕಾರ್ನರ್ ವ್ಯಕ್ತಪಡಿಸಿದ್ದಾರೆ.
ಜಿ.ಟಿ.ದೇವೇಗೌಡ ಜೊತೆ ನಾನು ರಾಜಕೀಯ ಬಗ್ಗೆ ಚೆರ್ಚೆ ಮಾಡಿಲ್ಲ.ತಿರುಪತಿಗೆ ತೆರಳಿದ್ದಾಗ ಜಿಟಿಡಿ ದೇವಾಲಯದಲ್ಲಿ ನನ್ನನ್ನು ಭೇಟಿಯಾಗದ್ದರು.ಆಗ ನಾನು ಗಮನಿಸಿ ಅವರನ್ನು ಕರೆದು ತಮಾಷೆ ಮಾಡಿದ್ದೇನೆ.ನಿನ್ನ ದರ್ಶನ ಇಲ್ಲಿ ಆಯ್ತಲ್ಲಪ್ಪಾ ಎಂದಿದ್ದೆ, ಆಗ ನಿಮ್ಮ ದರ್ಶನ ಆಗಿದ್ದು ಸಂತೋಷವಾಯ್ತು ಎಂದು ಹೇಳಿದ್ದರು.ಅಷ್ಟಕ್ಕೆ ಮುಗಿಯಿತು ಎಂದು ತಿರುಪತಿಯಲ್ಲಾದ ಭೇಟಿಯ ನ್ನು ಸ್ವಾರಸ್ಯವಾಗಿ ತಿಳಿಸಿದರು.
ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ನಾಲ್ಕು ಅಭ್ಯರ್ಥಿಗಳು ಗೆದ್ದಿದ್ದಾರೆ.ಅಷ್ಟು ಸದಸ್ಯರು ಆಯ್ಕೆಯಾಗುತ್ತಾರೆಂ ದು ನಾನು ಭಾವಿಸಿರಲಿಲ್ಲ.ಬೆಳಗಾವಿಯಲ್ಲಿ ನಮ್ಮಸ್ಥಿತಿ ಚೆನ್ನಾಗಿ ಇರಲಿಲ್ಲ.ಅಲ್ಲಿ ಬಿಜೆಪಿ ಬಹುಮತ ಪಡೆದುಕೊಂಡಿದೆ.ಕಾಂಗ್ರೆಸ್
ಬಗ್ಗೆ ಮಾತಾನಾಡುವುದಿಲ್ಲ.ಹುಬ್ಬಳ್ಳಿ ಧಾರವಾಡದಲ್ಲಿ ಮೂರ್ನಾಲ್ಕು ಸ್ಥಾನಗಳು ಬರುವ ನಿರೀಕ್ಷೆ ಮಾಡಿದ್ದೆವು.ಆದರೆ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಕೆಲ ಕಡೆ ಪೈಪೋಟಿ ಕೊಟ್ಟಿದ್ದೇವೆ.ಮೂರು ಪಾಲಿಕೆ ಚುನಾವಣೆ ಫಲಿತಾಂಶದಿಂದ
ಪಕ್ಷದ ಕಾರ್ಯಕರ್ತರು,ಮುಖಂಡರು ಯಾರೂ ನಿರಾಶೆಯಾಗಬೇಕಿಲ್ಲ.ನಾವು ಸದಸ್ಯತ್ವ ನೋಂದಣಿ ಬಗ್ಗೆ ಗಮನ ಕೊಡುತ್ತಿದ್ದೇವೆ.ಪಕ್ಷವನ್ನ ಬಲಪಡಿಸಲಾಗುವುದು ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು,ಮಲ್ಲಿಕಾರ್ಜುನ ಖರ್ಗೆ ಅವರು ನನ್ನ ಬಳಿ ಚೆರ್ಚೆ ಮಾಡಿದದಾರೆ.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆಯೂ ಮಾತಾಡಿದ್ದಾರೆ.ಆದರೆ ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆಯದೇ ನಾವೇ ತೀರ್ಮಾನ ಮಾಡಬಾರದು ಎಂದು ಕುಮಾರಸ್ವಾಮಿಗೆ ಸೂಚಿಸಿದ್ದೇನೆ.ಬಿಜೆಪಿ ಅವರು ತಮ್ಮ ಜೊತೆ ಯಾರೂ ಚೆರ್ಚಿಸಿಲ್ಲವೆಂದು ಹೇಳುವ ಮೂಲಕ ಕಲಬುರಗಿ ಪಾಲಿಕೆ ಅಧಿಕಾರ ಚುಕ್ಕಾಣಿ ಹಿಡಿಯುವ ಬಗ್ಗೆ ಬಿಜೆಪಿ ನಾಯಕರಾರೂ ತಮ್ಮ ಜೊತೆ ಚೆರ್ಚಿಸಿಲ್ಲವೆಂದರು.