ಚಿತ್ರದುರ್ಗ : ದಾವಣಗೆರೆ ಚಿತ್ರದುರ್ಗ ತುಮಕೂರು ರೈಲು ಮಾರ್ಗಕ್ಕಾಗಿ 1801 ಕೋಟಿರೂ ಅನುದಾನ ಬಿಡುಗೆಡೆಯಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಆದಷ್ಟು ಬೇಗ ಮುಗಿಸಿ ಯೊಜನೆಗೆ ಹಣದ ಕೊರತೆ ಇಲ್ಲವೆಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಏ.ನಾರಾಯಣ ಸ್ವಾಮಿ ತಿಳಿಸಿದ್ದಾರೆ.
ಚಿತ್ರದುರ್ಗದ ಜಿಲ್ಲಾಪಂಚಾಯತಿ ಸಭಾಂಗಣದಲ್ಲಿ ನಡೆದ ದಾವಣಗೆರೆ ಚಿತ್ರದುರ್ಗ ತುಮಕೂರು ನೇರ ರೈಲು ಯೊಜನೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತುಮಕೂರು ತಾಲೂಕಿನ 18ಕಿಲೊಮೀಟರ್ ವ್ಯಾಪ್ತಿ ಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗಿದೆ. ದಾವಣಗೆರೆ ತಾಲೂಕಿನ ಬಹುಪಾಲು ಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಕಛೇರಿ ತೆರೆದು ಕಾಮಗಾರಿ ಆರಂಭಿಸಲಾಗುವುದು.ಶಿರಾ ತಾಲೂಕು ಹಿರಿಯೂರು ಚಿತ್ರದುರ್ಗ ತಾಲೂಕುಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಅವರು ಇದೇ ವೇಳೆ ತಿಳಿಸಿದರು.ಮೀಸಲು ಅರಣ್ಯ ವಿರುವ ಚಿತ್ರದುರ್ಗ ಮತ್ತು ದಾವಣಗೆರೆ ತಾಲೂಕಿನ ಕಡತಗಳನ್ನು ಆದಷ್ಟು ಬೇಗನೆ ಮಂಡಿಸುವಂತೆ ಅಧಿಕಾರಿಗಳಿಗೆ ಸೂಚಿನಿರ್ದೇಶನ ನೀಡಿದರು.

ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆ ನಾಳೆ ನಡೆಯಲಿದೆ.ಸಭೆಯಲ್ಲಿ ಯೋಜನೆಗೆ ಭೂ ಸ್ವಾಧೀನ ಮತ್ತು ಇದುವರೆಗೂ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.ಚಿತ್ರದುರ್ಗ ಜಿಲ್ಲಾಧಿಕಾರಿ ,ಅಪರ ಜಿಲ್ಲಾಧಿಕಾರಿ,ತರೀಕೆರೆ ಉಪವಿಭಾಧಿಕಾರಿಗಳು,ವಿಶೇಷ ಭೂ ಸ್ವಾಧೀನಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.