ಬೆಂಗಳೂರು : ಕನ್ನಡ ಚಲನಚಿತ್ರ ರಂಗದ ಮೇರು ನಟರಾದ ಕಲಾಕೇಸರಿ ಉದಯಕುಮಾರ್ ಅವರು 1969ರಲ್ಲಿ ಸ್ಥಾಪಿಸಿದ್ದ ಉದಯಕಲಾ ನಿಕೇತನ ಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದ ಸುಶೀಲಾದೇವಿ ಉದಯಕುಮಾರ್ ಅವರು ಇಂದು ನಿಧನರಾಗಿದ್ದಾರೆ.
ಸಂಸ್ಥೆಯ ಮೂಲಕ, ನಟನೆ, ನೃತ್ಯ ಮತ್ತು ಸಂಗೀತ ತರಬೇತಿ ಶಿಬಿರಗಳು, ಕಾರ್ಯಾಗಾರಗಳನ್ನು ಸಂಸ್ಥೆಯ ಮೂಲಕ ನಡೆಸುತ್ತ ನಿರಂತರವಾಗಿ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
ಕ್ಯಾನ್ಸರ್ ನಿಂದ ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದ ಸುಶೀಲಾದೇವಿ ಉದಯಕುಮಾರ್ ಅವರು ಮಕ್ಕಳಾದ ವರ್ಧಿನಿ ಮೂರ್ತಿ, ರೇಣುಕಾಬಾಲಿ ಉದಯಕುಮಾರ್ ಮತ್ತು ಕಲಾನಿಕೇತನದ ಸದಸ್ಯರು ಹಾಗೂ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿದ್ದಾರೆ.
ಭಗವಂತನು ಮೃತರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಮತ್ತು ಕುಟುಂಬ ವರ್ಗದವರು ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇವೆ.