ಹಾಗೆಯೇ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಬಿಡದಿ ತೋಟದ ಮನೆಯಲ್ಲಿ ಕುಟುಂಬ ಸಮೇತರಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗಣಪತಿ ವೇಷಧಾರಿ ಬಾಲಕನೊಬ್ಬ ಗಣೇಶವೇಷ ಧರಿಸಿ ಕುಮಾರಸ್ವಾಮಿಯವರ ಮನೆಗೆ ಆಗಮಿಸಿದ್ದರು. ಹಾಗೆನೇ ಅವರ ಪೂಜೆಯಲ್ಲಿ ಭಾಗಿಯಾಗಿದ್ದರು.
ಇಂದು ನಾನು ಸರಳವಾಗಿ ಪರಿಸರ ಗಣಪನಿಗೆ ಪೂಜೆ ಸಲ್ಲಿಸಿ ಹಬ್ಬ ಆಚರಿಸಿದೆನು. ನೀವೂ ಸರಳವಾಗಿ, ಪರಿಸರ ಸ್ನೇಹಿ ಮೂರ್ತಿಯನ್ನು ಸ್ಥಾಪಿಸಿ ಹಬ್ಬವನ್ನು ಆಚರಿಸಿ ಎಂದು ಮನವಿ ಮಾಡುತ್ತೇನೆ.
ಹಬ್ಬದ ಸಂಭ್ರಮದಲ್ಲಿ ಕೋವಿಡ್ ಬಗ್ಗೆ ಯಾವುದೇ ಅಲಕ್ಷ್ಯ ಬೇಡ. ಸರಕಾರದ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ ಎಂದು ಕುಮಾರಸ್ವಾಮಿ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.