ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ತೇರದಾಳ ಠಾಣಾ ಪೊಲೀಸರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಬೈಕಗಳನ್ನು ವಶಪಡಿಸಿಕೊಂಡಿದ್ದಾರೆ.

ರಬಕವಿ ಮೂಲದ ಹುಜೇಫಾ ಮತ್ತು ಜುಬೇರ ಬಂಧಿತ ಆರೋಪಿಗಳಾಗಿದ್ದು, ಇವರಿಂದ ಸುಮಾರು 5 ಲಕ್ಷ ಮೌಲ್ಯದ 10 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ರಬಕವಿ,ಮುಧೋಳ, ಮಹಾಲಿಂಗಪೂರ, ಗೋಕಾಕ, ಕಟಕೋಳ ಸೇರಿದಂತೆ ಹಲವೆಡೆ ಬೈಕ್ ಗಳ ಕಳ್ಳತನ ಮಾಡಿ, ರಾಜ್ಯದ ಬೇರೆ ಕಡೆ ಮಾರಾಟ ಮಾಡುತ್ತಿದ್ದರು ಎಂದು ತೇರದಾಳ ಪೊಲೀಸರು ತಿಳಿಸಿದ್ದಾರೆ.