ಕಾಂಗ್ರೆಸ್ ನ ಹಿರಿಯ ಮುಖಂಡ ಅಸ್ಕರ್ ಫೆರ್ನಾಂಡಿಸ್ ನಿಧನ

ಮಂಗಳೂರು: ರಾಜ್ಯ ಸಭಾ ಸದಸ್ಯ,  ಕಾಂಗ್ರೆಸ್ ನ ಹಿರಿಯ ಮುಖಂಡ ಅಸ್ಕರ್ ಫೆರ್ನಾಂಢೀಸ್ ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಹಲವಾರು ದಿನಗಳಿಂದ ಅನಾರೋಗದಿಂದ ಅವರು ಆಸ್ಪತ್ರೆ ದಾಖಲಾಗಿದ್ದರು.

ಹಲವಾರು ದಿನಗಳ ಹಿಂದೆ ಅಸ್ಕರ್ ಅವರು ಮನೆಯಲ್ಲಿಯೇ ಯೋಗ ಮಾಡುತ್ತಿದ್ದಾಗ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಅವರನ್ನ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಅವರು ಅಸುನೀಗಿದ್ದಾರೆ.

1941 ರಮಾರ್ಚ್ 27ರಂದು ಉಡುಪಿಯಲ್ಲಿ ಜನಿಸಿದ್ದ ಅಸ್ಕರ್,  ಕಾಂಗ್ರೆಸ್ ಹೈಕಮಾಂಡ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. 1980 ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಗೆದ್ದು ಸಂಸತ್ ಪ್ರವೇಶಿಸಿದ ಅಸ್ಕರ್ ಅವರು ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಕೇಂದ್ರದ ಸಚಿವರಾಗಿ ಅನೇಕವರ್ಷಗಳ ಕಾಲ ಕೆಲಸ ಮಾಡಿದ್ದರು.

More News

You cannot copy content of this page