ಯಾದಗಿರಿ : ಮಹಿಳೆಯೊಬ್ಬರನ್ನು ಬೆತ್ತಲಾಗಿಸಿ ಆಕೆಯ ಮೇಲೆ ಹಲ್ಲೆ ಮಾಡಿದ ಪೈಶಾಚಿಕ ಘಟನೆ ಸಂಬಂಧ ಯಾದಗಿರಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ನಿಂಗರಾಜ್, ಅಯ್ಯಪ್ಪ, ಶರಣು, ಭೀಮಾಶಂಕರ್ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಶಹಪುರದವರಾಗಿದ್ದು, ಅಟೋ ಚಾಲಕ, ಗ್ಯಾರೇಜ್ ನಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ
ನಿನ್ನೆ ಮಧ್ಯರಾತ್ರಿ ಯಾದಗಿರಿ- ಶಹಪೂರ ರಾಜ್ಯ ಹೆದ್ದಾರಿಯಲ್ಲಿ ಮಧ್ಯರಾತ್ರಿ ಈ ಗುಂಪು ಮಹಿಳೆಯೊಬ್ಬಳನ್ನು ಬೆತ್ತಲಾಗಿಸಿ, ಕಬ್ಬಿನ ಜಲ್ಲೆಯಿಂದ ಹಲ್ಲೆ ನಡೆಸಿದ ಅಮಾನವೀಯ ಘಟನೆ ನಡೆದಿತ್ತು.
ವಾಹನವೊಂದರ ಹೆಡ್ ಲೈಟ್ ಮತ್ತು ಮೊಬೈಲ್ ಟಾರ್ಚ್ ನಿಂದ ಆಕೆಯ ವಿಡಿಯೋವನ್ನು ಆರೋಪಿಗಳು ಚಿತ್ರಿಕರಿಸಿದ್ದರು. ಕಿರುಚಾಡಿದ್ರೆ ಪೆಟ್ಟಿಗೆಯಲ್ಲಿ ಹಾಕಿ ಜೀವಂತವಾಗಿ ಸುಡುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ತಿಳಿದುಬಂದಿದೆ.