ಬೆಂಗಳೂರು : ಕಳೆದ ವಿಧಾನ ಸಭೆ ಅಧಿವೇಶನದಲ್ಲಿ ಮತ್ತು ಸದನ ಸಮಿತಿ ಸಭೆಯಲ್ಲಿ ತೀರ್ಮಾನದಂತೆ ನೀವು ನಡೆದುಕೊಂಡಿಲ್ಲ ಎಂದು ಸದನ ಸಲಹಾ ಸಮಿತಿ ಸಭೆಯಲ್ಲಿ ಸ್ಪೀಕರ್ ವಿರುದ್ಧ ಕಾಂಗ್ರೆಸ್ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ.
ಏಕಾಏಕಿ ವಿಧೇಯಕ ಮಂಡನೆಗೆ ಅವಕಾಶ ಕೊಟ್ಟಿದ್ದನ್ನು ಸಭೆಯಲ್ಲಿ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,ಈ ಬಾರಿಯೂ ನಮ್ಮ ಹೋರಾಟ ಮುಂದುವರಿಯಲಿದೆ.ಇದಕ್ಕೂ ಮೊದಲು ಕಾಂಗ್ರೆಸ್ ನಾಯಕರ ಸಹಕಾರ ಕೋರಿದ ಆಡಳಿತ ಪಕ್ಷದ ನಾಯಕರು,ಎಲ್ಲಾ ರೀತಿಯ ಚರ್ಚೆಗೆ ಸರ್ಕಾರ ಸಿದ್ಧವಿದೆ.ವಿರೋಧ ಪಕ್ಷಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪ್ರಸಕ್ತ ವಿದ್ಯಮಾನಗಳು ಹಾಗೂ ಜ್ವಲಂತ ಸಮಸ್ಯೆಗಳು,ಜನಪರ ವಿಧೇಯಕಗಳ ಚರ್ಚೆಗೆ ಮಾತ್ರ ನಮ್ಮ ಸಹಕಾರ ನೀಡುವುದು. ಏಕಾಏಕಿ ತರಾತುರಿಯಲ್ಲಿ ವಿವಾದಿತ ವಿಧೇಯಕಗಳನ್ನು ಮಂಡಿಸಿ ಚೆರ್ಚೆಯಾಗ ದೇ ಅನುಮೋದನೆ ಪಡೆದುಕೊಳ್ಳುವುದು ಸರಿ ಯಾದ ಕ್ರಮವಲ್ಲ.ವಿಧಾನ ಸಭೆ ಅಧಿವೇಶನ ಮುಂದಿಟ್ಟು ಕೊಂಡು ಸುಗ್ರೀವಾಜ್ಞೆಗಳನ್ನು ಹೊರಡಿಸಿ ವಿಪಕ್ಷಗಳನ್ನು ಕತ್ತಲಲ್ಲಿಡು ವುದು,ಜನರಪರ ಹೆಸರಿನಲ್ಲಿ ಪದೆ ಪದೇ ನಿರ್ಣಯಗಳನ್ನು ಕೈಗೊಳ್ಳುತ್ತಿರುವುದು ಸರ್ಕಾರಗಳಿಗೆ ಶೋಭೆ ತರವುದಿಲ್ಲ ಎಂದು ಸಭೆ ಯಲ್ಲಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಮಧ್ಯ ಪ್ರವೇಶಿದ ಸ್ವೀಕರ್ ಹಿಂದಿನ ರೀತಿ ಕಾಯಿದೆಗಳ ಮಂಡನೆಯನ್ನು ಮೂರು ದಿನಗಳ ಮುಂಚಿತವಾಗಿ ತಿಳಿಸಲಾಗು ವುದು.ಅಂತೆಯೇ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚೆರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಸ್ಪೀಕರ್ ಸಲಹೆಯನ್ನು ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧ ವ್ಯಕ್ತಪಡಿಸಿವೆ.ಕಳೆದ ಹಲವಾರು ಅಧಿವೇಶನದಿಂದಲೂ ಜೆಡಿಎಸ್ ಶಾಸಕರಿಗೆ ಚೆರ್ಚೆ ಮಾಡಲು ಸಮಾಯಾವಕಾಶ ನೀಡುತ್ತಿಲ್ಲ.ನಿಲುವಳಿ ಸೂಚನೆ ಸೇರಿದಂತೆ ಪ್ರಮುಖ ವಿಚಾರಗಳ ಚೆರ್ಚೆಯ ವೇಳೆ ನಮ್ಮನ್ನು ಕಡೆಗಣಿಸಲಾಗಿದೆ.ಇದೇ ಪರಿಸ್ಥಿತಿ ಮುಂದುವರೆದರೆ ಸದಸನದ ಬಾವಿಗಿಳಿದು ಅನಿರ್ದಿಷ್ಟಾವಧಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಜೆಡಿಎಸ್ ನಾಯಕರು ನೀಡಿದ್ದಾರೆ ಎನ್ನಲಾಗಿದೆ.