ಬೆಂಗಳೂರು : ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಹೆಚ್ಚು ವಾಸ್ತವಿಕವಾಗಿರಬೇಕಾದ ಅಗತ್ಯತೆ ಎಂದು ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯು ಶಿಫಾರಸು ಮಾಡಿದ್ದು,೨೦೧೯-೨೦ನೇ ಸಾಲಿನಲ್ಲಿ ಶೇ.೧೧ರಷ್ಟು ಬಳಕೆಯಾಗದೆ ಉಳಿದಿದೆ ಎಂದು ತಿಳಿಸಿದೆ.ಇದೇ ವೇಳೆ ಜಿಎಸ್‌ಡಿಪಿ ಬೆಳವಣಿಗೆಗಿಂತ ಹೆಚ್ಚಿರುವ ಸಾರ್ವಜನಿಕ ಸಾಲದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ.
ಸದನದಲ್ಲಿ ಬುಧವಾರ ಮಾರ್ಚ್ ೨೦೨೦ಕ್ಕೆ ಕೊನೆಗೊಂಡ ರಾಜ್ಯ ಸರ್ಕಾರದ ಹಣಕಾಸಿನ ವ್ಯವ ಹಾರಗಳ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಲಾಯಿತು.ಕಳೆದ ಮೂರು ವರ್ಷಗಳ ಬಜೆಟ್ ಮತ್ತು ವೆಚ್ಚಗಳನ್ನು ಹೋಲಿಸಿದರೆ,ಸರ್ಕಾರದ ಆದಾಯ ಮತ್ತು ಬಂಡವಾಳ ಸಮರ್ಪಕವಾಗಿ ಬಳಕೆಯಾಗದಿರುವುದು ಕಂಡುಬಂದಿದೆ.ಬಜೆಟ್ ಹಂಚಿಕೆಗಳು ಪ್ರತಿ ವರ್ಷವೂ ಬಳಕೆಯಾ ಗದಿರುವುದನ್ನು ಗಮನಿಸಲಾಗಿದೆ.ಇದು ಆಯಾ ವರ್ಷಗಳಲ್ಲಿ ಯೋಜಿತ ಹಣಕಾಸಿನ ವೆಚ್ಚಗಳನ್ನು ಸಾಧಿಸದಿರುವುದನ್ನು ಸೂಚಿ ಸುತ್ತದೆ.ಹಿಂದಿನ ವರ್ಷಗಳ ವೆಚ್ಚವನ್ನು ಪರಿಗಣಿಸದೆ ಬಜೆಟ್ ಹಂಚಿಕೆಗಳನ್ನು ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿ ಸಲಾಗಿದೆ.

ಸಾಲದ ಹೊರೆ : ರಾಜ್ಯಕ್ಕೆ ಲಭ್ಯ ಇರುವ ನಿವ್ವಳ ಸಾಲದ ಹೆಚ್ಚಳವು ಮುಖ್ಯವಾಗಿ ೨೦೧೮-೧೯ನೇ ಸಾಲಿನಲ್ಲಿ ೪೦,೪೭೦ ಕೋಟಿ ರು.ನಿಂದ ೨೦೧೯-೨೦ನೇ ಸಾಲಿನಲ್ಲಿ ೪೯,೭೮೪ ಕೋಟಿ ರು.ಗೆ ಆಂತರಿಕ ಸಾಲದ ಅಡಿಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.೨೦೧೯-೨೦ನೇ ಸಾಲಿನಲ್ಲಿ ರಾಜ್ಯವು ಅಗತ್ಯಕ್ಕಿಂತ ಹೆಚ್ಚು ಸಾಲವನ್ನು ಪಡೆದುಕೊಂಡಿದೆ.ಮುಕ್ತ ಮಾರುಕಟ್ಟೆ ಸಾಲಗಳು ರಾಜ್ಯದ ಒಟ್ಟು ಹಣಕಾಸಿ ನ ಹೊಣೆಗಾರಿಕೆಯ ಶೇ.೫೯ರಷ್ಟಿದೆ.ಹೆಚ್ಚುತ್ತಿರುವ ಸಾಲವು ಆತಂಕಕ್ಕೆ ಕಾರಣವಾಗಿದೆ.

ರಾಜ್ಯದ ತೆರಿಗೆ ಆದಾಯದಲ್ಲಿ ಇಳಿಕೆಯಾಗಿರುವ ಕಾರಣ ತೆರಿಗೆಯೇತರ ಬಳಕೆದಾರರ ಶುಲ್ಕ ಗಳನ್ನು ತರ್ಕಬದ್ಧಗೊಳಿಸಬೇಕು. ತೆರಿಯಲ್ಲದ ಆದಾಯಗಳ ಮರುಪಡೆಯುವಿಕೆ ಮತ್ತು ಬಳಕೆದಾರರ ಶುಲ್ಕಗಳ ಪರಿಷ್ಕರಣೆಯ ಪರಿಣಾಮಕಾರಿ ಜಾರಿಗಾಗಿ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ಸಿಎಜಿ ವರದಿಯಲ್ಲಿ ಸಲಹೆ ನೀಡಿದೆ.

ವೈಯಕ್ತಿಕ ಠೇವಣಿ (ಪಿಡಿ)ಖಾತೆಗಳಲ್ಲಿ ದೊಡ್ಡ ಮೊತ್ತದ ಹಣವನ್ನು ಉಳಿಸಿಕೊಳ್ಳುವುದು,ನಿಷ್ಕ್ರಿಯ ವೈಯಕ್ತಿಕ ಠೇವಣಿ ಖಾತೆ ಗಳನ್ನು ಮುಚ್ಚದಿರುವುದು,ಖಾತೆಯಲ್ಲಿನ ಹಣವನ್ನು ಸಮನ್ವಯಗೊಳಿಸದಿರುವುದು ಶಾಸಕಬದ್ಧ ಹಣಕಾಸು ನಿಯಂತ್ರಣ ತತ್ವಗಳಿಗೆ ವಿರುದ್ಧವಾಗಿದೆ.ಸುಮಾರು ೨೩ ಪಿಡಿ ಖಾತೆಗಳನ್ನು ರದ್ದುಗೊಳಿಸುವುದು ಒಳ್ಳೆಯದು.೨೦೧೬-೨೦ರ ಅವಧಿಯಲ್ಲಿ ೧೦ ಸರ್ಕಾರಿ ಕಂಪನಿಗಳು/ನಿಗಮಗಳು ೨೦೨೦ರ ಮಾ.೩೧ ಕೊನೆಗೊಂಡ ವರ್ಷಕ್ಕೆ ಸರ್ಕಾರದ ಅನುದಾನದಲ್ಲಿ ಗಳಿಸಿದ ಬಡ್ಡಿಯನ್ನು (೮೦೩.೯೯ ಕೋಟಿ ರು) ಹಣಕಾಸು ಇಲಾಖೆ ನೀಡಿರುವ ಸೂಚನೆಗಳಿಗೆ ವಿರುದ್ಧವಾಗಿ ಸರ್ಕಾರಿ ಖಾತೆಗೆ ಸಂದಾಯ ಮಾಡಿಲ್ಲ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.

೨೦೧೯-೨೦ರ ಅವಧಿಯಲ್ಲಿ ಖಜಾನೆಯಿಂದ ಪಡೆದ ೨,೧೦೯ ಸಂಕ್ಷಿಪ್ತ ಸಾದಿಲ್ವಾರು ಬಿಲ್‌ಗಳಲ್ಲಿ ೪೨೬ ಬಿಲ್‌ಗಳು ಸಲ್ಲಿಕೆಯಾಗದೆ ಬಾಕಿ ಉಳಿದಿವೆ.೧೪ ಇಲಾಖೆಗಳು ೨೫ ಲಕ್ಷ ರು.ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಅನುದಾನವನ್ನು ಬಿಡುಗಡೆ ಮಾಡಿರುವ ಸಂಸ್ಥೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿಲ್ಲ ಸಿಎಜಿಯು ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.