10,265.33 ಕೋಟಿ ಮೊತ್ತದ ಪೂರಕ ಅಂದಾಜು ಮಂಡನೆ : ಬಿಬಿಎಂಪಿಗೆ 159 ಕೋಟಿ ರೂ

ಬೆಂಗಳೂರು: ಸುಮಾರು 10,265.33 ಕೋಟಿ ಮೊತ್ತದ ಪೂರಕ ಅಂದಾಜನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸದನದಲ್ಲಿ ಮಂಡಿಸಿದರು.

ಬೆಳಗಾವಿ ಲೋಕಸಭಾ ಉಪಚುನಾವಣೆಗೆ 13 ಕೋಟಿ ರೂ.,ಅನ್ನಭಾಗ್ಯ ಯೋಜನೆಗಾಗಿ 60ಕೋಟಿ ರೂ.ಹೆ ಚ್ಚುವರಿ ಅನುದಾನ, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಪ್ರಚಾರಕ್ಕೆ 41 ಲಕ್ಷ ರೂ.ವೆಚ್ಚ ಸೇರಿ 10,265.33 ಕೋಟಿ ಮೊತ್ತದ ಪೂರಕ ಅಂದಾ ಜನ್ನು ಮಂಡಿಸಲಾಯಿತು.0

ಮುಖ್ಯಮಂತ್ರಿಗಳ ಬಾಲ ಸೇವಾ ಯೋಜನೆಗೆ 1.68 ಕೋಟಿ ರೂ. ವೆಚ್ಚ ಮಾಡಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಸಿಯೋನ್ ಆಶ್ರಮ ಟ್ರಸ್ಟ್‌ಗೆ 52 ಲಕ್ಷ ರೂ. ಹೆಚ್ಚುವರಿ ಅನುದಾನ ಒದಗಿಸಲಾಗಿದೆ.ಹೈಕೋರ್ಟ್ ಆದೇಶ ದನ್ವಯ ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯಕ್ಕೆ 25 ಕೋಟಿ ರೂ. ನೀಡಲಾಗಿದೆ.

ಅತಿವೃಷ್ಟಿಯಿಂದ ಹಾನಿಗೊಳಗಾದ ಮೂಲಭೂತ ಸೌಕರ್ಯಗಳ ದುರಸ್ತಿಗೆ ಕೇಂದ್ರದ ಅನುದಾನ 62 ಕೋಟಿ ರೂ.ಹೊಂದಾಣಿಕೆ ಮಾಡಲಾಗಿದೆ.

ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾವೇರಿಯ ವಿವಿಧ ಟ್ರಸ್ಟ್, ಮಠ,ದೇವಾಲಯಗಳ ಕಾಮಗಾರಿಗಳಿಗೆ 1.18 ಕೋಟಿ ರೂ.ಹೆಚ್ಚುವರಿ ಅನುದಾನ ಒದಗಿಸಲಾಗಿದೆ.ಮುಖ್ಯಮಂತ್ರಿಗಳ ಘೋಷಿತ ಸ್ವಾತಂತ್ರ್ಯೋತ್ಸವ ಅಮೃತ ಶಾಲಾ ಸೌಲಭ್ಯ ಯೋಜನೆಗೆ 75 ಕೋಟಿ ರೂ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಕಾರ್ಯಾಚರಣೆಗೆ 159 ಕೋಟಿ ರೂ., ಬಿಬಿಎಂಪಿ ಹೊರಗುತ್ತಿಗೆ ಪೌರ ಕಾರ್ಮಿಕರ ವೇತನಕ್ಕೆ 60 ಕೋಟಿ ರೂ. ನೀರಾವರಿ ಇಲಾಖೆ ಪಡೆದಿರುವ ಬ್ಯಾಂಕ್ ಸಾಲ ತೀರಿಸಲು 5 ಕೋಟಿ ರೂ. ಒದಗಿಸಲಾಗಿದೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಿ ನಿವಾಸ ದೂರವಾಣಿ,ನೀರು,ವಿದ್ಯುತ್ ವೆಚ್ಚಕ್ಕಾಗಿ 15 ಲಕ್ಷ ರೂ., ಶಾಸಕರ ಭವನದಲ್ಲಿ ಸಿಸಿಟಿವಿಯಲ್ಲಿ ಅಳವಡಿಕೆಗೆ 1.45 ಕೋಟಿ ರೂ.,ವಿಧಾನಪರಿಷತ್ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ್ ಕವಟಗಿ ಮಠ ಅವರಿಗೆ ಹೊಸ ವಾಹನ ಖರೀದಿಗೆ 23 ಲಕ್ಷ ರೂ. ಒದಗಿಸಲಾಗಿದೆ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಗೌರವಧನ,ವೇತನೇತರ ವೆಚ್ಚಕ್ಕಾಗಿ 34 ಲಕ್ಷ ರೂ., ಕೋವಿಡ್ ಎರಡನೇ ಅಲೆ ವೇಳೆ ನ್ಯಾಯವಾದಿಗಳಿಗೆ ನೆರವು ನೀಡಲು 5 ಕೋಟಿ ರೂ.ನೀಡಿರುವ ಬಗ್ಗೆ ಪೂರಕ ಅಂದಾಜಿನಲ್ಲಿ ಉಲ್ಲೇಖಿಸಲಾಗಿದೆ. 

ಕೋವಿಡ್ ನಿರ್ವಹಣೆಗೆ ಗುತ್ತಿಗೆ ವೈದ್ಯರು,ಗ್ರಾಮೀಣ ಸೇವಾ ವೈದ್ಯರ ವೇತನ ಪಾವತಿಗೆ 106 ಕೋಟಿ ರೂ.,ಕೋವಿಡ್ ಪರೀಕ್ಷೆಗೆ ಕಿರು ಉಪಕರಣ ಖರೀದಿಸಲು 17 ಕೋಟಿ ರೂ.,ಹೆಚ್ಚುವರಿ ಅನುದಾನ,ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಮಾಸ್ಕ್,ಪಿಪಿಇ ಕಿಟ್ ಸೇರಿದಂತೆ ಇತರೆ ಉಪಕರಣ ಖರೀದಿಗೆ 222 ಕೋಟಿ ರೂ.,ವೈದ್ಯಕೀಯ ಕಾಲೇಜು,ಆಸ್ಪತ್ರೆ ಐಸಿಯು,ಗ್ಯಾಸ್ ಪೈಪ್‌ಲೈನ್,ಮೂಲ ಭೂತ ಸೌಕರ್ಯಕ್ಕೆ 78 ಕೋಟಿ ರೂ.,ಲಾಕ್‌ಡೌನ್ ಸಂತ್ರಸ್ತ ಬೀದಿ ವ್ಯಾಪಾರಿಗಳ ಸಹಾಯ ಧನಕ್ಕೆ 13 ಕೋಟಿ ರೂ., ಕನ್ನಡ ಕಾಯಕ ವರ್ಷಾಚರಣೆಗೆ 2 ಕೋಟಿ ರೂ‌, ಚಿತ್ರದುರ್ಗದಲ್ಲಿ ಬಸವಣ್ಣ ಲೋಹದ ಪ್ರತಿಮೆಗೆ 10 ಕೋಟಿ ರೂ. ನೀಡಲಾಗಿದೆ.

ಇಲಾಖಾವಾರು ಪೂರಕ ಅಂದಾಜುಗಳ ವಿವರ:

ಕೃಷಿ ಮತ್ತು ತೋಟಗಾರಿಕೆ – 2.98 ಕೋಟಿ

ಪಶು ಸಂಗೋಪನೆ ಹಾಗೂ ಮೀನುಗಾರಿಕೆ – 37.98 ಕೋಟಿ

ಮೂಲಭೂತ ಸೌಕರ್ಯ ಅಭಿವೃದ್ಧಿಗೆ – 20 ಕೋಟಿ

ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ – 2858 ಕೋಟಿ

ಸಮಾಜ ಕಲ್ಯಾಣ – 15.75 ಕೋಟಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ – 27.46 ಕೋಟಿ

ಆಹಾರ ಇಲಾಖೆ -1700 ಕೋಟಿ

ಕಂದಾಯ ಇಲಾಖೆ – 1476 ಕೋಟಿ

ವಸತಿ – 17.86 ಕೋಟಿ

ಶಿಕ್ಷಣ – 78.11 ಕೋಟಿ

ನಗರಾಭಿವೃದ್ಧಿ – 460.32 ಕೋಟಿ

ಆರೋಗ್ಯ ಇಲಾಖೆ – 2155 ಕೋಟಿ

ಕಾರ್ಮಿಕ ಇಲಾಖೆ- 440  ಕೋಟಿ

More News

You cannot copy content of this page