ಮೈಸೂರು: ನಾಳೆಯಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಮಹೋತ್ಸವಕ್ಕೆ ಒಂದು ಹಂತದ ಚಾಲನೆ ದೊರೆಯಲಿದೆ ಎಂದು ಹೇಳಬಹುದು. ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಈಗಾಗಲೇ ಗಜಪಡೆ ಬಂದು ಅರಣ್ಯಭವನದಲ್ಲಿ ನೆಲೆಸಿದೆ.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಈ ಗಜಪಡೆಗಳಿಗೆ ನಾಳೆ ಸಾಂಪ್ರದಾಯಿಕ ಸ್ವಾಗತ ಕೋರಲಾಗುತ್ತದೆ. ಮೈಸೂರಿನ ಅಧಿಕಾರಿಗಳ ತಂಡ ಈ ಸಾಂಪ್ರದಾಯಿಕ ಸ್ವಾಗತ ಕೋರಲಿದ್ದಾರೆ. ಬೆಳಗ್ಗೆ 8.10 ಕ್ಕೆ ಅರಮನೆ ಪ್ರವೇಶ ಮಾಡಲಿವೆ.
ಬಳಿಕ ನಡಿಗೆಯಲ್ಲಿ ದಸರಾ ಆನೆಗಳು ಅರಮನೆ ಅಂಗಳಕ್ಕೆ ತೆರಳಲಿವೆ. ಅಲ್ಲಿ ದಸರಾ ಗಜಪಡೆಗೆ ರಾಜವಂಶಸ್ಥರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ದಸರಾ ಆನೆಗಳಿಗೆ ವಿಶೇಷವಾಗಿ ಪೋಲಿಸ್ ಭದ್ರತೆ ನೀಡಲಾಗುತ್ತದೆ. ಇನ್ನು ನಾಳೆಯಿಂದ ಆರಮನೆ ಆವರಣ ಮತ್ತಷ್ಟು ಕಳೆಗಟ್ಟಲಿದೆ. ದಸರಾ ಸಂಬಂಧ ಒಂದೊಂದೇ ಸಿದ್ದತೆಗಳು ಆರಂಭಗೊಳ್ಳಲಿವೆ.