ಡಾ.ವಿಷ್ಣು ಅವರ ಬದುಕು ಸಾಧನೆಗಳನ್ನು ಪಠ್ಯದಲ್ಲಿ ಸೇರಿಸಲು ಶಿಕ್ಷಣ ಸಚಿವರಿಗೆ ಮನವಿ

ಬೆಂಗಳೂರು : ಡಾ. ವಿಷ್ಣುವರ್ಧನ್ ಅವರ 71ನೇ ಜನ್ಮದಿನದ ಅಂಗವಾಗಿ ಡಾ.ವಿಷ್ಣುಸೇನಾ ಸಮಿತಿಯು ಕರುನಾಡ ಯಜಮಾನ ಡಾ.ವಿಷ್ಣುವರ್ಧನ್’ ಎಂಬ  ಕಿರುಹೊತ್ತಿಗೆಯನ್ನು ಹೊರತಂದಿದೆ. ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುವ ದೃಷ್ಠಿಯಿಂದ ಈ ಕಿರುಹೊತ್ತಿಗೆಯನ್ನು ಹೊರತಂದಿದೆ. ಸದರಿ ಕೃತಿಯನ್ನು ಕನಿಷ್ಠ ಒಂದು ಲಕ್ಷ ಮಕ್ಕಳಿಗೆ ವಿತರಿಸುವ ಗುರಿಯನ್ನು ಹೊಂದಿದೆ ಸಮಿತಿ ಹೊಂದಿದೆ.

ಡಾ.ಶರಣು ಹುಲ್ಲೂರ್ ಅವರು ಬರೆದ ಕರುನಾಡ ಯಜಮಾನ ಡಾ.ವಿಷ್ಣುವರ್ಧನ ಎಂಬ ಕೃತಿಯನ್ನು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ತಮ್ಮ ಕಛೇರಿಯಲ್ಲಿ ಇಂದು ಬಿಡುಗಡೆಗೊಳಿಸಿದರು. ಸಿನಿಮಾ, ಜನಪರ ಕಾರ್ಯಗಳ ಮೂಲಕ ಡಾ.ವಿಷ್ಣುವರ್ಧನ್ ಅವರು ಯಾವತ್ತಿಗೂ ನಮ್ಮೊಂದಿಗೆ ಇರುತ್ತಾರೆ.

ಅವರ ಆದರ್ಶ ಬದುಕು, ನಾಡು, ನುಡಿಯ ಬಗೆಗಿನ ಅಭಿಮಾನ ಮತ್ತು ಕಾಳಜಿ ನಮಗೆಲ್ಲ ಮಾದರಿಯಾಗಿದೆ. ಅವರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದರೂ, ಕೊನೆಗೂ ಗೆದ್ದದ್ದು ಅವರ ಶ್ರಮ. ಹಾಗಾಗಿ ಮಕ್ಕಳಿಗೆ ಡಾ.ವಿಷ್ಣು ಬದುಕಿನ ಕುರಿತು ಪರಿಚಯ ಆಗಬೇಕಿದೆ. ಆ ಕಾರಣದಿಂದ ಡಾ.ವಿಷ್ಣು ಅವರ ಬದುಕು ಸಾಧನೆಗಳನ್ನು ಪಠ್ಯದಲ್ಲಿ ಸೇರಿಸಲು ಡಾ.ವಿಷ್ಣು ಸೇನಾ ಸಮಿತಿ ಮನವಿ ಮಾಡಿತು.

ಇದಕ್ಕೆ ಸ್ಪಂದಿಸಿದ ಸಚಿವರು “ಪಠ್ಯಪುಸ್ತಕ ಸಮಿತಿ” ಗೆ ನಿಮ್ಮ ಮನವಿಯನ್ನು ಶಿಫಾರಸ್ಸುಗೊಳಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಲೇಖಕರಾದ ಡಾ. ಶರಣು ಹುಲ್ಲೂರು, ವಿಷ್ಣು ಸೇನಾ ಸಮಿತಿಯ ಶ್ರೀನಿವಾಸ, ಎಬಿವಿಪಿ ಮುಖಂಡರಾದ ಗುರುನಾಥ ರಾಜಗೀರ ಹಾಜರಿದ್ದರು.

More News

You cannot copy content of this page