ಲಕ್ಷದ್ವೀಪದ ಕಾಂಗ್ರೆಸ್ ನಿಯೋಗ ಕೆಪಿಸಿಸಿ ಅಧ್ಯಕ್ಷರ ಭೇಟಿ – ಮಗುವಿನ ಚಿಕಿತ್ಸೆಗೆ ನೆರವಾಗಲು ಮನವಿ

ಬೆಂಗಳೂರು : ಲಕ್ಷದ್ವೀಪದ ಕಾಂಗ್ರೆಸ್ ನಿಯೋಗದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ, ಹಸುಗೂಸುವೊಂದರ ಚಿಕಿತ್ಸೆಗೆ ನೆರವಾಗಲು ಮನವಿ ಮಾಡಿತು.

ಲಕ್ಷದ್ವೀಪ ಕಾಂಗ್ರೆಸ್ ಸಮಿತಿ (ಎಲ್ಟಿಸಿಸಿ) ಅಧ್ಯಕ್ಷ ಹಾಗೂ ಮಾಜಿ ಸಂಸದ ಎಂ. ಹಮ್ದುಲ್ಲ ಸಯೀದ್ ನೇತೃತ್ವದ ನಿಯೋಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಲಕ್ಷದ್ವೀಪ ಮೂಲದವರಾಗಿದ್ದು, ಕರ್ನಾಟಕದಲ್ಲಿ ನೆಲೆಸಿರುವ ನಜರ್ ಅವರ ಎರಡು ತಿಂಗಳ ಹಸುಗೂಸುವಿನ ಚಿಕಿತ್ಸೆಗೆ ನೆರವಾಗುವಂತೆ ಮನವಿ ಸಲ್ಲಿಸಿತು.

ನಜರ್ ಅವರ ಪುತ್ರಿ ಇಶಾಲ್ ಮರ್ಯಮ್ ಮಾರಣಾಂತಿಕ ಸ್ಪೈನಲ್ ಮಸ್ಕುಲರ್ ಅಟ್ರೋಪಿ ಕಾಯಿಲೆಯಿಂದ ಬಳಲುತ್ತಿದ್ದು, ಇದರ ಚಿಕಿತ್ಸೆಗೆ ಅಗತ್ಯವಿರುವ ಇಂಜಕ್ಷನ್ ಅನ್ನು ಅಮೆರಿಕದಿಂದ ತರಿಸಬೇಕಿದೆ. ಅದಕ್ಕೆ 16 ಕೋಟಿ ರೂಪಾಯಿ ಖರ್ಚಾಗಲಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಪರಿಶೀಲಿಸಿ ಸಹಾಯ ಮಾಡಲಾಗುವುದು ಎಂದು ಶಿವಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡ ಯುಸಿಕೆ ತಂಗಳ್, ಎಲ್ಟಿಸಿಸಿ ಉಪಾಧ್ಯಕ್ಷ ಬಿ. ಹಸನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಂ, ಸಾಹುಲ್ ಹಮೀದ್, ಅಜಾಸ್ ಅಕ್ಬರ್ ನಿಯೋಗದಲ್ಲಿದ್ದರು.

More News

You cannot copy content of this page