ಬೆಂಗಳೂರು: ಬೆಂಗಳೂರು ಮಹಾನಗರಪಾಲಿಕೆ ಒಂದೆಡೆ ನಾನಾ ಯೋಜನೆಗಳಿಗೆ ರಸ್ತೆ ಪಕ್ಕದ ಮರಗಳನ್ನು ಕತ್ತರಿಸಿದ ಉದಾಹರಣೆಗಳು ಸಾಕಷ್ಠಿವೆ. ಸಾರ್ವಜನಿಕರ ಆಕ್ಷೇಪ, ಪ್ರತಿಭಟನೆಗಳು ಎಷ್ಟೇ ನಡೆದರು ಅದನ್ನು ಲೆಕ್ಕಿಸದ ಬಿಬಿಎಂಪಿ ಈಗ ಹೊಸ ಆದೇಶವನ್ನು ಹೊರಡಿಸಿದೆ. ಈ ಆದೇಶ ಈಗ ಎಲ್ಲೆಡೆ ಚರ್ಚೆಗೆಗ್ರಾಸವಾಗಿದೆ.

ಇನ್ಮುಂದೆ ರಸ್ತೆ ಪಕ್ಕದಲ್ಲಿರುವ ಮರಗಳಿಗೆ ಮೊಳೆ ಹೊಡೆಯುವುದು ಅಪರಾಧ, ಮರಗಳ ಮೇಲೆ ಜಾಹೀರಾತು ಫಲಕ ಅಳವಡಿಸಿದರೆ ಅದೂ ಶಿಕ್ಷಾರ್ಹ ಅಪರಾಧ ಎಂದು ಬಿಬಿಎಂಪಿಯ ಅರಣ್ಯ ಘಟಕ ಮಹತ್ವದ ಆದೇಶ ಹೊರಡಿಸಿದೆ.
ಈ ಆದೇಶದಲ್ಲಿ ಸ್ಪಷ್ಟವಾಗಿ ಸಾರ್ವಜನಿಕರು, ಅಂಗಡಿ ಮಾಲೀಕರು, ಜಾಹೀರಾತುದಾರರು ಹಾಗ ಕೇಬಲ್ ಆಪರೇಟರ್ ಗಳು ರಸ್ತೆ ಬದಿಯ ಮರಗಳಿಗೆ ನಾಮಫಲಕಗಳು, ಕೇಬಲ್ ಗಳನ್ನು ಅಳವಡಿಸಲು ಮೊಳೆ ಅಥವಾ ಸ್ಟಾಪ್ಲರ್ ಪಿನ್ ಗಳನ್ನು ಹೊಡೆಯುವುದು, ವಿದ್ಯುತ್ ದೀಪ ಅಳವಡಿಸುವುದು ಮತ್ತು ಕಟ್ಟಡ ನಿರ್ಮಾಣದ ಹಂತದಲ್ಲಿ ಮರಗಳಿಗೆ ಕಬ್ಬಿಣದ ರಾಡುಗಳನ್ನು ಹೊಡೆಯುವುದರಿಂದ ಮರಗಳ ಬೆಳವಣಿಗೆ ಕುಂಟಿತವಾಗಿ ಹಾನಿಯಾಗುತ್ತದೆ. ಇದು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ತಿಳಿಸಿದೆ.
ಹಾಗೂ ಇದನ್ನು ಒಂದು ವಾರದೊಳಗೆ ಅಕ್ರಮವಾಗಿ ಅಳವಡಿಸಿರುವ ಎಲ್ಲಾ ವಿಧವಾದ ಜಾಹೀರಾತು ಫಲಕಗಳನ್ನು ತೆರವೊಗಳಿಸಲು ಆದೇಶದಲ್ಲಿ ಸೂಚಿಸಿದೆ. ಆದೇಶದಲ್ಲಿ ವಿದ್ಯುತ್ ದೀಪ, ಕೇಬಲ್ ಅಳವಡಿಕೆಗೂ ಬಿಬಿಎಂಪಿ ನಿರ್ಬಂಧ ಹೇರಿದೆ.