ಬೆಂಗಳೂರು : ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕ 2021 ವಿಧಾನ ಸಭೆಯಲ್ಲಿಂದು ಮಂಡನೆ ಯಾಗಲಿದೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸದನದಲ್ಲಿ ವಿಧೇಯಕ ಮಂಡಿಸಲಿದ್ದಾರೆ.
ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್)ಪ್ರಕ್ರಿಯೆ ಸರಳೀಕರಣಗೊಳಿಸುವ ನೆಪದಲ್ಲಿ ತಂದಿರುವ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಗೆ ತಿದ್ದುಪಡಿ ತಂದು ಆಗಸ್ಟ್ 12ರಂ ದು ಅಧ್ಯಾದೇಶದ (ಸುಗ್ರೀವಾಜ್ಞೆ) ಜಾರಿಗೊಳಿಸಿದ್ದ ರಾಜ್ಯ ಸರ್ಕಾರ ಅಕ್ರಮ ಟಿಡಿಆರ್ ಸಕ್ರಮಕ್ಕೆ ರಹದಾರಿ ನೀಡಿದ್ದಾರೆಂಬ ಮಾತುಗಳು ಕೇಳಿ ಬಂದಿತ್ತು.
ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಜುಲೈ 21ರಂದು ಸಚಿವ ಸಂಪುಟ ಸಭೆ ಯಲ್ಲಿ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಅಧ್ಯಾದೇಶ 2021ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತು.ಮಹತ್ವದ ಹಾಗೂ ವಿವಾದಾತ್ಮಕ ತೀರ್ಮಾನ ವನ್ನು ಹಾಲಿ ಮುಖ್ಯಮಂತ್ರಿ,ಅಂದಿನ ಕಾನೂನು ಮತ್ತು ಗೃಹ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಸಮರ್ಥಸಿ ಕೊಂಡು ತಿದ್ದುಪಡಿಗೆ ಅನುಮೋದನೆ ಪಡೆದುಕೊಂಡಿದ್ದರು.

ತಿದ್ದುಪಡಿ ಕಾಯ್ದೆಗೆ ಸುಗ್ರೀವಾಜ್ಞೆ ಜಾರಿಯಾದ ಹಿನ್ನಲೆಯಲ್ಲಿಬಿಡಿಎ(ಬೆಂಗಳೂರು ನಗರಾಭಿ ವೃದ್ದಿ ಪ್ರಾಧಿಕಾರ)110 ಕ್ಕೂ ಹೆಚ್ಚು ಟಿಡಿಆರ್ ಗಳನ್ನು ಈಗಾಗಲೇ ವಿತರಣೆ ಮಾಡಿದೆ.ಅಂತೆಯೇ ಇನ್ನೂ 400ಕ್ಕೂ ಹೆಚ್ಚು ಟಿಡಿಆರ್ ವಿತರಣೆ ಪ್ರಕ್ರಿಯೆಗೆ ಬಿಡಿಎ ಸಿದ್ದತೆ ನಡೆಸಿದೆ.ಈ ನಡುವೆ ಹಿಂದಿನ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಮತ್ತು ಪ್ರಸ್ತುತ ಆಯುಕ್ತರಾ ಗಿರುವ ರಾಜೇಶ್ ಗೌಡರ ನಡುವೆ ಟಿಡಿಆರ್ ಗೆ ಸಹಿ ಹಾಕುವ ವಿಚಾರದಲ್ಲಿ ಜಟಾಪಟಿ,ಕಮಿಷನ್ ವಿಚಾರ ಇಬ್ಬರ ನಡುವೆ ಮಾತಿನ ಚಕಮಕಿಗೂ ಕಾರಣವಾಗಿತ್ತು ಎಂಬ ಮಾತುಗಳು ಬಿಡಿಎ ಮತ್ತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿದೆ.
ಸುಗ್ರೀವಾಜ್ಞೆಯನ್ನು ತರಾತುರಿಯಲ್ಲಿ ಅಧಿಸೂಚನೆ ಹೊರಡಿಸಿದರೂ ಸಾರ್ವಜನಿಕರಿಗೆ,ಶಾಸಕ ರಿಗೆ ಲಭ್ಯವಾಗದಂತೆ ರಹಸ್ಯವಾಗಿ ಕಾಯ್ದುಕೊಳ್ಳಲಾಗಿದೆ.ಅಧ್ಯಾದೇಶ ಜಾರಿಗೆ ಬಂದರೂ ಆಡಳಿತ ಪಕ್ಷ ಬಿಜೆಪಿ ಸೇರಿದಂತೆ ಕಾಂಗ್ರೆಸ್,ಜೆಡಿಎಸ್ ನಾಯಕರು ಯಾರೂ ಇದುವರೆಗೂ ಚಕಾರವೆತ್ತದಿರು ವುದು ಅನುಮಾನಕ್ಕೆ ಕಾರಣವಾಗಿದೆ.ಬಹುತೇಕ ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ಟಿಡಿ ಆರ್ ತಿದ್ದುಪಡಿ ಕಾಯ್ದೆ ಲಾಭ ಪಡೆಯದುಕೊಳ್ಳುವ ಉದ್ದೇಶದಿಂದ ಬಾಯ್ಬಿಡುತ್ತಿಲ್ಲ ವೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.
ಅಧ್ಯಾದೇಶ ಜಾರಿಗೊಳಿಸಿದ ಸರ್ಕಾರ ತರಾತುರಿಯಲ್ಲಿ ಬಿಡಿಎ ವ್ಯಾಪ್ತಿಯಲ್ಲಿ ಬಾಕಿ ಉಳಿದಿದ್ದ 550 ಟಿಡಿಆರ್ ಪ್ರಕರಣಗಳಲ್ಲಿ 110ಕ್ಕೆ ಮಾತ್ರ ಅಭಿವೃದ್ದಿ ಹಕ್ಕು ಪ್ರಮಾಣ ಪತ್ರ(ಟಿಡಿಆರ್ ಸಿ) ಮತ್ತು ಅಭಿವೃದ್ಧಿ ಹಕ್ಕನ್ನು(ಟಿಡಿಆರ್) ನೀಡಲು ತೆರೆ ಮರೆಯಲ್ಲಿ ಕಸರತ್ತು ನಡೆಸಿದೆ.

ಟಿಡಿಆರ್ ಕಾಯ್ದೆಗೆ ತಿದ್ದುಪಡಿಯಲ್ಲಿ ಏನಿದೆ : ’ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ 1961ರ (1963 ಕರ್ನಾಟಕ ಅಧಿನಿಯಮ-11)ಕ್ಕೆ ತಿದ್ದುಪಡಿ ಮಂಡಿಸಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದೆ.
ನೂತನ ಕಾಯ್ದೆಯನ್ನು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೆ ತಿದ್ದುಪಡಿ) ಅಧ್ಯಾದೇಶ,2021 ಆಗಸ್ಟ್ 12 ರಂದು ರಾಜ್ಯಪತ್ರ ದಲ್ಲಿ (ಗೆಜೆಟ್) ಪ್ರಕಟಿಸುವ ಮೂಲಕ ಅಧಿಸೂಚನೆಯು ರಾಜ್ಯದಲ್ಲಿ ಕಾಯ್ದೆ ಜಾರಿಗೆ ಬಂದಿದೆ.
ಈ ಅಧ್ಯಾದೇಶದಲ್ಲಿ 4 ಹೆಚ್ ಪ್ರಕರಣ ಬಳಿಕ ತಿದ್ದುಪಡಿ ಮೂಲಕ 2. 4-ಐ, 4-ಜೆ, 4-ಕೆ ಹೊಸ ಪ್ರಕರಣ ಗಳನ್ನು ಸೇರಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡತು.4-ಐ ನಲ್ಲಿ ಪಟ್ಟಣ ಮತ್ತು ಗ್ರಾಮಾಂತರ ಯೋನಾ ಅಧಿಕಾರ ಮತ್ತು ಸದಸ್ಯ ಕಾರ್ಯದರ್ಶಿಯನ್ನು ನೇಮಕಗೊಳಿಸಲು ಅವಕಾಶ ಕಲ್ಪಿಸಿದೆ.
4-ಜೆ ಪ್ರಕರಣ : ಅಡಿಯಲ್ಲಿ ಯೋಜನಾ ಪ್ರಾಧಿಕಾರ ಪ್ರಕಾರಗಳಿಗೆ ಅಧಿಕಾರ ನೀಡಲಾಗಿದೆ. ಅಂದರೆ ಭೂ ಬಳಕೆ,ಮಾಸ್ಟ್ ಪ್ಲಾನಿಂಗ್,ಯೋಜನಾ ಸ್ಕೀಂಗಳ ತಯಾರಿಕೆ,ಯೋಜನೆಯ ಚರ,ಸ್ಥಿರ ಆಸ್ತಿಗಳ ನಿರ್ವಹಣೆ, ಅರ್ಜಿಸಲು,ಧಾರಣ ಮತ್ತು ವಿಲೇ ಮಾಡಲು ಕಾಯ್ದೆಯಲ್ಲಿಅವಕಾಶ ನೀಡಿದೆ.
4-ಕೆ ಪ್ರಕರಣ : ಅಡಿಯಲ್ಲಿ ಸ್ಥಳೀಯ ಯೋಜನಾ ಪ್ರಾಧಿಕಾರವನ್ನು ಹೊರತುಪಡಿಸಿದ ಭೂ ಪ್ರದೇಶದಲ್ಲಿ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ.
ಅಧ್ಯಾದೇಶದಲ್ಲಿ ಅಭಿವೃದ್ದಿ ಹಕ್ಕು ಪ್ರಮಾಣ ಪತ್ರ (ಟಿಡಿಆರ್ ಸಿ) ಹಂಚಿಕೆ ಮತ್ತು ಟಿಡಿಆರ್ ನ್ನು ವರ್ಗಾವಣೆ ಮಾಡುವುದು, ಯೋಜನಾ ಪ್ರದೇಶ ಹೊರತುಪಡಿಸಿ ಟಿಡಿಆರ್ ಬಳಕೆ, ಸ್ಟಾಕಿಂ ಗ್,ಬ್ಯಾಂಕಿಂಗ್,ವ್ಯವಹಾರ ನಡೆಸಲು,ಮಾರುಕಟ್ಟೆ ಮೌಲ್ಯಕ್ಕೆ ಸಮನಾಗಿರುವನ್ನು ಕೈಬಿಡ ಲಾಗಿದೆ.ಅಂತೆಯೇ ಡಿಆರ್ ಸಿ(ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರ) ಮಾಲೀಕನು ವರ್ಗಾಯಿಸ ಬಹುದಾದ ಹಕ್ಕುಗಳಿಗಾಗಿ(ಟಿಡಿಆರ್) ಯಾರೇ ಟಿಡಿಆರ್ ಸಿ ವರ್ಗಾಯಿಸಿದ ಟಿಡಿಆರ್ ಗಾಗಿಯೂ ಸಹ ಟಿಡಿಆರ್ ಸಿ ಪ್ರಮಾಣ ಪತ್ರವನ್ನು ಮತ್ತೊಬ್ಬನಿಗೂ ನೀಡಲು ತಿದ್ದುಪಡಿ ಅವಕಾಶ ಕಲ್ಪಿಸಿದೆ.
ಸದನದಲ್ಲಿ ವಿಧೇಯಕ ಪರ್ಯಾಲೋಚನೆ ಕೈಗೊಂಡಾಗ ಟಿಡಿಆರ್ ಅಕ್ರಮ ಮತ್ತು ತರಾತುರಿ ಸುಗ್ರೀವಾಜ್ಞೆ ವಿಚಾರಗಳು ಬಯಲಿಗೆ ಬರುವ ಸಾಧ್ಯತೆ ಇವೆ ಎನ್ನಲಾಗಿದೆ.