ದಾಖಲೆ ಪ್ರಮಾಣದಲ್ಲಿ ಲಸಿಕೆ ವಿತರಣೆ – ಅಧಿಕ ಸಂಖ್ಯೆಯಲ್ಲಿ ಲಸಿಕೆ ಪಡೆದವರು ಮಹಿಳೆಯರು

ಬೆಂಗಳೂರು : ಕೊರೊನಾ ಲಸಿಕೆಯನ್ನು ನೀಡುವಲ್ಲಿ ಕರ್ನಾಟಕ ರಾಜ್ಯ ಯಶಸ್ಸು ಕಂಡಿದ್ದು, ನಿನ್ನೆ ಒಂದೇ ದಿನ 29.50ಲಕ್ಷ ಜನರಿಗೆ ಲಸಿಕೆಹಾಕಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಲಿಸಿಕಾ ಅಭಿಯಾನದಲ್ಲಿ  ಭಾರತ ಮಹತ್ವದ ಸಾಧನೆ ಮಾಡಿದೆ, ಒಂದೇ ದಿನ ಭಾರತದಲ್ಲಿ 2.50 ಕೋಟಿ ಲಸಿಕೆ ನೀಡಲಾಗಿದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ೩೦ ಲಕ್ಷದ ಗುರಿ ಹಮ್ಮಿಕೊಂಡಿದ್ದೇವು. 29.50 ಲಕ್ಷ  ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.

ಇಡೀ ಭಾರತದಲ್ಲಿ  ಕರ್ನಾಟಕ ರಾಜ್ಯ ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯವಾಗಿದೆ, ನಂತರದ ಸ್ಥಾನದಲ್ಲಿ ಗುಜರಾತ್, ಮಧ್ಯಪ್ರದೇಶ,  ಬಿಹಾರ ರಾಜ್ಯಗಳಿವೆ ಎಂದು ಸುಧಾಕರ್ ವಿವರಿಸಿದರು. 14 ಜಿಲ್ಲೆಗಳಲ್ಲಿ ಟಾರ್ಗೆಟ್ ಗಿಂತ ಹೆಚ್ಚು ಲಸಿಕೆ ನೀಡಲಾಗಿದೆ.

ಮೊದಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಲಿಸಿಕೆ ನೀಡಲಾಗಿದೆ. ನಂತರ ಬೆಳಗಾವಿ ಜಿಲ್ಲೆಯಲ್ಲಿ ಲಸಿಕೆ ಹೆಚ್ಚು ನೀಡಲಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು  ಮಹಿಳೆಯರು ಲಸಿಕೆ ಪಡೆದಿದ್ದಾರೆ. ರಾಜ್ಯದಲ್ಲಿ ೫ ಕೋಟಿ ಲಸಿಕೆ ಗುರಿ ತಲುಪಿದ್ದೇವೆ. ಅತಿ‌ ಕಡಿಮೆ ಲಸಿಕೆ ಹಂಚಿಕೆ‌ ಮಾಡಿದ್ದು  ಕಲ್ಬುರ್ಗಿ ಜಿಲ್ಲೆಯಲ್ಲಿ ಎಂದು ವಿವರ ನೀಡಿದರು.

ರಾಜ್ಯದಲ್ಲಿ ಇದುವರೆಗೆ ೧ ಕೋಟಿ ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಲಸಿಕೆ ವಿತರಣೆಯಲ್ಲಿ‌ ಕೊಡಗು‌ ಕೊನೆಯಲ್ಲಿದೆ. ಆಯುಷ್ಮಾನ್ ಆರೋಗ್ಯ ಕಾರ್ಡ್ ತಲುಪಿಸುತ್ತೇವೆ. ಮೂರು ತಿಂಗಳಲ್ಲಿ ಎಲ್ಲರ‌ ಮನೆ ತಲುಪಿಸುತ್ತೇವೆ. ಆರೋಗ್ಯ ಇಲಾಖೆ ಈ ಗುರಿಯನ್ನ ಇಟ್ಟುಕೊಂಡಿದೆ.

ಆಸ್ಪತ್ರೆಗಳಲ್ಲಿ ನೆಗಡಿ, ಜ್ವರ ರೋಗಿಗಳ ಹೆಚ್ಚಳವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಸೀಜನ್  ವೈರಲ್ ಪ್ಲ್ಯೂ ಹೆಚ್ಚಾಗಿದೆ ಅಷ್ಟೇ, ಎಲ್ಲಿಯೂ ಸೋಂಕು ಹೆಚ್ಚಳ ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

More News