ಬೆಂಗಳೂರು : ಎರಡೂವರೆ ವರ್ಷದ ಬಾಲಕಿ ಮೃತದೇಹಗಳೊಂದಿಗೆ ನಾಲ್ಕು ದಿನ ಕಳೆದ ಅಮಾನವೀಯ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಮಕ್ಕಳು ಮೊಮ್ಮಕ್ಕಳಿಂದ ತುಂಬಿ ತುಳಿಕಿದ್ದ ಮನೆ ಈಗ ಖಾಲಿ ಖಾಲಿ. ನೀರವ ಮೌನ.
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಶಂಕರ್ ಎನ್ನುವವರು ದೂರು ನೀಡಿದ್ದು, ತನಿಖೆ ಕೈಗೊಂಡಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ರೀತಿ ಕಂಡುಬಂದರೂ ನೇಕ ಸಂಶಯಗಳಿಗೆ ಎಡೆ ಮಾಡಿದೆ.
ಶಂಕರ್ ಅವರ ಪತ್ನಿ ಭಾರತಿ, ಅವರ ಮಕ್ಕಳಾದ ಸಿಂಚನಾ, ಸಿಂಧೂರಾಣಿ ಹಾಗೂ ಮಧುಸೂದನ್ ಮೃತಪಟ್ಟವರಾಗಿದ್ದಾರೆ. ಐವರ ಮೃತದೇಹ ಸಿಕ್ಕ ಮನೆಯಲ್ಲಿಯೇ ಸಿಂಚನಾಅವರ ಎರಡೂವರೆ ವರ್ಷದ ಬಾಲಕಿ ಪತ್ತೆಯಾಗಿದ್ದಾಳೆ. ಪ್ರಜ್ಜೆ ತಪ್ಪಿ ಉಸಿರಾಡುತ್ತಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಆರೋಗ್ಯ ಸುಧಾರಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಹ ಮಂಡ್ಯದ ಹಲ್ಲೆಗೆರೆ ನಿವಾಸಿ ಶಂಕರ್ ಅವರು ತಮ್ಮಕುಟುಂಬ ಸಮೇತರಾಗಿ ತಿಗಳರಪಾಳ್ಯದಲ್ಲಿ ವಾಸವಾಗಿದ್ದರು. ಕಳೆದ ನಾಲ್ಕು ದಿನಗಳಿಂದನಿರಂತರವಾಗಿ ಪತ್ನಿಗೆ ದೂರವಾಣಿ ಕರೆ ಮಾಡಿದ್ದರೂ ಸಹ ಸ್ವೀಕರಿಸದೇ ಇದ್ದುದ್ದರಿಂದ ಗಾಬರಿಗೊಂಡ ಅವರು ಮನೆಗೆ ಬಂದಿದ್ದಾರೆ. ಕಿಟಕಿ ಮೂಲಕ ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹಗಳು ಕಂಡುಬಂದಿದ್ದವು. ಕೊಳೆತಸ್ಥಿತಿಯಲ್ಲಿದ್ದ ಮೃತದೇಹಗಳನ್ನು ಮೋಬೈಲ್ ನಲ್ಲಿ ಚಿತ್ರೀಕರಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದರು.
ಇವರೆಲ್ಲರ ಸಾವಿಗೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳ ಪಕ್ಕ ಯಾವುದೇ ಪತ್ರ ಸಿಕ್ಕಿಲ್ಲ, ನಾಲ್ಕು ಪೊಲೀಸರ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತನಿಖೆಕೈಗೊಳ್ಳಲಾಗಿದೆ.
ಮೃತದೇಹಗಳೊಂದಿಗೆ ಪುಟ್ಟ ಮಗು
ಮನೆಯಲ್ಲಿ ನಾಲ್ಕು ದೇಹಗಳು ನೇತಾಡುತ್ತಿದ್ದವು, ಇನ್ನೊಂದು ಮಗು ಹಾಸಿಗೆ ಮೇಲೆ ಕೊನೆಯುಸಿರುವ ಎಳೆದಿತ್ತು. ಇವೆಲ್ಲದರ ನಡುವೆ ಎರಡೂವರೆ ವರ್ಷದ ಪುಟ್ಟ ಬಾಲಕಿ ನಾಲ್ಕು ದಿನಕಳೆದಿದ್ದಳು. ಆತ್ಮಹತ್ಯೆಗೂ ಮುನ್ನಾ ಮನೆ ಮುಂದಿನ ಗೇಟ್ ಮತ್ತು ಬಾಗಿಲುಗಳನ್ನು ಹಾಕಲಾಗಿತ್ತು. ಕಣ್ಣ ಮುಂದೆಯೂ ಎಲ್ಲಾವೂ ನಡೆದರೂ ಸಹ ಮಗುವಿಗೆ ಏನು ನಡೆದಿದೆ ಅನ್ನುವುದು ತಿಳಿದಿರಲಿಲ್ಲ.
ನೇತಾಡುತ್ತಿದ್ದ ತಾಯಿ ಸಿಂಚನಾ ಅವರ ಕಾಲು ಹಿಡಿದು ಮಗು ಅತ್ತಿದ್ದಳು. ಮೃತದೇಹಗಳ ಬಳಿಯೇ ಓಡಾಡಿ ನಾಲ್ಕು ಕಳೆದಿದ್ದಳು ಆ ಪುಟ್ಟ ಬಾಲಕಿ. ಕೇವಲ ಬಿಸ್ಕತ್ ತಿಂದು ನಾಲ್ಕು ದಿನ ಕಾಲ ಕಳೆದಿದ್ದಳು. ಪೊಲೀಸರು ಬಾಗಿಲು ಒಡೆದು ಒಳಗೆ ಹೋದ ತಕ್ಷಣ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮರಣೋತ್ಚಾತರ ಪರೀಕ್ಷೆ ನಡೆಸಿದ ಬಳಿಕ ಇಂದು ಸಂಜೆ ಚಾಮರಾಜಪೇಟೆಯ ಟಿಆರ್ ಮಿಲ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಶಂಕರ್ ಅವರ ಕುಟುಂಬಸ್ಥರು ತಿಳಿಸಿದ್ದಾರೆ. ..