ಬೆಂಗಳೂರು : ಅಪರಾಧಿಗಳ ಅಳತೆಯ ಪಾದದ ಗುರುತು ಸಂಗ್ರಹಿಸುವ ಬದಲು ರಕ್ತದ ಮಾದರಿ,ಡಿಎನ್‌ಎ ಮಾದರಿ,ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯ ಸ್ಕ್ಯಾನಿನ ಮಾದರಿಯನ್ನು ಪಡೆಯುವ ಸಂಬಂಧ 2021 ನೇ ಸಾಲಿನ ಬಂದಿಗಳ ಗುರುತಿಸುವಿಕೆ (ಕರ್ನಾ ಟಕ ತಿದ್ದುಪಡಿ) ವಿಧೇಯಕ,2021 ನೇ ಸಾಲಿನ ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ ಸೇರಿದಂತೆ ಮೂರು ವಿಧೇಯಕಗಳನ್ನು ಸುಧೀರ್ಘ ಚರ್ಚೆಯ ನಂತರ ವಿಧಾನಸಭೆ ಅಂಗೀಕರಿಸಿತು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು 2021 ನೇ ಸಾಲಿನ ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021ನೇ ಸಾಲಿನ ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ ಹಾಗೂ 2021 ನೇ ಸಾಲಿನ ಕರ್ನಾಟಕ ಬಂಧೀ ಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ ಅಂಗೀಕರಿಸುವಂತೆ ಸದನವನ್ನು ಕೋರಿದರು.ಆಡಳಿತ ಪಕ್ಷದ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್,ಜೆಡಿಎಸ್ ಸದಸ್ಯರು ವಿಧೇ ಯಕ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ನಂತರ ಮೂರು ವಿಧೇಯಕಗಳನ್ನು ಅಂಗೀಕರಿಸಲಾಯಿತು.

ವಿಧೇಯಕಗಳ ಕುರಿತ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಬಂಧಿಗಳ ಗುರುತಿಸುವಿಕೆ (ಕರ್ನಾಟ ಕ ತಿದ್ದುಪಡಿ) ವಿಧೇಯಕದಲ್ಲಿ ಆರೋಪಿಗಳ ಅಳತೆಯ, ಪಾದದ ಗುರುತು ಸಂಗ್ರಹಿಸುವ ಬದಲು ರಕ್ತದ ಮಾದರಿ,ಡಿಎನ್‌ಎ ಮಾದರಿ,ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯ ಸ್ಕ್ಯಾನಿನ ಮಾದರಿಯನ್ನು ಸಂಗ್ರಹಿ ಸಲಾಗುತ್ತದೆ.ಈ ಹಿಂದೆ ಒಂದು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಶಿಕ್ಷೆಗೊಳಗಾಗುವ ಅಪರಾಧಿಗಳಿಂದ ಸಂಗ್ರಹಿಸಲಾಗುತ್ತಿತ್ತು.ಇದೀಗ ಒಂದು ತಿಂಗಳು ಮತ್ತು ಅದಕ್ಕಿಂತ ಹೆಚ್ಚು ಶಿಕ್ಷೆ ಗೊಳಗಾಗುವ ಅಪರಾಧಿಗಳ ಗುರುತನ್ನು ಸಂಗ್ರಹಿಸಲಾಗುತ್ತದೆ.ಅಲ್ಲದೇ,ಈ ಕಾರ್ಯಕ್ಕೆ ಮ್ಯಾಜಿಸ್ಟ್ರೇಟ್ ಬದಲು ಪೊಲೀಸ್ ವರಿಷ್ಠಾ ಧಿಕಾರಿಗಳು(ಎಸ್ ಪಿ)ಮತ್ತು ಡಿಸಿಪಿಗಳನ್ನು ಬಳಕೆ ಮಾಡಲು ವಿಧೇಯಕದಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಹೇಳಿದರು.
ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕದನ್ವಯ ಆರೋಪಿಗಳನ್ನು ವಿಡಿಯೋ ಸಂವಾದ ಮೂಲಕ ಹಾಜರುಪಡಿಸಲು ಅನುಕೂಲವಾಗಲಿದೆ.ಕೋವಿಡ್‌ನಿಂದಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಮಾಡಲಾಗುತ್ತಿದೆ. ಮ್ಯಾಜಿಸ್ಟ್ರೇಟ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಅವಕಾಶ ಇದೆ.ಈ ತಿದ್ದುಪಡಿ ಮೂಲಕ ಸೆಷನ್ ಕೋರ್ಟ್‌ನಲ್ಲಿಯೂ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬಹುದಾಗಿದೆ.ಈ ವೇಳೆ ಎರಡು ಕಡೆಯ ವಕೀಲರು ಉಪಸ್ಥಿತರಿರುವವರು ಎಂದು ಅವರು ತಿಳಿಸಿದರು.

ಜೈಲುಗಳ ಅಭಿವೃದ್ಧಿ,ಅಧಿಕಾರಿಗಳಿಗೆ ಸೌಲಭ್ಯಗಳು,ಖೈದಿಗಳ ಸುಧಾರಣೆ,ಕೌಶಲ್ಯಾಭಿವೃದ್ಧಿಗಾಗಿ 2021ನೇ ಸಾಲಿನ ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕವನ್ನು ತರಲಾಗುತ್ತಿದೆ.ಇಲಾಖೆ ಆಧುನೀಕರಣಕ್ಕಾಗಿ ಯೋಜನೆಯನ್ನು ರೂಪಿಸು ವುದು ಮತ್ತು ಬಂಧಿಗಳು ಬಿಡುಗಡೆ ಹೊಂದಿದ ನಂತರ ಅವರ ಅಗತ್ಯತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಉದ್ಯೋಗ ಆಧಾರಿತ ತಾಂತ್ರಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು ಮಂಡಳಿಯ ಉದ್ದೇಶವಾಗಿರುತ್ತದೆ ಎಂದು ಅವರು ವಿಧಾನ ಸಭೆಗೆ ವಿವರಿಸಿದರು.

ಬೆಂಗಳೂರಲ್ಲಿ ಮಂಡಳಿಯ ಕೇಂದ್ರ ಸ್ಥಾನ ಹೊಂದಿರುತ್ತದೆ.ಗೃಹ ಸಚಿವರು ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಪಾಧ್ಯಕ್ಷರಾಗಿ ರುತ್ತಾರೆ.ಇನ್ನುಳಿದಂತೆ ಆರ್ಥಿಕ ಇಲಾಖೆಯ ಹೆಚ್ಚು ವರಿ ಮುಖ್ಯ ಕಾರ್ಯದರ್ಶಿ,ಪೊಲೀಸ್ ಮಹಾನಿರ್ದೇ ಶಕರು,ಒಳಾಡಳೀತ ಇಲಾಖೆಯ ಪ್ರಧಾನ ಕಾರ್ಯದರ್ಶಿ,ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯು ಕ್ತರು,ಆಯೋಗ್ಯ ಇಲಾಖೆಯ ಆಯುಕ್ತರು,ಕೌಶಲ್ಯಾಭಿವೃದ್ಧಿ ಇಲಾಖೆ ನಿರ್ದೇಶಕರು,ಕೃಷಿ ಇಲಾಖೆ ನಿರ್ದೇಶಕರು,ತೋಟಗಾರಿಕೆ ಇಲಾಖೆ ನಿರ್ದೇಶಕರು,ಪಶಸಂಗೋಪನೆ ಇಲಾಖೆ ನಿರ್ದೇಶಕರು ಸದಸ್ಯ ರಾಗಿರುತ್ತಾರೆ.ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾ ನಿರ್ದೇಶಕರು ಸದಸ್ಯರ ಕಾರ್ಯದರ್ಶಿ ಯಾಗಿರುತ್ತಾರೆ ಎಂದು ಅವರು ನುಡಿದರು.