ರಾಜ್ಯದಲ್ಲಿ ಕಾಂಗ್ರೆಸ್ ಎದ್ದು ಕುಳಿತಿದೆ, ಪ್ರತಿಪಕ್ಷವನ್ನು ಹಗುರವಾಗಿ ಪರಿಗಣಿಸದಿರಿ : ಮಾಜಿ ಸಿಎಂ ಯಡಿಯೂರಪ್ಪ ಎಚ್ಚರಿಕೆ

ದಾವಣಗೆರೆ: ಕಾರ್ಯಕಾರಿಣಿ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಯಡಿಯೂರಪ್ಪ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರು ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಕಾಂಗ್ರೆಸ್ ನವರೇ ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರು ನಮ್ಮ ಪಕ್ಷದ ಮುಖಂಡರನ್ನು ಸೆಳೆಯುವುದಕ್ಕೆ ಬಿಡಬಾರದು.ನಾವೆಲ್ಲರೂ ಆತ್ಮವಿಶ್ವಾ ಸದಿಂದ ಮುನ್ನಡೆಯಬೇಕಿದೆ.140 ಕ್ಷೇತ್ರಗಳಲ್ಲಿ ಜಯಿಸುವ ಮೂಲಕ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಬೇಕಿದೆ.ಇದಕ್ಕಾಗಿ ನಾವೆಲ್ಲರೂ ಪ್ರಯತ್ನಿಸೋಣ ಎಂದು ಕರೆ ನೀಡಿದರು.

ದಯವಿಟ್ಟು ಯಾರೂ ಪ್ರತಿಪಕ್ಷಗಳನ್ನು ಹಗುರವಾಗಿ ಪರಿಗಣಿಸಬೇಡಿ.ಅವರದ್ದೇ ಆದ ಲೆಕ್ಕಾಚಾರ ಹಾಗೂ ಶಕ್ತಿ ಅವರಿಗೆ ಇದೆ. ಬಿಜೆಪಿ ಮುಖಂಡರನ್ನು ಸೆಳೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.ಹಾಗಾಗಿ ನಾವೆಲ್ಲರೂ ಎಚ್ಚರಿಕೆಯಿಂದ ಮುಂದುವರಿಯ ಬೇಕಿದೆ. ದೇಗುಲಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.ಒಂದು ವೇಳೆ ಲೋಪ ದೋಷವಾಗಿದ್ದರೆ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗುವುದು.ಯಾವುದೇ ಕಾರಣಕ್ಕೂ ಎದೆಗುಂದಬೇಕಿಲ್ಲ.ಲೋಕಸಭೆ ಯಲ್ಲಿ ಗೆಲ್ಲಬ ಹುದು.ಆದ್ರೆ ರಾಜ್ಯದಲ್ಲಿ ಕಷ್ಟವಾಗುತ್ತದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಹುಮತ ಪಡೆಯುವುದು ಕಷ್ಟ ಆಗದು.ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಯಾಗಬೇಕೆಂಬ ಅಪೇಕ್ಷೆ ಜನರದ್ದು ಇದೆ.ಆದ್ರೆ ಕರ್ನಾಟಕದಲ್ಲಿ ಅಷ್ಟು ಸುಲಭವಲ್ಲ.ಈಗಾಗಲೇ ಕಾಂಗ್ರೆಸ್ ಎದ್ದು ಕುಳಿತಿದೆ. ಎಚ್ಚರಿಕೆಯಿಂದ ನಾವು ಹೆಜ್ಜೆ ಇಡಬೇಕಿದೆ.ಯಾವುದೇ ಕಾರಣ ಕ್ಕೂ ಪ್ರತಿಪಕ್ಷಗಳನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಹೇಳಿದ್ದಾರೆ.

ಈಗಾಗಲೇ ಕಲ್ಬುರ್ಗಿ, ಬೆಳಗಾವಿ,ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷ ನಿರೀಕ್ಷೆ ಮೀರಿ ಸಾಧನೆ ಮಾಡಿದೆ.ಮುಂಬರುವ ಒಂದು ತಿಂಗಳು ಪಕ್ಷ ಸಂಘಟನೆಗೆ ಆದ್ಯತೆ ಕೊಡಬೇಕಿದೆ. ನಾನೊಬ್ಬನೇ ಪ್ರವಾಸ ಹೋಗುತ್ತಿಲ್ಲ.ಎಂಪಿ, ಶಾಸಕರು,ಎಂಎಲ್ ಸಿಗಳು ಬರುತ್ತಾರೆ.ನಾಲ್ಕೈದು ತಂಡ ಗಳಾಗಿ ಪ್ರವಾಸ ಮಾಡುತ್ತೇವೆ ಎಂದು ಹೇಳಿದರು.ರಾಜ್ಯದಲ್ಲಿ ಬಹಳಷ್ಟು ಶ್ರಮ ಹಾಕಿ ಪಕ್ಷ ಬಲಿಷ್ಠ ಗೊಳಿಸಬೇಕಿದೆ. ಪ್ರತಿಬೂತ್ ನಲ್ಲಿಯೂ ಮಹಿಳೆಯರನ್ನು ಗುಂಪುಗೂಡಿಸಿ ಪಕ್ಷ ಕಟ್ಟಬೇಕಿದೆ ಎಂದರ ಲ್ಲದೇ, ಮತ್ತೊಮ್ಮೆ ಜನರಲ್ಲಿ ವಿಶ್ವಾಸ ಮೂಡಿಸಬೇಕಾದ ಕೆಲಸ ಆಗಬೇಕು ಎಂದರು.

ದಾವಣಗೆರೆಯಲ್ಲಿ ಜಿ. ಎಂ. ಸಿದ್ದೇಶ್ವರ್ ನೇತೃತ್ವದಲ್ಲಿ ಹಲವು ಸಭೆ ನಡೆಸಿದ್ದೇವೆ. ಸಮಾವೇಶ ಮಾಡಿದ್ದೇವೆ. ಆಗೆಲ್ಲಾ ಜನರೇ ವಾಹನ ಮಾಡಿಕೊಂಡು ಬರುತ್ತಿದ್ದರು. 50 ರಿಂದ 60 ಸಾವಿರ ಜನರು ಸೇರುತ್ತಿದ್ದರು. ಇಬ್ಬರೇ ಶಾಸಕರಿದ್ದಾಗ ಒಬ್ಬರೂ ರಾಜೀನಾಮೆ ಕೊಟ್ಟು ಹೋದರು. ಆದರೂ ಎದೆಗುಂದದೇ ಪಕ್ಷವನ್ನು ರಾಜ್ಯಾದ್ಯಂತ ಓಡಾಡಿ ಕಟ್ಟಿದ್ದೇವೆ. ಜನರ ಪ್ರೀತಿ ವಿಶ್ವಾಸ ಗಳಿಸಿದ ಪರಿಣಾಮ ಅಧಿಕಾರದಲ್ಲಿದ್ದೇವೆ ಎಂದು ಅವರು ಹೇಳಿದರು.

More News

You cannot copy content of this page