ಐಪಿಎಲ್: ಮೊದಲ ಪಂದ್ಯದಲ್ಲಿ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ ಆರ್ ಸಿ ಬಿ

ಬೆಂಗಳೂರು : ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ದ್ವಿತಿಯಾರ್ಧ ಯುಎಇಯಲ್ಲಿ ನಡೆಯಲಿದೆ. ಇದೇ ತಿಂಗಳ 19 ರಿಂದ ಆರಂಭವಾಗುವ ಪಂದ್ಯದಲ್ಲಿ ರಾಯಲ್ ಚಾಲಂಜರ್ಸ್ ಬೆಂಗಳೂರು ತಂಡ ಸೆಪ್ಟಂಬರ್ 20ರಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಈ ಪಂದ್ಯದಲ್ಲಿ ಆರ್ ಸಿ ಬಿ ತಂಡದ ಆಟಗಾರರು ನೀಲಿ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಂಬಂಧ ತಂಡದ ನಾಯಕ ವಿರಾಟ್ ಕೊಯ್ಲಿ ಜರ್ಸಿಯನ್ನ ಬಿಡುಗಡೆ ಮಾಡಿದರು.

ಈಸಂಬಂಧಿಸಿದ ವಿಡಿಯೋ ವೀಕ್ಷಿಸಿhttps://www.youtube.com/watch?v=LJdqEJFSum0


ಕೊರೊನಾ ಸಂದರ್ಭದಲ್ಲಿ ಸಮಾಜಕ್ಕೆ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸಿರುವ ಯೋಧರ ಗೌರವಾರ್ಥವಾಗಿ ಆರ್ ಸಿ ಬಿ ತಂಡ ನೀಲಿ ಬಣ್ಣದ ಪೋಷಾಕು ಧರಿಸಲಿದೆ. ಇದರ ಮಾರಾಟದಿಂದ ಬರುವ ಹಣವನ್ನು ಕೊರೊನಾ ವಾರಿಯರ್ಸ್ ಗೆ ಖರ್ಚು ಮಾಡಲಾಗುವುದು ಎಂದು ಆರ್ ಸಿ ಬಿ ತಿಳಿಸಿದೆ.
ಈ ಹಿಂದೆಯೂ ಕೂಡ ಆರ್ ಸಿ ಬಿ ತಂಡ ಪರಿಸರ ಸಂರಕ್ಷಣೆಯ ಅಭಿಯಾನವಾಗಿರುವ ಗೋ ಗ್ರೀನ್ ಸಂದರ್ಭದಲ್ಲಿ ಹಸಿರು ಪೋಷಾಕಿನಲ್ಲಿ ಕಾಣಿಸಿಕೊಂಡಿತ್ತು.

More News

You cannot copy content of this page