ಬೆಂಗಳೂರು : ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯವು ಒಂದೇ ದಿನದಲ್ಲಿ 27.5 ಲಕ್ಷ ಸ್ ಕೋವಿಡ್ -19 ಲಸಿಕೆಯನ್ನು ಹಾಕುವ ಮೂಲಕ ಅತಿ ಹೆಚ್ಚು ಕೋವಿಡ್ ಲಸಿಕೆಗಳನ್ನು ಹಾಕಿದ ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು.
ಚಿತ್ರರಂಗ ಅಲ್ಲದೆ ಸಾಮಾಜಿಕ ಕಾರ್ಯಕ್ರಮಗಳ ಮೂಲಕವೂ ಗುರುತಿಸಿಕೊಂಡಿರುವ ನಟಿ ಪ್ರಣೀತಾ ಕೊವೀಡ್ ಎರಡನೆ ಅಲೆಯ ವೇಳೆಯಲ್ಲೂ ಜನರಿಗೆ ನೆರವಾಗಿದ್ದಾರೆ. ತಮ್ಮ ಫೌಂಡೇಶನ್ ವತಿಯಿಂದ ಲಸಿಕಾ ಅಭಿಯಾನ ನಡೆಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈ ಕುರಿತು ಪ್ರಣೀತಾ ತಮ್ಮ ಫೌಂಡೇಶನ್ ನಿಂದ ನಡೆದ ಲಸಿಕೆ ಅಭಿಯಾನದ ವಿಡಿಯೋ ಹಂಚಿಕೊಂಡಿದ್ದಾರೆ.

ಹಲವರು ಈ ಅಭಿಯಾನದಲ್ಲಿ ಲಸಿಕೆ ಪಡೆದುಕೊಂಡಿದ್ದು, ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರು ಪ್ರಣೀತಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಭಿಮಾನಿಗಳು ಪೋಟೋ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.
ರಾಷ್ಟ್ರೋತ್ಥಾನ ಪರಿಷತ್ ಜತೆ ಕೈಜೋಡಿಸಿದ ನಟಿ ಪ್ರಣೀತಾ, ತಮ್ಮ ಪ್ರಣೀತಾ ಫೌಂಡೇಶನ್ ಸಹಯೋಗದೊಂದಿಗೆ ಜನರಿಗೆ ಉಚಿತವಾಗಿ ಲಸಿಕೆ ವಿತರಿಸಿದ್ದಾರೆ.
ಈ ಹಿಂದೆ ವಿಷ್ಣುವರ್ಧನ್ ಓದಿದ ಶಾಲೆ ಶಾಶ್ವತವಾಗಿ ಮುಚ್ಚಿಹೋಗುವ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಪ್ರಣೀತಾ ಶಾಲೆ ಉಳಿಸಲು ನೆರವಾಗಿದ್ದನ್ನು ಸ್ಮರಿಸಬಹುದು.